CAA implement: ಐವರು ಬಾಂಗ್ಲಾ ನಿರಾಶ್ರೀತರಿಗೆ ಸಿಂಧನೂರಿನಲ್ಲಿ ಪೌರತ್ವ

CAA implement: ಐವರು ಬಾಂಗ್ಲಾ ನಿರಾಶ್ರೀತರಿಗೆ ಸಿಂಧನೂರಿನಲ್ಲಿ ಪೌರತ್ವ

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಆ‌ರ್.ಎಚ್. ಕ್ಯಾಂಪ್‌ಗಳಲ್ಲಿ ವಾಸವಿರುವ ಬಾಂಗ್ಲಾದ ನಿರಾಶ್ರಿತರ ಪೈಕಿ ಐವರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (CAA implement)ಯಡಿಯಲ್ಲಿ ಭಾರತೀಯ ಪೌರತ್ವ ನೀಡಲಾಗಿದೆ.

ಹೌದು, ಇದು CAA ಕಾಯ್ದೆಯಡಿ (CAA implement) ಪೌರತ್ವ ಪಡೆದ ರಾಜ್ಯದ ಮೊದಲ ಪ್ರಕರಣವಾಗಿದೆ ಎಂದು ವರದಿಯಾಗಿದೆ.

Join Our Telegram: https://t.me/dcgkannada

ದೇಶದ ವಿವಿಧ ರಾಜ್ಯಗಳಲ್ಲಿ ಸಿಎಎ ಅಡಿ ಕೆಲವರಿಗೆ ಈಗಾಗಲೇ ಪೌರತ್ವ ನೀಡಲಾಗಿದ್ದು, ಇದೀಗ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಆರ್.ಎಚ್. ಕ್ಯಾಂಪ್‌ಗಳಲ್ಲಿರುವ ರಾಮಕೃಷ್ಣನ್ ಅಭಿಕರಿ, ಸುಕುಮಾರ ಮೊಂಡಲ್, ಬಿಪ್ರದಾಸ ಗೋಲ್ಡರ್, ಜಯಂತ ಮೊಂಡಲ್, ಅದ್ವಿತ ಅವರಿಗೆ ಕರ್ನಾಟಕ ಗೃಹ ಸಚಿವಾಲಯದ ಜನಗಣತಿ ಕಾರ್ಯಾಚರಣೆ ಹಾಗೂ ನಾಗರಿಕ ನೋಂದಣಿ ನಿರ್ದೇಶನಾಲಯದಿಂದ ಪೌರತ್ವ ನೀಡಲಾಗಿದೆ.

ನಾಲ್ಕು ದಶಕಗಳಿಂದ ಆರ್. ಎಚ್. ಕ್ಯಾಂಪ್‌ನಲ್ಲಿಯೇ ವಾಸಿಸುತ್ತಿರುವವರ ಸಂಖ್ಯೆ ಈಗ ಸುಮಾರು 25,000 ಗಡಿ ದಾಟಿದೆ. ಆ ಪೈಕಿ, 20 ಸಾವಿರ ಮಂದಿ ಬಾಂಗ್ಲಾ ನಿರಾಶ್ರಿತರಾಗಿದ್ದು, 5 ಸಾವಿರ ಮಂದಿ ಬರ್ಮಾದವರಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮೊಟ್ಟೆ ಕದ್ದ (Egg stolen) ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಅಮಾನತು.. ಡಿಸ್​ಮಿಸ್ ಮಾಡಲು ಸೂಚನೆ (ವಿಡಿಯೋ ನೋಡಿ)

25000 ವಲಸಿಗರು ಇಲ್ಲಿ ಇದ್ದಾರೆ: 1971ರಲ್ಲಿ ಬಾಂಗ್ಲಾ ಹಾಗೂ ಬರ್ಮಾ ವಿಭಜನೆ ಸಮಯದಲ್ಲಿ ಭಾರತದಲ್ಲಿ ನೆಲೆಸಲಿಚ್ಛಿಸಿದ್ದ ಕುಟುಂಬಗಳಿಗೆ ಸಿಂಧನೂರು ತಾಲೂಕಿನಲ್ಲಿ ಒಟ್ಟು 5 ಪುನರ್ವಸತಿ ಕೇಂದ್ರ ಸ್ಥಾಪಿಸಿ 932 ಕುಟುಂಬಗಳಿಗೆ ನೆಲೆ ಒದಗಿಸಲಾಗಿತ್ತು. ಆ ಪೈಕಿ, 1 ರಿಂದ 4 ಕ್ಯಾಂಪ್ ಗಳಲ್ಲಿ ಬಾಂಗ್ಲಾದೇಶದಿಂದ ವಲಸೆ ಬಂದ 727 ಕುಟುಂಬ, 5ನೇ ಕ್ಯಾಂಪ್‌ನಲ್ಲಿ ಬರ್ಮಾದಿಂದ ಬಂದ 205 ಕುಟುಂಬಗಳಿವೆ.

ನಾಲ್ಕು ದಶಕಗಳಿಂದ ಆರ್. ಎಚ್. ಕ್ಯಾಂಪ್‌ನಲ್ಲಿಯೇ ವಾಸಿಸುತ್ತಿರುವವರ ಸಂಖ್ಯೆ ಈಗ ಸುಮಾರು 25,000 ಗಡಿ ದಾಟಿದೆ. ಆ ಪೈಕಿ, 20 ಸಾವಿರ ಮಂದಿ ಬಾಂಗ್ಲಾ ನಿರಾಶ್ರಿತರಾಗಿದ್ದು, 5 ಸಾವಿರ ಮಂದಿ ಬರ್ಮಾದವರಾಗಿದ್ದಾರೆ ಎನ್ನಲಾಗಿದೆ.

Latest News

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ನಾಲತವಾಡ: ಸಮೀಪದ ಲೊಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳ ಮೂಲಕ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೇ ರಾಜ್ಯದ ಸರ್ಕಾರಿ,ಖಾಸಗಿ.ಗುತ್ತಿಗೆ,ಹೊರಗುತ್ತಿಗೆ ಕ್ಷೇತ್ರದಲ್ಲಿ ಸೇವೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ  :       ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ನ.16 ರಂದು ವಿಜಯಪುರದಲ್ಲಿ ಪದಗ್ರಹಣ : ಮುದ್ದೇಬಿಹಾಳ A.I.B.S.S ಸಂಘಕ್ಕೆ ಬಹಾದ್ದೂರ ರಾಠೋಡ ಪುನರಾಯ್ಕೆ

ಮುದ್ದೇಬಿಹಾಳ : ಬಂಜಾರಾ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು, ಸಮಾಜದ ಮಕ್ಕಳು ಶೈಕ್ಷಣಿಕ,ಔದ್ಯೋಗಿಕ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಅಸ್ಕಿ ಫೌಂಡೇಶನ್‌ದಿಂದ 50 ಸಾವಿರ ರೂ.ನೆರವು: ಕೆಬಿಜೆಎನ್‌ಎಲ್‌ದಿಂದ ರಕ್ಷಣಾಗೋಡೆ ನಿರ್ಮಾಣಕ್ಕೆ ಸಿ.ಬಿ.ಅಸ್ಕಿ ಒತ್ತಾಯ

ಮುದ್ದೇಬಿಹಾಳ : ತಂಗಡಗಿ ಇಳಿಜಾರಿನಿಂದ ಶಿರೋಳ ಗ್ರಾಮದ ಬಳಿ ಹಾಯ್ದು ಹೋಗಿರುವ ಕೆಬಿಜೆಎನ್‌ಎಲ್‌ನ ಎಡದಂಡೆ

MUDDEBIHAL :  ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

MUDDEBIHAL : ಕಾಲುವೆಯಲ್ಲಿ ಜಾರಿ ಬಿದ್ದು ಮೂವರು ಕಣ್ಮರೆ : ಮುಂದುವರೆದ ಶೋಧ ಕಾರ್ಯ

ಮುದ್ದೇಬಿಹಾಳ ತಾಲ್ಲೂಕಿನ ಶಿರೋಳ ಗ್ರಾಮದ ಸಮೀಪದಲ್ಲಿ ಕಾಲುವೆಯಲ್ಲಿ ಕಾಲು ಜಾರಿ ಮೂವರು ಬಿದ್ದಿರುವ ಘಟನೆ ಮಂಗಳವಾರ ಮದ್ಯಾಹ್ನ ನಡೆದಿದೆ. ಈ ಘಟನೆ ಹಿನ್ನೆಲೆಯಲ್ಲಿ ಅಗ್ನಿಶಾಮಕ ಠಾಣೆ ಹಾಗೂ ಪೊಲೀಸ್ ಇಲಾಖೆಯಿಂದ ಶೋಧ ಕಾರ್ಯ ಮುಂದುವರೆದಿದೆ. ಮಹೆಬೂಬ ನಗರದ ಪಕ್ಕದಲ್ಲಿರುವ ಆಶ್ರಯ ಕಾಲನಿಯಲ್ಲಿ ವಾಸವಿದ್ದ ಸುಡಗಾಡ ಸಿದ್ಧ ಜನಾಂಗದ ಇಬ್ಬರು ಯುವಕರು, ಓರ್ವ ಯುವತಿ ಕಾಲುವೆಯಲ್ಲಿ ಮುಳುಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದರಿಂದ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಬಸಮ್ಮ ಚೆನ್ನಪ್ಪ ಕೊಣ್ಣೂರ(21),

ಐದು ದಿನಗಳ ಹೋರಾಟ ಅಂತ್ಯ :                                       ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ  ಅಧಿಕೃತ ಘೋಷಣೆ

ಐದು ದಿನಗಳ ಹೋರಾಟ ಅಂತ್ಯ : ಟನ್ ಕಬ್ಬಿಗೆ 3264 – ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಅಧಿಕೃತ ಘೋಷಣೆ

ಮುದ್ದೇಬಿಹಾಳ : ಕಬ್ಬಿನ ರಿಕವರಿ ಆಧಾರದ ಮೇಲೆ ಟನ್ ಕಬ್ಬಿಗೆ 3264 ರೂ.ನೀಡುವುದಾಗಿ ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಶನಿವಾರ ಅಧಿಕೃತ ಘೋಷಣೆ ಮಾಡಿದ್ದು ಕಳೆದ ಐದು ದಿನಗಳಿಂದ ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ನಡೆಯುತ್ತಿದ್ದ ರೈತರ ಹೋರಾಟ ಅಂತ್ಯಗೊAಡಿದೆ. ತಾಲ್ಲೂಕಿನ ಅಮರಗೋಳ ಕ್ರಾಸ್ ಬಳಿ ಕಬ್ಬಿನ ವಾಹನಗಳನ್ನು ತಡೆದು ನಿಲ್ಲಿಸಿ ಕರ್ನಾಟಕ ರೈತ ಸಂಘ ಹಾಗೂ ರೈತಪರ ಸಂಘಟನೆಯ ಮುಖಂಡರು ಹೋರಾಟ ಆರಂಭಿಸಿದ್ದರು.ಇಲ್ಲಿನ