ಮುದ್ದೇಬಿಹಾಳ : ಪಟ್ಟಣದ ಎಸ್.ಎಸ್.ವಿ.ವಿ ಸಂಘದ ಅಡಿಯಲ್ಲಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದ ಇಂಟರ್‌ನ್ಯಾಶನಲ್ ಇಂಗ್ಲಿಷ್ ಮಿಡಿಯಂ ಸ್ಕೂಲ್ ಹಾಗೂ ಚಾಲೆಂಜ್ ನವೋದಯ ಕೋಚಿಂಗ್ ಕ್ಲಾಸಸ್‌ನ ಸಹಯೋಗದಲ್ಲಿ ಮಾ.29 ರಂದು ಬೆಳಗ್ಗೆ 11ಕ್ಕೆ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಆಡಳಿತಾಧಿಕಾರಿ ವೀರೇಶ ಹವಾಲ್ದಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮುದ್ದೇಬಿಹಾಳ ಪಟ್ಟಣದ ತಂಗಡಗಿ ರಸ್ತೆಯಲ್ಲಿರುವ ಎಸ್.ಎಸ್.ಶಿವಾಚಾರ್ಯ ಪಿಯು ಕಾಲೇಜಿನಲ್ಲಿ ಪರೀಕ್ಷೆ ನಡೆಯಲಿದೆ.ಪ್ರಥಮ ಬಹುಮಾನ 60 ಸಾವಿರ ರೂ.(ಶಿಷ್ಯವೇತನ,ಐದು ಸಾವಿರ ರೂ.ನಗದು ಬಹುಮಾನ),ದ್ವಿತೀಯ ಬಹುಮಾನ 50 ಸಾವಿರ ರೂ.(ಶಿಷ್ಯವೇತನ,ನಾಲ್ಕು ಸಾವಿರ ರೂ.ನಗದು ಬಹುಮಾನ), ಮೂರನೇ ಬಹುಮಾನ 40 ಸಾವಿರ ರೂ.ಶಿಷ್ಯವೇತನ ಮೂರು ಸಾವಿರ ರೂ.ನಗದು ಬಹುಮಾನ),ನಾಲ್ಕನೇ ಬಹುಮಾನ 30ಸಾವಿರ ರೂ.ಶಿಷ್ಯವೇತನ ಎರಡು ಸಾವಿರ ರೂ,ನಗದು ಬಹುಮಾನ),ಐದನೇ ಬಹುಮಾನ 20 ಸಾವಿರ ರೂ. ಒಂದು ಸಾವಿರ ರೂ.ನಗದು ಬಹುಮಾನ) ನೀಡಲಾಗುವುದು ಎಂದು ತಿಳಿಸಿದ್ದಾರೆ.
ಈ ಪರೀಕ್ಷೆಯು ನಾಲ್ಕು ಹಾಗೂ ಐದನೇ ತರಗತಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು.ಹೆಚ್ಚಿನ ವಿವರಗಳಿಗೆ ಮೊ.9632202264,9535148545 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.






