ರಾಮನಗರ : ಚನ್ನಪಟ್ಟಣ ಉಪ ಚುನಾವಣೆಗೆ (Channapattana by election) ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಆಯ್ಕೆ ಹೈಕಮಾಂಡ್ ಅಂಗಳಕ್ಕೆ ತಲುಪಿದರೂ ಹೈಡ್ರಾಮಾ ಮುಂದುವರಿದಿದೆ.
Join Our Telegram: https://t.me/dcgkannada
ಈ ಬಗ್ಗೆ ಸಿ.ಪಿ.ಯೋಗೇಶ್ವರ್ ಸ್ಫೋಟಕ ಹೇಳಿಕೆ ನೀಡಿದ್ದು, ಉಪಚುನಾವಣೆಗೆ ನನಗೆ ಟಿಕೆಟ್ ಸಿಗದಿದ್ದರೆ, ಪಕ್ಷೇತರ ಇಲ್ಲವೇ ಬಿಎಸ್ಪಿಯಿಂದ ಸ್ಪರ್ಧಿಸುವುದಾಗಿ ಹೇಳಿಕೊಂಡಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸದಿದ್ದರೂ ಅವರಿಗೆ ಬಿಎಸ್ಪಿ ಬೆಂಬಲಸಿಗುವುದು ಪಕ್ಕಾ ಆಗಿದೆ. ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆಂದು ವರದಿಯಾಗಿದೆ.
ಬಿಜೆಪಿ ಅಥವಾ ಜೆಡಿಎಸ್ ನಿಂದಲೂ ತಮಗೆ ಟಿಕೆಟ್ ಸಿಕ್ಕರೂ ಸರಿ. ಹಾಗೊಂದು ವೇಳೆ ಎರಡೂ ಪಕ್ಷದಿಂದ ಟಿಕೆಟ್ ಸಿಗದಿದ್ದರೆ ತಾವು BSP ಇಲ್ಲವೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎಂದು ಒತ್ತಿ-ಒತ್ತಿ ಸಭೆಯಲ್ಲಿ ಹೇಳಿದ್ದಾರಂತೆ ಸಿಪಿವೈ.
ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ತೆರವಾದ ಚನ್ನಪಟ್ಟಣ ವಿಧಾನಸಭಾ (Channapattana by election) ಕ್ಷೇತ್ರಕ್ಕೆ ಮಿತ್ರ ಪಕ್ಷ ಬಿಜೆಪಿಗೆ ದಳಪತಿಗಳು ಕ್ಷೇತ್ರ ಬಿಟ್ಟುಕೊಡುತ್ತಿಲ್ಲ ಎಂದು ಮನಗಂಡಿರುವ ಯೋಗೇಶ್ವರ್, ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಎನ್ನಲಾಗಿದೆ.
ಇದನ್ನೂ ಓದಿ: Green gram: ಇಂದಿನಿಂದ ಹೆಸರು ಕಾಳು ಖರೀದಿ ಆರಂಭ
ಒಟ್ಟಾರೆ, ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಪಡೆದೇ ತೀರಬೇಕು ಎಂದು ಯೋಗೇಶ್ವರ್ ಹಠಕ್ಕೆ ಬಿದ್ದಿದ್ದಾರೆ. ಕಳೆದ 15 ದಿನಗಳಲ್ಲಿ 3 ಬಾರಿ ದಿಲ್ಲಿಗೆ ಹಾರಿದ್ದಾರೆ. ಅಲ್ಲೇ ಠಿಕಾಣಿ ಹೂಡಿದ್ದು, ಚುನಾವಣೆ ದಿನಾಂಕ ಘೋಷಣೆಗೂ ಮುನ್ನವೇ ಚನ್ನಪಟ್ಟಣದ ಟಿಕೆಟ್ ಫೈಟ್ ರಣರೋಚಕ ಘಟ್ಟಕ್ಕೆ ತಲುಪಿದೆ.