ಮುದ್ದೇಬಿಹಾಳ : ತಾಲ್ಲೂಕಿನ ಬಾಲಾಜಿ ಶುಗರ‍್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ದಿ.ವೆಂಕಟೇಶಗೌಡ ಪಾಟೀಲ್ ಅವರ ಸ್ಮರಣಾರ್ಥ ಬಾಲಾಜಿ ಶುಗರ‍್ಸ್ ನ ಅಧ್ಯಕ್ಷ ಹಣಮಂತಗೌಡ ಪಾಟೀಲ್ ಹಾಗೂ ಕಾರ್ಖಾನೆಯ ನಿರ್ದೇಶಕರು ಗ್ರಾಮೀಣ ಭಾಗದ ಜನರಿಗೆ ಅನುಕೂಲ ಒದಗಿಸುವ ಕಾರ್ಯ ಕೈಗೊಂಡಿದ್ದಾರೆ.
ಇದನ್ನು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ತಾಲ್ಲೂಕಿನ ಕೇಸಾಪೂರ, ಹುನಕುಂಟಿ ಗ್ರಾಮಗಳಲ್ಲಿ ಮೃತರ ಪ್ರಥಮ ಪುಣ್ಯಸ್ಮರಣೆ ನಿಮಿತ್ಯ ಎರಡು ಗ್ರಾಮಗಳಲ್ಲಿ ಕುಡಿವ ನೀರಿನ ಘಟಕಗಳನ್ನು ಕಾರ್ಖಾನೆಯ ನಿರ್ದೇಶಕರಾದ ರಾಹುಲಗೌಡ ಪಾಟೀಲ್, ಕಾರ್ಯನಿರ್ವಾಹಕ ನಿರ್ದೇಶಕರಾದ ಅಧೀಕ್ ವಿ.ಪಾಟೀಲ್ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರಾದ ಶ್ರೀನಿವಾಸ ಅರಕೇರಿ, ಸಾರ್ವಜನಿಕ ಸಂಪರ್ಕಾಧಿಕಾರಿ ಮಾರುತಿ ಗುರವ ಹಾಗೂ ಕೇಸಾಪೂರ, ಹುನಕುಂಟಿ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಇದನ್ನೂ ಓದಿ: Accident: ಅತ್ತೆ, ಅಳಿಯ ಸೇರಿ ಮೂವರು ಸಾವು, ನಾಲ್ವರ ಸ್ಥಿತಿ ಚಿಂತಾಜನಕ