COMUL Special General Assembly is a platform for MLA's open fight

ಶಾಸಕರ ಬಹಿರಂಗ ಕಾದಾಟಕ್ಕೆ ವೇದಿಕೆಯಾದ ಕೋಮುಲ್ ವಿಶೇಷ ಸಾಮಾನ್ಯ ಸಭೆ

ಶಾಸಕರ ಬಹಿರಂಗ ಕಾದಾಟಕ್ಕೆ ವೇದಿಕೆಯಾದ ಕೋಮುಲ್ ವಿಶೇಷ ಸಾಮಾನ್ಯ ಸಭೆ

Ad
Ad

ಕೋಲಾರ: ಕೋಮುಲ್ ಕ್ಷೇತ್ರ ವಿಗಂಡಣೆಗೆ ಅನುಮೋದನೆ ಕೊಡುವ ವಿಷಯದಲ್ಲಿ ಕಾಂಗ್ರೆಸ್ ಶಾಸಕರ ನಡುವೆ ವೇದಿಕೆಯ ಮುಂಭಾಗದಲ್ಲಿಯೇ ಬಹಿರಂಗ ಗುದ್ದಾಟಕ್ಕೆ ವಿಶೇಷ ಸಾಮಾನ್ಯ ಸಭೆ ಸಾಕ್ಷಿಯಾಗಿತ್ತು ಇದೇ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ ಮಾತಿನ ಚಕಮಕಿ ನಡೆದು ಕೈ-ಕೈ ಮೀಲಾಯಿಸುವ ಹಂತಕ್ಕೆ ಹೋಗಿತ್ತು ಪೊಲೀಸರ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ತಿಳಿಯಾಯಿತು ಎಂಡಿ ಗೋಪಾಲಮೂರ್ತಿ ಅವರು ಖಾಸಗಿ ಹಾಗೂ ಪೊಲೀಸ್ ಭದ್ರತೆಯೊಂದಿಗೆ ಸ್ಥಳದಿಂದ ಜಾಗ ಖಾಲಿ ಮಾಡಿದರು.

Ad
Ad

ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಗುರುವಾರ ಬೆಳಗ್ಗೆ 11: 30 ಕ್ಕೆ ಕೋಮುಲ್ ಆಡಳಿತಾಧಿಕಾರಿ ಡಾ.ಮೈತ್ರಿ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ಹಮ್ಮಿಕೊಳ್ಳಲಾಗಿತ್ತು ಈ ಸಭೆಗೆ ಕಾಂಗ್ರೆಸ್ ಶಾಸಕರಾದ ಎಸ್.ಎನ್ ನಾರಾಯಣಸ್ವಾಮಿ, ಕೆ.ವೈ ನಂಜೇಗೌಡ ಸೇರಿದಂತೆ ಎಪಿಸಿಎಸ್ ಅಧ್ಯಕ್ಷರು ಹಾಗೂ ಡೇಲಿಗೇಟ್ಸ್ ಆಗಮಿಸಿದ್ದರು ಸಭೆಯಲ್ಲಿ ಸಭೆಯಲ್ಲಿ ಆಡಳಿತಾಧಿಕಾರಿ ಡಾ ಮೈತ್ರಿ ಸಭೆಯು ಅಜೆಂಡಾ ಪ್ರಕಾರ ಪ್ರಾರಂಭಿಸುತ್ತಿದ್ದಂತೆ ಕ್ಷೇತ್ರ ವಿಂಗಡಣೆ ವಿಚಾರದಲ್ಲಿ ಅನುಮೋದನೆಗೆ ಕೇಳಿದಾಗ ಸಭೆಯಲ್ಲಿ ಕೆಲವರ ವಿರೋಧದ ನಡುವೆಯೂ ಬಹುತೇಕರು ಅನುಮೋದನೆಯನ್ನು ಬೆಂಬಲಿಸಿದರು.

ಕೋಮುಲ್ ಚುನಾವಣೆಗೆ ಕ್ಷೇತ್ರಗಳನ್ನು ನಿಗದಿಪಡಿಸಲು ಹೈಕೋರ್ಟ್ ಸೂಚನೆಯಂತೆ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ ಮತ್ತು ಕೆ. ವೈ ನಂಜೇಗೌಡ ಅವರ ಪ್ರತಿಷ್ಠೆಯ ಕಣವಾಗಿತ್ತು ಒಬ್ಬರು ಶಾಸಕರು ತಮ್ಮ ತಮ್ಮ ಬೆಂಬಲಿಗರ ಪಡೆಯೊಂದಿಗೆ ಪ್ರತ್ಯೇಕವಾದ ಆಸನಗಳಲ್ಲಿ ಕೂತಿದ್ದರು.

ಕೋಮುಲ್ ಆಡಳಿತಾಧಿಕಾರಿ ಡಾ.ಮೈತ್ರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ ಹೈಕೋರ್ಟ್ ಆದೇಶದಂತೆ 12(5) ನಡಿ ಕ್ಷೇತ್ರ ವಿಂಗಡಣೆಗೆ ಅನುಮೋದನೆ ಸಹಕಾರ ಕೋರಿದ ಸಂದರ್ಭದಲ್ಲಿ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಹಾಗೂ ಅವರ ಬೆಂಬಲಿಗ ಎಂಪಿಸಿಎಸ್ ಅಧ್ಯಕ್ಷರು ತೀವ್ರ ವಿರೋಧ ವ್ಯಕ್ತಪಡಿಸಿದರ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯ ಮಾಡಿದ್ದು ಸಭೆಯಲ್ಲಿ ಅಧ್ಯಕ್ಷರುಗಳು ಕೈಎತ್ತುವುದರ ಮೂಲಕ ಮ ಮೂರನೇ ಎರಡರಷ್ಟು ಮತಗಳು ಪರವಾಗಿ ಬಿದ್ದಿವೆ ಎಂದು ಆಡಳಿತಾಧಿಕಾರಿ ಡಾ.ಮೈತ್ರಿ ಪ್ರಕಟಿಸಿದರು.

ಸಭೆಯಲ್ಲಿ ಅನುಮೋದನೆಗೆ ಒಪ್ಪಿಗೆ ಸಿಕ್ಕಿದ ಕೂಡಲೇ ಶಾಸಕ ಕೆ.ವೈ ನಂಜೇಗೌಡ ಬೆಂಬಲಿಗರು ಖುಷಿಯಿಂದ ಜೈಕಾರಗಳೊಂದಿಗೆ ಹೊರನಡೆದರು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಬೆಂಬಲಿಗರು ಆಡಳಿತಾಧಿಕಾರಿ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಅಲ್ಲದೇ ಕೋಮುಲ್ ಎಂಡಿ ಗೋಪಾಲಮೂರ್ತಿ ಹಾಗೂ ಮಾರುಕಟ್ಟೆ ವಿಭಾಗದ ಅಧಿಕಾರಿ ಚೇತನ್ ಅವರ ಮೇಲೆ ಹಲ್ಲೆ ಮಾಡಿದರು ಹಲ್ಲೆಯ ನಂತರ ಇತರೆ ಅಧಿಕಾರಿಗಳು ಎಂಡಿಯನ್ನು ಕೊಠಡಿಯಲ್ಲಿ ಇರಿಸಿ ರಕ್ಷಣೆ ಮಾಡಿದರು.

ಕೋಲಾರ ಜಿಲ್ಲೆಯ ಹಾಲು ಉತ್ಪಾದಕರ ಹಿತದೃಷ್ಟಿಯಿಂದ ಕ್ಷೇತ್ರ ವಿಂಗಡಣೆಗೆ ಡೇರಿ ಅಧ್ಯಕ್ಷರ ಸಹಕಾರದಿಂದ ಅನುಮೋದನೆ ಸಿಕ್ಕಿದೆ, ಆದರೆ ಕೆಲವರು ದುರದ್ದೇಶದಿಂದ ವಿಶೇಷ ಸಾಮಾನ್ಯ ಸಭೆಯಲ್ಲಿ ಗೊಂದಲ ಸೃಷ್ಟಿ ಮಾಡಿ ಕೋರಂ ಕೊರತೆ ಇಲ್ಲದಂತೆ ಮಾಡಲು ಮುಂದಾಗಿದ್ದರು ಇದು ಕಾನೂನು ವ್ಯಾಪ್ತಿಯಲ್ಲಿ ನಡೆದಿದೆ ಚುನಾವಣೆ ನಡೆಸುವ ಅಧಿಕಾರ ಅಧಿಕಾರಿಗಳಿಗಿದೆ ಮುಂದಿನ ಮೂರು ತಿಂಗಳೊಳಗೆ ಹೊಸ ಆಡಳಿತ ಮಂಡಳಿ ಬರಲಿದೆ.

ಕೋಮುಲ್ ವಿಶೇಷ ಸಾಮಾನ್ಯ ಸಭೆಯು ಅಧಿಕಾರಿಗಳಿಗೆ ಒತ್ತಡ ತಂದು ಕೆಲವರು ಏಕಪಕ್ಷೀಯವಾಗಿ ನಡೆದುಕೊಂಡಿದ್ದಾರೆ ಇವತ್ತು ಅನುಮೋದನೆ ಸರಿಯಾದ ರೀತಿಯಲ್ಲಿ ನಡೆದಿಲ್ಲ ಸಭೆಯ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಜೊತೆಗೆ ಕೋರ್ಟ್ ಮೊರೆ ಹೋಗಲಾಗುತ್ತದೆ.
ಶಾಸಕ ಎಸ್.ಎನ್ ನಾರಾಯಣಸ್ವಾಮಿ.

Latest News

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ರೇಣುಕಾಚಾರ್ಯ ಸಿದ್ಧಾಂತ ಅನುಕರಣೀಯ: ಪಿಡಿಒ ಎಸ್ ಜಿ ಪರಸನ್ನವರ

ಕುಳಗೇರಿ ಕ್ರಾಸ್: ಜಗದ್ಗುರು ರೇಣುಕಾಚಾರ್ಯರು ಬೋಧಿಸಿರುವ ತತ್ವ ಸಿದ್ಧಾಂತಗಳು ಸಮಾಜದ ಸುಧಾರಣೆಗೆ ಸೋಪಾನವಾಗಿವೆ. ಇಂಥ

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಮೃತ ಕುರಿಗಾಹಿ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಐದು ಲಕ್ಷ ಮಂಜೂರು

ಬಾದಾಮಿ: ಕಳೆದ ಮಾ.9 ರಂದು ತಾಲೂಕಿನ ಉಗಲವಾಟ ಗ್ರಾಮದ ಕುರಿಗಳ್ಳರಿಂದ ಕೊಲೆಯಾದ ಮೃತ ಕುರಿಗಾಹಿ

ರೇಣುಕಾಚಾರ್ಯರ ಜಯಂತಿ ಆಚರಣೆ

ರೇಣುಕಾಚಾರ್ಯರ ಜಯಂತಿ ಆಚರಣೆ

ಮುದ್ದೇಬಿಹಾಳ : ತಾಲ್ಲೂಕು ಆಡಳಿತದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಬುಧವಾರ ರೇಣುಕಾಚಾರ್ಯರ ಜಯಂತಿ

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ಸಿ ಎಲ್ ಪಿ ಸಭೆಯಲ್ಲಿ ಸಚಿವರ ಜಟಾಪಟಿ? ಬಣ ರಾಜಕೀಯ ಸಂಘರ್ಷ ಮುನ್ನೆಲೆಗೆ!

ರಾಯಚೂರು, ಮಾ.11- ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಸಂಘರ್ಷ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ನಿನ್ನೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

10 ವಿದ್ಯಾರ್ಥಿಗಳು ಉಚಿತ ಶಿಕ್ಷಣಕ್ಕೆ ಆಯ್ಕೆ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದ ಬಡ ಪ್ರತಿಭಾನ್ವಿತ ಮಕ್ಕಳಿದ್ದರೆ ಗ್ರಾಮದ ಹಿರಿಯರ ಶಿಫಾರಸ್ಸಿನೊಂದಿಗೆ ಅಂತಹ ಮಕ್ಕಳಿಗೆ ಸಂಸ್ಥೆಯಲ್ಲಿ ಉಚಿತ ಶಿಕ್ಷಣ ನೀಡಲು ಬದ್ಧ ಎಂದು ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ಹೇಳಿದರು. ತಾಲ್ಲೂಕಿನ ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಕೊಪ್ಪ ನೇತೃತ್ವದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚೆನ್ನಬಸವಶ್ರೀ ಸ್ಕಾಲರ್‌ಶಿಪ್ ಎಕ್ಸಾಂನಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು.ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕಷ್ಟಪಟ್ಟು

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ರಾಜಸ್ವ ಸಂಗ್ರಹಿಸಲು ವರ್ತಕರು, ಅಧಿಕಾರಿಗಳ ಮೇಲೆ ಹೊರೆ: ಬಿ.ಎನ್.ಹೂಗಾರ

ಮುದ್ದೇಬಿಹಾಳ : 2024-25ನೇ ಸಾಲಿಗೆ ದೇಶದಲ್ಲಿ ಅತಿ ಹೆಚ್ಚು ಜಿ.ಎಸ್.ಟಿ ತೆರಿಗೆ ಸಂಗ್ರಹಿಸುವ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು 2 ನೇ ಸ್ಥಾನದಲ್ಲಿದೆ. 2024-25ರ ಪರಿಷ್ಕೃತ ಅಂದಾಜಿನಲ್ಲಿ ವಾಣಿಜ್ಯ ತೆರಿಗೆಯಿಂದ ಒಟ್ಟು 1,05,000 ಕೋಟಿ ರೂ.ಗಳ ರಾಜಸ್ವವನ್ನು ನಿರೀಕ್ಷಿಸಲಾಗಿದ್ದು ಇದು ವರ್ತಕರಿಗೆ ಹಾಗೂ ಅಧಿಕಾರಿಗಳಿಗೆ ಒತ್ತಡ ವಾಗಬಹುದು ಎಂದು ತೆರಿಗೆ ಸಲಹೆಗಾರ ಬಿ.ಎನ್.ಹೂಗಾರ ತಿಳಿಸಿದ್ದಾರೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ತೆರಿಗೆ ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500