Consumer Accident Insurance Payment by bank itself

ಗ್ರಾಹಕರ ಅಪಘಾತ ವಿಮೆ ಬ್ಯಾಂಕಿನಿಂದಲೇ ಪಾವತಿ..ಗ್ರಾಹಕರ ಮೇಲೆ ಹೆಚ್ಚಿನ ಬಡ್ಡಿ ಹೊರೆ ಹಾಕಲು ಸಿದ್ಧರಿಲ್ಲ: ಓಸ್ವಾಲ್

ಗ್ರಾಹಕರ ಅಪಘಾತ ವಿಮೆ ಬ್ಯಾಂಕಿನಿಂದಲೇ ಪಾವತಿ..ಗ್ರಾಹಕರ ಮೇಲೆ ಹೆಚ್ಚಿನ ಬಡ್ಡಿ ಹೊರೆ ಹಾಕಲು ಸಿದ್ಧರಿಲ್ಲ: ಓಸ್ವಾಲ್

ಮುದ್ದೇಬಿಹಾಳ : ಗ್ರಾಹಕರಿಗೆ ಬಡ್ಡಿ ಹೊರೆ ಆಗಬಾರದು ಎಂಬ ಕಾರಣಕ್ಕೆ ಲಾಭಾಂಶದ ಪ್ರಮಾಣ ಹೆಚ್ಚಿಸಿಲ್ಲ ಎಂದು ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಹೇಳಿದರು.

Join Our Telegram: https://t.me/dcgkannada

ಪಟ್ಟಣದ ಏಪಿಎಂಸಿಯಲ್ಲಿರುವ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ 65ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕು 395.65 ಲಕ್ಷ ರೂ.ಆದಾಯ ಗಳಿಸಿದ್ದು ಅದರಲ್ಲಿ ನಿವ್ವಳ 96.87 ಲಕ್ಷ ರೂ.ಲಾಭ ಗಳಿಸಿದೆ.ಪ್ರಸಕ್ತ ಸಾಲಿನಲ್ಲಿ ಎಲ್ಲ ಸದಸ್ಯರಿಗೆ ಅಪಘಾತ ವಿಮೆ ಸೌಲಭ್ಯ ಕಲ್ಪಿಸುತ್ತಿದ್ದು ಅದಕ್ಕೆ ತಗಲುವ ವಿಮೆ ಕಂತಿನ ಹಣವನ್ನು ಪ್ರತಿ ವರ್ಷ ಬ್ಯಾಂಕಿನಿಂದಲೇ ಭರಣಾ ಮಾಡಲು ಆಡಳಿತ ಮಂಡಳಿ ತೀರ್ಮಾನಿಸಿದೆ.

9268 ಸದಸ್ಯರಿಗೆ ವಿಮೆ ಪಾವತಿಸಲಾಗುತ್ತಿದೆ. ಅಪಘಾತವಾಗಿ ಅಂಗವೈಕಲ್ಯ ಉಂಟಾದರೆ ಒಂದು ಲಕ್ಷ,ಮೃತಪಟ್ಟರೆ ಎರಡು ಲಕ್ಷ ರೂ.ಮೃತರ ಅವಲಂಬಿತರಿಗೆ ವಿಮಾ ಕಂಪನಿಯಿಂದ ನೀಡಲಾಗುತ್ತದೆ ಎಂದು ತಿಳಿಸಿದರು.

ಗ್ರಾಹಕರಾದ ಬಸನಗೌಡ ಪಾಟೀಲ್, ಬಾಬು ಬಿರಾದಾರ, ಶರಣಯ್ಯ ಹಿರೇಮಠ, ಬಿ.ಎಸ್.ಮೇಟಿ ಮಾತನಾಡಿ, ಬ್ಯಾಂಕಿನಿಂದ ಕಳೆದ ಮೂರು ವರ್ಷಗಳಿಂದ ಗ್ರಾಹಕರಿಗೆ ಲಾಭಾಂಶದ ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದ್ದರೂ ಅದನ್ನು ಈಡೇರಿಸಿಲ್ಲ. ಡಿವ್ಹಿಡೆಂಡ್ ಹೆಚ್ಚಿಸಿ ಎಂದು ಒತ್ತಾಯಿಸಿದರು.ಇದಕ್ಕೆ ಉತ್ತರಿಸಿದ ಅಧ್ಯಕ್ಷ ಓಸ್ವಾಲ್,ನಮ್ಮ ಬ್ಯಾಂಕ್ ಗ್ರಾಹಕರು ಪಡೆದುಕೊಳ್ಳುವ ಸಾಲದ ಮೇಲೆ ಬಡ್ಡಿದರ ಹೆಚ್ಚಳ ಮಾಡಿ ಅದರಿಂದ ಬಂದ ಆದಾಯವನ್ನು ಲಾಭಾಂಶದ ರೂಪದಲ್ಲಿ ಹೆಚ್ಚಿಸಿಕೊಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.

ಹಿರಿಯ ನಿರ್ದೇಶಕರಾದ ಎಸ್.ಎಸ್.ಮಾಲಗತ್ತಿ, ವೆಂಕನಗೌಡ ಪಾಟೀಲ್ ಮಾತನಾಡಿದರು.

ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ, ಉಪಾಧ್ಯಕ್ಷ ಸಿ.ಎಲ್.ಬಿರಾದಾರ, ನಿರ್ದೇಶಕರಾದ ರಾಜಶೇಖರ ಕರಡ್ಡಿ, ಪ್ರಭುದೇವ ಕಲ್ಬುರ್ಗಿ, ರುದ್ರಪ್ಪ ಕಡಿ, ಜಿ.ಬಿ.ಪಾಟೀಲ್, ಶ್ರೀದೇವಿ ಮದರಿ, ವೃತ್ತಿಪರ ನಿರ್ದೇಶಕ ಸುನೀಲ ಇಲ್ಲೂರ ಇದ್ದರು.

ಇದನ್ನೂ ಓದಿ: ಚುನಾವಣೆ ನಡೆದ ನಾಲ್ಕರಲ್ಲಿ ಮೂರು ಸ್ಥಾನ BJP ಪಾಲು.. ಆದ್ರೂ PLD ಬ್ಯಾಂಕ್ ಗದ್ದುಗೆ ಕಾಂಗ್ರೆಸ್ ಪಾಲು..! ( ವಿಡಿಯೋ ನೋಡಿ)

ವೃತ್ತಿಪರ ನಿರ್ದೇಶಕ ನಾಗಭೂಷಣ ನಾವದಗಿ ಸ್ವಾಗತಿಸಿದರು. ಎಂ.ಕೆ.ರಾಯಗೊಂಡ ಸುಮಾ ನಾಡಗೌಡ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

Latest News

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: ಸರ್ಕಾರದಿಂದ ಆಧಾರ್ ಕಾರ್ಡ್ ಹೊಂದಿದವರಿಗೆ 5 ಹೊಸ ರೂಲ್ಸ್ ಜಾರಿ ಮಾಡಿದೆ. ಈ ಐದೂ ನಿಮಯ ಪಾಲಿಸದಿದ್ದರೆ ದಂಡ ಗ್ಯಾರಂಟಿ! ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆಯಾಗಿ ಗುರುತಿಸಲಾಗಿದೆ. ಇದು ನಮ್ಮ ಗುರುತಿನ ಕಡ್ಡಾಯ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳು ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. Join Our Telegram: https://t.me/dcgkannada

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ. ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ