ಮಂಗಳೂರು: ಪ್ರೀತಿ ನಿರಾಕರಿಸಿದ ಅಪ್ರಾಪ್ತ ವಿದ್ಯಾರ್ಥಿನಿಗೆ ಅದೇ ಕಾಲೇಜಿನಲ್ಲಿ ಓದುತ್ತಿರುವ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಹರಿತವಾದ ಬ್ರೆಡ್‌ನಿಂದ ಕೊಯ್ದ ಪ್ರಕರಣ ಜಿಲ್ಲೆಯ ಪುತ್ತೂರಿನ ಕೊಂಬೆಟ್ಟುವಿ ನಲ್ಲಿರುವ ಪದವಿಪೂರ್ವ ಕಾಲೇಜು ಬಳಿ ಮಂಗಳವಾರ ಸಂಭವಿಸಿದೆ.
Join Our telegram: https://t.me/dcgkannada
ಪಿಯುಸಿ ವಿದ್ಯಾರ್ಥಿ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ವಿದ್ಯಾರ್ಥಿನಿ ಕಾಮರ್ಸ್ ವಿದ್ಯಾರ್ಥಿನಿಯಾಗಿದ್ದಾಳೆ. ಇಬ್ಬರು ಭಿನ್ನ ಕೋಮಿಗೆ ಸೇರಿದವರಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲಕಾಲ ಆತಂಕದ ಪರಿಸ್ಥಿತಿ ತಲೆ ದೋರಿತ್ತು ಎಂದು ತಿಳಿದು ಬಂದಿದೆ.
ಪೊಲೀಸರು ಆಗಮಿಸಿ, ಪರಿಸ್ಥಿತಿ ತಿಳಿಗೊಳಿಸಿದರು. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿ ನೀಡಿದ ಹೇಳಿಕೆಯಂತೆ ಪುತ್ತೂರು ಠಾಣೆ ಯಲ್ಲಿ ದೂರು ದಾಖಲಾಗಿದೆ.
‘ಮಂಗಳವಾರ ಬೆಳಗ್ಗೆ ಸುಮಾರು 8.45ಕ್ಕೆ ವಿದ್ಯಾರ್ಥಿ, ನನ್ನನ್ನು ನನ್ನನ್ನು ಫಾಲೋ ಮಾಡಿಕೊಂಡು ಬಂದ. ನನ್ನ ಬಳಿ ಬಂದು ನೀನು ಹೇಮಲತಾನ ಗೆಳತಿ ಅಲ್ವಾ?, ನಾನು ಹೇಮಲತಾಳನ್ನು ಲವ್ ಮಾಡಲ್ಲ, ನಿನ್ನ ಲವ್ ಮಾಡೇನೆ ಅಂದ. ನಾನು ಆತನ ಲವ್ ನಿರಾಕರಿಸಿದೆ. ಈ ವೇಳೆ, ಆತ ನನ್ನ ಕೈಗೆ ಇರಿದ. ನಾನು ಕೂಗಿಕೊಳ್ಳುತ್ತಿದ್ದಂತೆ ಓಡಿ ಹೋದ. ಯಾವುದರಲ್ಲಿ ಇರಿದ ಎಂಬುದು ಗೊತ್ತಾಗಿಲ್ಲ, ಬಹುಶಃ ಬೇಡ್‌ನಲ್ಲಿ ಇರಬಹುದು’ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇದನ್ನೂ ಓದಿ: Rain update: ಮಳೆಗೆ ನಿನ್ನೆ ಓರ್ವ ಬಲಿ.. ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
ಈ ಮಧ್ಯೆ, ಇದೊಂದು ಕೋಮುಗಲಭೆ ಸೃಷ್ಟಿಸುವ ಪೂರ್ವ ನಿಯೋಜಿತ ಕೃತ್ಯದಂತೆ ಕಂಡು ಬರುತ್ತಿದ್ದು, ಪ್ರಕರಣದ ಸತ್ಯಾಸತ್ಯತೆ ಕುರಿತು ತನಿಖೆಯಾಗಬೇಕು ಎಂದು ಹಿಂದೂ ಸಂಘಟನೆಗಳ ನಾಯಕರು ಒತ್ತಾಯಿಸಿದ್ದಾರೆ.