ಕಾಗವಾಡ: ಹೆತ್ತ ಮಗನನ್ನೇ ಕೊಂದ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕಾಗವಾಡ ತಾಲೂಕಿನ ಉಗಾರ ಖುರ್ದನ ಫರೀದಖಾನವಾಡಿ ತೋಟದಲ್ಲಿ ನಡೆದಿದೆ.
ಸಾತ್ವಿಕ್ ರಾಹುಲ ಕಟಗೇರಿ ಮೃತ ಬಾಲಕ. ಈತನ ತಾಯಿ ಭಾಗ್ಯಶ್ರೀ ಶನಿವಾರ ಬೆಳಗ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ವರ್ಷಗಳ ಹಿಂದೆ ರಾಹುಲ್ ಕಟಗೇರಿ ಭಾಗ್ಯಶ್ರೀ ಎಂಬುವರನ್ನು ಮದುವೆಯಾಗಿದ್ದು, ದಂಪತಿಗಳು ಫರೀದಖಾನವಾಡಿಯ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಪ್ರಕರಣ ಕುರಿತು ಮೃತ ಬಾಲಕನ ತಂದೆ ರಾಹುಲ ಕಟಗೇರಿ ಕಾಗವಾಡ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತಾಯಿ ಭಾಗ್ಯಶ್ರೀ ಕಟಗೇ ರಿಯನ್ನು ವಶಕ್ಕೆ ಪಡೆಯಲಾಗಿದೆ.