ಬೆಳಗಾವಿ: ಪತ್ನಿಯ ಶೀಲ ಶಂಕಿಸಿದ ಪೊಲೀಸ್ ಪೇದೆಯೊಬ್ಬರು ಕಳೆದ ಎರಡು ತಿಂಗಳಿನಿಂದ ಶೆಡ್‌ನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ ಸಂಭವಿಸಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಹಾಗೂ ಗ್ಯಾಂಗ್ ಶೆಡ್‌ನಲ್ಲಿ ಕೂಡಿ ಹಾಕಿ ಥಳಿಸಿ ಕೊಂದಿರುವ ಘಟನೆ ದೇಶಾದ್ಯಂತ ಸುದ್ದಿಯಲ್ಲಿರುವಾಗಲೇ ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಪೊಲೀಸ್ ಪದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿ ಯಲ್ಲಪ್ಪ ಅಗಸೆ ಪತ್ನಿ ಪ್ರತಿಮಾಳ ಶೀಲ ಶಂಕಿಸಿ ಶೆಡ್‌ನಲ್ಲಿ ಕೂಡಿಟ್ಟು ಹಲ್ಲೆ ಮಾಡಿ ಬರೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.
10 ವರ್ಷಗಳ ಹಿಂದೆ ಯಲ್ಲಪ್ಪ ಹಾಗೂ ಪ್ರತಿಮಾ ಮದುವೆಯಾಗಿದ್ದರು. ಸದ್ಯ ಯಲ್ಲಪ್ಪ ವಿಜಯಪುರ ತಾಲೂಕಿನ ತಿಕೋಟಾದಲ್ಲಿ ಪೊಲೀಸ್ ಪೇದೆಯಾಗಿ ಕೆಲಸ ಮಾಡುತ್ತಿದ್ದಾನೆ. ಇವರಿಗೆ ಮೂವರು ಮಕ್ಕಳಿದ್ದರೂ ಪತ್ನಿಯ ಶೀಲದ ಮೇಲೆ ಶಂಕೆ ಮಾಡಿ ಶೆಡ್ನಲ್ಲಿ ಕೂಡಿ ಹಾಕಿ ಮನಸೋ ಇಚ್ಚೆ ಹಲ್ಲೆ ಮಾಡಿ ಬರೆ ಹಾಕಿದ್ದಾನೆ.
ಈ ಬಗ್ಗೆ ಮಾತನಾಡಿರುವ ಮಹಿಳೆ, ‘ನನ್ನ ತವರು ಮನೆಯವರು ನನ್ನನ್ನು ನೋಡಲು ಬಂದಾಗ ಅವರಿಗೂ ಸಹ ನನ್ನ ಪತಿ ಬೆದರಿಕೆ ಹಾಕಿದ್ದಾರೆ. ನಿಮ್ಮ ಮಗಳು ಬೇರೆಯವನೊಂದಿಗೆ ಓಡಿ ಹೋಗಿದ್ದಾಳೆ ಎಂದು ದೂರು ಕೊಟ್ಟು ನಿಮ್ಮ ಮೇಲೆಯೇ ಕೇಸ್ ದಾಖಲಿಸುತ್ತೇನೆ ಎಂದು ಬೇದರಿಕೆ ಹಾಕಿದ್ದಾನೆ’ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: Gold Theft: ತಂಗಿ ಮನೆಯಲ್ಲಿ ಚಿನ್ನ ಕದ್ದ ಅಕ್ಕ!
ಶೆಡ್‌ನಲ್ಲಿ ಯಾರೂ ಇಲ್ಲದ ವೇಳೆ ತಪ್ಪಿಸಿಕೊಂಡು ಬಂದು ಬೆಳಗಾವಿಯ ಮಹಿಳಾ ಸಂಘದ ಸಹಾಯದಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನಾಳೆ ಬೆಳಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರನ್ನು ಭೇಟಿಯಾಗಿ ನನ್ನ ಪತಿಯ ಮೇಲೆ ದೂರು ಕೊಡುವುದಾಗಿ ಪ್ರತಿಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.