ಮುದ್ದೇಬಿಹಾಳ: ತಾಲ್ಲೂಕಿನ ತಂಗಡಗಿ ಗ್ರಾಮದಲ್ಲಿ ಈಚೇಗೆ ಸಿಡಿಲು ಬಡಿದು ಮೃತಪಟ್ಟ ಮಲ್ಲಪ್ಪ ಗುರಶಾಂತಪ್ಪ ತಾಳಿಕೋಟಿ ಅವರ ಕುಟುಂಬದವರಿಗೆ ಶಾಸಕ ಸಿ.ಎಸ್.ನಾಡಗೌಡ ಸರ್ಕಾರದಿಂದ ಮಂಜೂರಾದ ಐದು ಲಕ್ಷ ರೂ.ಪರಿಹಾರ ಧನದ ಚೆಕ್‌ನ್ನು ಸೋಮವಾರ ವಿತರಿಸಿದರು.
ತಹಸೀಲ್ದಾರ್ ಬಲರಾಮ ಕಟ್ಟೀಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಮುಖಂಡರಾದ ರಾಜುಗೌಡ ಕೊಂಗಿ, ಶ್ರೀಶೈಲ ಮರೋಳ ಮೊದಲಾದವರು ಇದ್ದರು.