ಮುದ್ದೇಬಿಹಾಳ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.26 ರಂದು ರಾಜ್ಯವ್ಯಾಪಿ ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ತಾಲ್ಲೂಕು ಘಟಕದ ಅಧ್ಯಕ್ಷ ಮನೋಜ ರಾಠೋಡ, ಪ್ರಧಾನ ಕಾರ್ಯದರ್ಶಿ ರಿಯಾಜ್ ನಾಯ್ಕೋಡಿ ತಿಳಿಸಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಸೋಮವಾರ ಹೋರಾಟದಲ್ಲಿ ಭಾಗಿಯಾಗುವ ಕುರಿತು ತಹಶೀಲ್ದಾರ್‌ಗೆ ಬರೆದ ಮನವಿಯನ್ನು ಶಿರಸ್ತೇದಾರ್‌ರಿಗೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಷನ್‌ಗಳ ಮೂಲಕ ಆಗುತ್ತಿರುವ ಸಮಸ್ಯೆಗಳನ್ನು ಸರಿಪಡಿಸಬೇಕು. ಸುಮಾರು 17ಕ್ಕೂ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು ಇವುಗಳ ನಿರ್ವಹಣೆಗೆ ಅವಶ್ಯಕತೆಯಾಗಿರುವ ಮೊಬೈಲ್, ಲ್ಯಾಪಟಾಪ್ , ಇಂಟರನೆಟ್, ಸ್ಕ್ಯಾನರ್ ಒದಗಿಸದೇ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿರುವುದರಿಂದ ರಾಜ್ಯದಲ್ಲಿ 17ಕ್ಕೂ ಅಧಿಕ ನೌಕರರು ಒತ್ತಡ ತಾಳದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಲ್ಲದೇ ಸಕಾಲಕ್ಕೆ ಕೆಲಸಗಳು ಆಗದೇ ಇರುವುದಕ್ಕೆ ಸಾರ್ವಜನಿಕರಿಂದ ಮಾರಣಾಂತಿಕ ಹಲ್ಲೆಯಂತಹ ಘಟನೆಗಳು ನಡೆದಿವೆ.ಗ್ರಾಮ ಆಡಳಿತಾಧಿಕಾರಿಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಮೂಲಸೌರ‍್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಇನ್ನುಳಿದಂತೆ ರಾಜ್ಯದ ಗ್ರಾಮ ಆಡಳಿತಾಧಿಕಾರಿಗಳನ್ನು ಗ್ರಾಮ ಆಡಳಿತ ಅಧಿಕಾರಿ ಗ್ರೇಡ್-1 ಹುದ್ದೆಯನ್ನಾಗಿ ಪದೋನ್ನತಿ ನೀಡಬೇಕು. ಅಂತರ್ ಜಿಲ್ಲಾ ಪತಿ-ಪತ್ನಿ ಪ್ರಕರಣಗಳಿಗೆ ಚಾಲನೆ ನೀಡಬೇಕು.
ಈಗಾಗಲೇ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ಮಾಡಬೇಕು ಎಂಬುದು ಸೇರಿದಂತೆ ಮೂಲಭೂತ ಸೌರ‍್ಯಗಳನ್ನು ಕಲ್ಪಿಸುವ ಕಾರ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿ ಸೆ.26 ರಂದು ಅನಿರ್ದಿಷ್ಟಾವಧಿಯ ಧರಣಿ ನಡೆಸುವುದಾಗಿ ತಿಳಿಸಿದರು.ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ರಾಜ್ಯ ಸಂಘದ ನಿರ್ಣಯದಂತೆ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದರು.
ಮನವಿಯನ್ನು ಶಿರಸ್ತೇದಾರ ಎಂ.ಎಸ್.ಬಾಗೇವಾಡಿ ಸ್ವೀಕರಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳಾದ ಡಿ.ಎಸ್.ಗುರಿಕಾರ, ಎಸ್.ಬಿ.ಕುಂಬಾರ, ಎ.ಎಸ್.ಬಾಬಾನಗರ, ಸಚಿನ ಗೌಡರ, ಆರ್.ಎಸ್.ಹೊಸೂರ, ಸಿ.ಬಿ.ಚವ್ಹಾಣ, ಕೆ.ಎಚ್.ನದಾಫ, ಎಸ್.ಎಂ.ಚವ್ಹಾಣ, ಕೆ.ಎಂ.ಅಲಗೂರ, ಹರ್ಷಿತಗೌಡ ಎಚ್., ಬಿ.ಕೆ.ನಂದಗಾವ, ಆರತಿ ಬಳವಾರ, ಎಂ.ಆರ್.ಇಬ್ರಾಹಿಂಪೂರ, ಅನುಪಮಾ ಪೂಜಾರ, ಗ್ರಾಮ ಸಹಾಯಕರ ಸಂಘದ ಅಧ್ಯಕ್ಷ ತಳವಾರ ಮೊದಲಾವರು ಇದ್ದರು.

ಇದನ್ನೂ ಓದಿ: ಬಾಲಾಜಿ ಶುಗರ‍್ಸ್ ಎಂ.ಡಿ. ವೆಂಕಟೇಶಗೌಡರ ಸ್ಮರಣೆ: ಕೇಸಾಪುರ, ಹುನಕುಂಟಿಯಲ್ಲಿ ಶುದ್ಧ ಕುಡಿವ ನೀರಿನ ಘಟಕ ಉದ್ಘಾಟನೆ