ಮುದ್ದೇಬಿಹಾಳ : ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಹೊಸ ತಳಿಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿರುವ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಸಂಶೋಧನಾ ಪರಿಷತ್‌ನ ನಾಮನಿರ್ದೇಶಿತ ಸದಸ್ಯರಾಗಿ ಮುದ್ದೇಬಿಹಾಳ ತಾಲ್ಲೂಕು ಬಸರಕೋಡದ ಪ್ರಗತಿಪರ ರೈತ, ಪಿ.ಕೆ.ಪಿಎಸ್ ಅಧ್ಯಕ್ಷರಾದ ಹೇಮರೆಡ್ಡಿ ಬ.ಮೇಟಿ ನೇಮಕಗೊಳಿಸಿ ಧಾರವಾಡ ಯುಎಎಸ್‌ನ ರಜಿಸ್ಟಾçರ್ ಜಯಲಕ್ಷಿö್ಮÃ ಆದೇಶಿಸಿದ್ದಾರೆ.
ಈಚೇಗೆ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ್ ಅವರು ಬಸರಕೋಡ ಭಾಗಕ್ಕೆ ಆಗಮಿಸಿದ ಸಮಯದಲ್ಲಿ ಮೇಟಿ ಅವರು ಕೈಗೊಂಡಿರುವ ಕೃಷಿ ಕ್ಷೇತ್ರದಲ್ಲಿನ ಸಾಧನೆಯ ಬಗ್ಗೆ ತಿಳಿದುಕೊಂಡಿದ್ದರು.ಅವರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಎರಡು ವರ್ಷಗಳ ಅವಧಿಗೆ ನೇಮಿಸಲಾಗಿದೆ. ಈ ಕೃಷಿ ಪರಿಷತ್‌ನಲ್ಲಿ ಬೆಂಗಳೂರು, ಧಾರವಾಡ, ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಸುಮಾರು 45ಕ್ಕೂ ಹೆಚ್ಚು ಅಧಿಕಾರಿಗಳು,ವಿಜ್ಞಾನಿಗಳು, ಸಂಶೋಧಕರು ಇದ್ದಾರೆ.ರಾಜ್ಯದ ಇಬ್ಬರು ಪ್ರಗತಿಪರ ರೈತರಲ್ಲಿ ಮೇಟಿ ಒಬ್ಬರೂ ಇರುವುದು ವಿಶೇಷವಾಗಿದೆ.ಕೃಷಿ ಕ್ಷೇತ್ರದಲ್ಲಿ ಬೆಳೆಗಳು, ಮಣ್ಣು, ನೀರು , ಪೋಷಕಾಂಶಗಳ ಕುರಿತು ಸಲಹೆ ಸೂಚನೆ ನೀಡುವುದು ಈ ಪರಿಷತ್‌ನ ಕಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಗತಿಪರ ರೈತ ಹೇಮರಡ್ಡಿ ಮೇಟಿ ಅವರು ಬಸರಕೋಡದಲ್ಲಿ 36 ಎಕರೆ ಪ್ರದೇಶದಲ್ಲಿ ದ್ರಾಕ್ಷಿ, 32 ಎಕರೆ ಪ್ರದೇಶದಲ್ಲಿ ಪೇರು, 20ಎಕರೆ ಪ್ರದೇಶದಲ್ಲಿ ಬಾಳೆ, 22 ಎಕರೆ ಪ್ರದೇಶದಲ್ಲಿ ನುಗ್ಗೆ, 10 ಎಕರೆ ಪ್ರದೇಶದಲ್ಲಿ ಮಾವು, 50-60 ಗೀರ್ ತಳಿಯ ಆಕಳುಗಳನ್ನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿದ್ದಾರೆ.