ಆಲಿಕಲ್ಲು ಮಳೆಯಿಂದ ಬೆಳೆ‌ ಹಾನಿ: 3 ದಿನದೊಳಗೆ‌ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ‌

ಆಲಿಕಲ್ಲು ಮಳೆಯಿಂದ ಬೆಳೆ‌ ಹಾನಿ: 3 ದಿನದೊಳಗೆ‌ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ‌

ವಿಜಯಪುರ : ಇತ್ತೀಚಿಗೆ ಬೀಸಿದ‌‌ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕೃಷಿ, ತೋಟಗಾರಿಕಾ ಬೆಳೆ ಹಾನಿಗೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ಕೈಗೊಂಡು‌‌ ಮೂರು‌ ದಿನದೊಳಗಾಗಿ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ‌ ಕೆ. ಅವರು‌ ಅಧಿಕಾರಿಗಳಿಗೆ‌ ಸೂಚಿಸಿದರು.‌

ಕೃಷಿ, ತೋಟಗಾರಿಕೆ ಹಾಗೂ‌ ಕಂದಾಯ ಇಲಾಖೆ‌ ಅಧಿಕಾರಿಗಳು ಹಾಗೂ ಬೆಳೆ ವಿಮಾ ಕಂಪನಿಯ ಅಧಿಕಾರಿಗಳೊಂದಿಗೆ‌ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಈ ಸೂಚನೆ‌ ನೀಡಿದರು.

ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಹಾನಿಗೊಳಗಾದ ಕ್ಷೇತ್ರಗಳಿಗೆ ಭೇಟಿ ನೀಡಿ ನಿಖರವಾದ ಸಮೀಕ್ಷೆ ಕೈಗೊಂಡು 3 ದಿನಗೊಳಗಾಗಿ ಜಂಟಿ ಸಮೀಕ್ಷೆ ನಡೆಸಿ ವರದಿಯನ್ನು ನೀಡಬೇಕು ಎಂದು ಸೂಚಿಸಿದರು.

ಇತ್ತೀಚಿನ ದಿನಗಳಲ್ಲಿ ಬಿದ್ದ ಮಳೆ, ಗಾಳಿ ಹಾಗೂ ಆಲಿಕಲ್ಲು ಮಳೆಯಿಂದಾಗಿ ಕೃಷಿ ಬೆಳೆ ಹಾನಿಗೊಳಗಾದ ರೈತರು ಬೆಳೆ ವಿಮೆ ಮಾಡಿಸಿದ್ದರೆ ಅಂತಹ ರೈತರು ಮುಂದಿನ 3 ದಿನಗೊಳಗಾಗಿ (ಮುಂದಿನ 72 ಗಂಟೆಗೂಳಗಾಗಿ) ಓರಿಯಂಟಲ್ ಜನರಲ್ ಇನ್ಸೂರನ್ಸ್ ಕಂಪನಿ Toll Free Number 1800 425 6678 ಗೆ ಕರೆ ಮಾಡಿ ವೈಯಕ್ತಿಕ ಸ್ಥಳ ನಿರ್ದಿಷ್ಟ ವಿಕೋಪಗಳ (ILLA) ಕುರಿತು ದೂರು ದಾಖಲಿಸಬಹುದಾಗಿದೆ ಎಂದು‌ ಜಿಲ್ಲಾಧಿಕಾರಿಗಳು ಸೂಚಿಸಿದರು.

2025-26 ನೇ ಸಾಲಿನ RWBCIS ಯೋಜನೆಯಡಿ ದ್ರಾಕ್ಷಿ, ದಾಳಿಂಬೆ ಹಾಗೂ ಲಿಂಬೆ ಬೆಳೆಗಳಿಗೆ ಆಲಿಕಲ್ಲು ಮಳೆಯಿಂದಾಗಿ ಬೆಳೆಹಾನಿ ಸಂಭವಿಸಿದ್ದಲ್ಲಿ, ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾಗೂ ಮಾಹಿತಿಯನ್ನು 72 ಗಂಟೆಗಳೊಳಗಾಗಿ ಅಗ್ರಿಕಲ್ಟರ್ ಇನ್ಸುರನ್ಸ್ ಕಂಪನಿ ಆಪ್ ಇಂಡಿಯಾ ಲಿ. ರವರಿಗೆ Toll Free Number 1800 425 0505 ಗೆ ಕರೆ ಮಾಡಿ ರೈತರು ಮಾಹಿತಿ ನೀಡಬಹುದಾಗಿದೆ‌ ಎಂದರು.

ವಿಮಾ ಕಂಪನಿಯ ಅಧಿಕಾರಿಗಳು ಹಾಗೂ ಎಲ್ಲಾ ಇಲಾಖಾ ಅಧಿಕಾರಿಗಳು 3 ದಿನಗಳೊಳಗಾಗಿ ಜಂಟಿ ಸಮೀಕ್ಷೆ ಕೈಗೊಂಡು ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.‌

Latest News

ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ  ಚವ್ಹಾಣರಿಗೆ  ಸನ್ಮಾನ

ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ  ಚವ್ಹಾಣರಿಗೆ  ಸನ್ಮಾನ

ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ತಾಂಡಾ(ವೆಂಕಟೇಶ ನಗರ) ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಬಸು

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ತಮಗೆ ಸಾಷ್ಟಾಂಗ ಹಾಕಿರುವುದಾಗಿ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ಶಾಸಕ ನಾಡಗೌಡರು

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ಮುದ್ದೇಬಿಹಾಳ : ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳ ಮದುವೆಗಳನ್ನು ದುಂದುವೆಚ್ಚದಲ್ಲಿ ಮಾಡುವಬದಲು ಅದೇ ಖರ್ಚಿನಲ್ಲಿ

ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಮತಕ್ಷೇತ್ರದ ತಾಳಿಕೋಟಿ ತಾಲ್ಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ ಜಾಗೆ ಗುರುತಿಸುವುದನ್ನು

ಸೌಹಾರ್ದತೆ ಮೆರೆದ ಮನಿಯಾರ್ :                                          ಹಬ್ಬದ ಸಮಯಗಳಲ್ಲಿ ಬಡವರಿಗೆ ನೆರವಾಗಿ-ಸಿಪಿಐ ಫಸಿವುದ್ದೀನ್

ಸೌಹಾರ್ದತೆ ಮೆರೆದ ಮನಿಯಾರ್ : ಹಬ್ಬದ ಸಮಯಗಳಲ್ಲಿ ಬಡವರಿಗೆ ನೆರವಾಗಿ-ಸಿಪಿಐ ಫಸಿವುದ್ದೀನ್

ಮುದ್ದೇಬಿಹಾಳ : ಸಮಾಜದಲ್ಲಿ ಆರ್ಥಿಕವಾಗಿ ಸಬಲತೆ ಸಾಧಿಸಿದವರು ಬಡವರು,ನಿರ್ಗತಿಕರಿಗೆ ಹಬ್ಬದ ಸಮಯಗಳಲ್ಲಿ ನೆರವಾಗುವ ಕಾರ್ಯ ಮಾಡಬೇಕು ಎಂದು ಸಿಪಿಐ ಮೊಹ್ಮದ್ ಫಸಿವುದ್ದೀನ್ ಹೇಳಿದರು. ಪಟ್ಟಣದ ಹುಡ್ಕೋದಲ್ಲಿರುವ ಉದ್ಯಮಿ ಅಯ್ಯೂಬ ಮನಿಯಾರ್ ಅವರ ಮನಿಯಾರ್ ಚಾರಿಟೇಬಲ್ ಟ್ರಸ್ಟ್ನಿಂದ ಮಂಗಳವಾರ ರಂಜಾನ್ ಹಬ್ಬದ ನಿಮಿತ್ಯ ಬಡವರಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನಿಯಾರ್ ಅವರು ತಮ್ಮ ತಂದೆ ತಾಯಿ ಸ್ಮರಣಾರ್ಥ ಈ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.ಆರ್ಥಿಕ ಸಬಲತೆ ಸಾಧಿಸಿದವರು ಇಂತಹ ಕಾರ್ಯಗಳನ್ನು ಮಾಡುತ್ತಿದ್ದರೆ

ಮುದ್ದೇಬಿಹಾಳ : ಅಬ್ಬರದ ಆಲಿಕಲ್ಲು ಮಳೆಗೆ ನೆಲಕಚ್ಚಿದ ದ್ರಾಕ್ಷಿ,ಚಿಕ್ಕು,ತೆಂಗಿನ ಗಿಡ

ಮುದ್ದೇಬಿಹಾಳ : ಅಬ್ಬರದ ಆಲಿಕಲ್ಲು ಮಳೆಗೆ ನೆಲಕಚ್ಚಿದ ದ್ರಾಕ್ಷಿ,ಚಿಕ್ಕು,ತೆಂಗಿನ ಗಿಡ

ಮುದ್ದೇಬಿಹಾಳ : ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮಂಗಳವಾರ ಕೆಲಕಾಲ ಸುರಿದ ಭಾರೀ ಬಿರುಗಾಳಿ,ಆಲಿಕಲ್ಲು ಮಳೆ ರೈತರಿಗೆ ನಷ್ಟವನ್ನುಂಟು ಮಾಡಿದ್ದು ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ. ತಾಲ್ಲೂಕಿನ ಆಲೂರ ಗ್ರಾಮದಲ್ಲಿ ಬಿರುಗಾಳಿ,ಮಳೆಗೆ ಶಿವಪುತ್ರಪ್ಪ ಗೂಳಿ ಎಂಬುವರ ಹೊಲದಲ್ಲಿ ಬೆಳೆದಿದ್ದ ಐದು ಎಕರೆ ದ್ರಾಕ್ಷಿ ಬೆಳೆ ಹಾನಿಯಾಗಿದೆ.ಇನ್ನೆನ್ನು ವಾರದಲ್ಲಿ ದ್ರಾಕ್ಷಿ ಕಟಾವು ಮಾಡಬೇಕಿದ್ದ ರೈತನಿಗೆ ಈ ಬಿರುಗಾಳಿ,ಮಳೆ ಬರಸಿಡಿಲಿನಂತೆ ಬಂದೆರಗಿದ್ದು ದ್ರಾಕ್ಷಿ ಗೊನೆಗಳು,ಹಣ್ಣುಗಳು ಉದುರಿ ಬಿದ್ದಿವೆ.ಇದರೊಟ್ಟಿಗೆ ಚಿಕ್ಕು ಗಿಡಗಳಿಂದ