ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಮತಕ್ಷೇತ್ರದ ತಾಳಿಕೋಟಿ ತಾಲ್ಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ ಜಾಗೆ ಗುರುತಿಸುವುದನ್ನು ಬಿಟ್ಟು ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ಎಂದು ಶಾಸಕ ಸಿ.ಎಸ್.ನಾಡಗೌಡ ಮಾಜಿ ಶಾಸಕ ನಡಹಳ್ಳಿ ಅವರಿಗೆ ಪ್ರಶ್ನಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಶಾಸಕರಾಗಿದ್ದುಕೊಂಡು ಐದು ವರ್ಷ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಶ್ರಮಿಸದೇ ನಿದ್ದೆ ಮಾಡಿದ್ರಾ ನೀವು ? ಎಂದ ನಾಡಗೌಡ, ನಿಮಗೇಕೆ ಜಾಗೆ ಗುರುತಿಸಲಾಗಲಿಲ್ಲ.ನಿಮ್ಮಲ್ಲಿ ಇಚ್ಛಾಶಕ್ತಿ ಇರಲಿಲ್ಲ ಎಂದು ಮಾಜಿ ಶಾಸಕ ನಡಹಳ್ಳಿ ವಿರುದ್ಧ ಟೀಕಿಸಿದರು.
ನಾನು ಆಯ್ಕೆಯಾಗಿ ಬಂದ ಎರಡನೆ ತಿಂಗಳಲ್ಲಿ ಪ್ರಜಾಸೌಧ ನಿರ್ಮಾಣದ ಸ್ಥಳ ಗುರುತಿಸಲು ಪ್ರಯತ್ನ ಮುಂದುವರೆಸಿದ್ದೇವು.ಕೆಲವರು ನಾವು ಕೊಡುತ್ತೇವೆ ಎಂದು ಮುಂದೆ ಬಂದವರು ನಂತರ ಹಿಂದೇಟು ಹಾಕುತ್ತಿದ್ದರು.ಹೀಗೆ ಒಂದೂವರೆ ವರ್ಷ ಕಳೆದು ಹೋಯ್ತು.ಸದ್ಯಕ್ಕೆ ಮೈಲೇಶ್ವರ ರಸ್ತೆಯಲ್ಲಿ ಗುರುತಿಸಿರುವ ಜಾಗೆಯನ್ನು ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.50 ಅಡಿ ರಸ್ತೆ ಬೇಕು ಎಂದು ತಿಳಿಸಿದ್ದಾರೆ.ಅದಕ್ಕೆ ಜಮೀನಿನ ಮಾಲೀಕರು ಒಪ್ಪಿದ್ದಾರೆ.ನಗರಸಭೆಯಾಗಿ ಮೇಲ್ದರ್ಜೆಗೇರಿಸುವಾಗ ಮೈಲೇಶ್ವರ ಗ್ರಾಮ ಮುಂಬರುವ ದಿನಗಳಲ್ಲಿ ತಾಳಿಕೋಟಿಗೆ ಸೇರ್ಪಡೆಯಾಗಲಿದೆ.ಅಷ್ಟಕ್ಕೂ ತಹಶೀಲ್ದಾರ್ ಕಚೇರಿಗೆ ಬರುವವರು ಕೆಲಸ ಇದ್ದವರು ಮಾತ್ರ ಬರುತ್ತಾರೆ.ಈ ಹಿಂದೆ ಅವಿಭಜಿತ ಮುದ್ದೇಬಿಹಾಳ ತಾಲ್ಲೂಕು ಇದ್ದಾಗ 34 ಕಿ.ಮೀ ದೂರದವರೆಗೆ ಸಂಚರಿಸಿ ಕೆಲಸ ಮಾಡಿಕೊಂಡು ಬರುತ್ತಿದ್ದರು.ಈಗ 3 ಕಿ.ಮೀ ದೂರ ಎನ್ನುತ್ತಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ ಎಂದು ಹೇಳಿದರು.

ವಿಧಾನಸಭೆಯಲ್ಲಿ ಸಚಿವರು ಭೇಟಿಯಾದಾಗಲೊಮ್ಮೆ ಪ್ರಜಾಸೌಧದ ನಿರ್ಮಾಣದ ಹಣ ವಾಪಸ್ ಸರ್ಕಾರಕ್ಕೆ ಹೋಗುತ್ತದೆ.ಆದಷ್ಟು ಬೇಗ ನಿರ್ಮಾಣಕ್ಕೆ ಜಾಗೆ ದೊರಕಿಸಿಕೊಡುವ ವ್ಯವಸ್ಥೆ ಮಾಡಿ ಎಂದು ಮೌಖಿಕವಾಗಿ ಕೇಳಿದ್ದರು.ಅಷ್ಟರಲ್ಲಿ ಪ್ರಭು ಮದರಕಲ್ ಹಾಗೂ ಇತರರು ಎರಡು ಎಕರೆ ಜಮೀನು ದಾನವಾಗಿ ಕೊಡುತ್ತೇವೆ ಎಂದು ಮುಂದೆ ಬಂದಿದ್ದರು.ಅದಕ್ಕೆ ವಿನಾಕಾರಣ ವಿರೋಧ ಮಾಡುತ್ತಿರುವುದು ಸರಿಯಲ್ಲ. ಪಿಡಬ್ಲೂö್ಯಡಿಯವರು ಕೊಡುವುದಿಲ್ಲ,ಕೆಇಬಿ ಅವರು ನಮಗೆ ಜಾಗ ಇಲ್ಲ ಎಂದರು.ಹೀಗಾದಾಗ ನಾವು ದಾನವಾಗಿ ಕೊಡುವ ದಾನಿಗಳನ್ನು ಸಂಪರ್ಕಿಸಿ ಸರ್ಕಾರದ ನಿಯಮಗಳಂತೆ ಪ್ರಜಾಸೌಧ ನಿರ್ಮಾಣಕ್ಕೆ ಮುಂದಾಗುವ ಆಲೋಚನೆ ಮಾಡುತ್ತಿದ್ದರೆ ಇವರು ಇಲ್ಲದ ವಿಷಯಗಳನ್ನು ಜನರ ತಲೆಯಲ್ಲಿ ತುಂಬುತ್ತಿದ್ದಾರೆ ಎಂದು ಆರೋಪಿಸಿದರು.

ಇವತ್ತಿಗೂ ಪ್ರಜಾಸೌಧ ಅಲ್ಲೇ ಆಗಬೇಕು ಎಂಬುದು ನನ್ನ ಆಸೆಯೇನು ಇಲ್ಲ. ಬೇರೆಕಡೆ ಉಚಿತವಾಗಿ ಭೂಮಿ ಕೊಡುತ್ತಿದ್ದರೆ ಸಾರ್ವಜನಿಕರು ಯಾರೆ ಮುಂದೆ ಬಂದರೂ ಅದಕ್ಕೆ ನಾವು ಅಲ್ಲಿಯೆ ಪ್ರಜಾಸೌಧ ನಿರ್ಮಾಣ ಮಾಡಲು ಸಿದ್ದರಿದ್ದೇವೆ ಎಂದೂ ನಾಡಗೌಡರು ಹೇಳಿದರು.

ಸಾರ್ವಜನಿಕರ ಹಿತದೃಷ್ಟಿಯಿಂದ ಯಾರಾದರೂ ಪ್ರಜಾಸೌಧ ನಿರ್ಮಾಣಕ್ಕೆ ಜಾಗೆ ಕೊಡಲು ಮುಂದೆ ಬಂದರೆ ಈಗಲೂ ಸರ್ಕಾರದ ಗಮನಕ್ಕೆ ತಂದು ಸ್ಥಳ ಬದಲಾಯಿಸುವ ಬಗ್ಗೆ ಆಲೋಚಿಸುತ್ತೇವೆ.ಆದರೆ ನಾಡಗೌಡರಿಂದ ಪ್ರಜಾಸೌಧ ಮಾಡಲಿಲ್ಲ ಎಂಬ ಗೂಬೆ ಕೂಡಿಸುವ ಹುನ್ನಾರಕ್ಕೆ ನಾನು ಆಸ್ಪದ ನೀಡುವುದಿಲ್ಲ.ಹಳೇ ಪುರಸಭೆ ಜಾಗೆಯಲ್ಲಿ ಪ್ರಜಾಸೌಧ ಮಾಡುವಷ್ಟು ಜಾಗೆ ಇಲ್ಲ.ಎಕರೆಗೆ 70 ಲಕ್ಷದಂತೆ ಮಾರಾಟವಾಗುವ ಜಾಗೆಯನ್ನು ಈಗ ದಾನ ಮಾಡುತ್ತಿದ್ದಾರೆ.ಅದಕ್ಕೆ ವಿರೋಧಿಸುತ್ತಿರುವುದು ಹಾಸ್ಯಾಸ್ಪದ ಎನ್ನಿಸುತ್ತದೆ ಎಂದರು.

ಶಿವಕುಮಾರ ಸ್ವಾಮೀಜಿಯವರ ಹೆಸರಿನಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಿಸುತ್ತೇನೆ, ಗಾರ್ಮೆಂಟ್ ಫ್ಯಾಕ್ಟರಿ ಕಟ್ಟುತ್ತೇನೆ ಎಂದವರು ಏನು ಮಾಡಿದ್ದಾರೆ.ನಾಲತವಾಡದಲ್ಲಿ ಬೇನಾಮಿಯಾಗಿ ಆಸ್ತಿ ಖರೀದಿಸಿ ಈಗ ಪ್ಲಾಟುಗಳನ್ನು ಮಾಡಿ ಮಾರಾಟ ಮಾಡಿಸುತ್ತಿದ್ದಾರೆ.21 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ ನಾನು ಭೇಟಿ ಕೊಟ್ಟಿಲ್ಲ ಎಂದವರಿಗೆ ನಾನು ಅಲ್ಲಿನ ಹೋರಾಟಗಾರರು,ನಾಯಕರನ್ನು ಕರೆದು ಮಾತನಾಡಿಸಿದ್ದೇನೆ.ಭಾಷೆ ಮೇಲೆ ಹಿಡಿತ ಇರಬೇಕು.ಹೋರಾಟಗಾರರು ಅಲ್ಲೊಂದು ಶೋ ಮಾಡ್ತಾ ಕೂಡುತ್ತಿದ್ದೀರಿ. ನನ್ನ ಬೇರೆ ಕೆಲಸ ಬಿಟ್ಟು ದಿನ ಅದೇ ಮಾಡುತ್ತಾ ಕೂಡಬೇಕಾ ? ಎಂದು ನಾಡಗೌಡರು ಖಾರವಾಗಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ತಾಳಿಕೋಟಿ ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರಕಲ್, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಮುಖಂಡರಾದ ವಾಯ್.ಎಚ್.ವಿಜಯಕರ್, ಶಿವಶಂಕರಗೌಡ ಹಿರೇಗೌಡರ,ಪ್ರಭುರಾಜ ಕಲ್ಬುರ್ಗಿ, ಸಂಗನಗೌಡ ಬಿರಾದಾರ,ಸದ್ದಾಂ ಕುಂಟೋಜಿ,ಸದು ಮಠ, ಡಾ.ವಿಜಯಕುಮಾರ ಗೂಳಿ,ರಾಜು ನಾಯಕ,ಹಣಮಂತ ಭೋವಿ ಮೊದಲಾದವರು ಇದ್ದರು.

ನಡಹಳ್ಳಿ ನನಗೆ ಸಾಷ್ಟಾಂಗ ಹಾಕಿದ್ದರು: ನನಗಿಂತ ಹತ್ತು ವರ್ಷ ಸಣ್ಣವರು.ಈ ಹಿಂದೆ ನನ್ನ ಮನೆಗೆ ಬಂದು ನಡಹಳ್ಳಿಯವರು ಸಾಷ್ಟಾಂಗ ಹಾಕಿದ್ದಾರೆ.ಈ ರೀತಿ ನೀವು ಮಾಡಬೇಡಿ ಎಂದಾಗ ನೀವು ಹಿರಿಯರಿದ್ದೀರಿ ಗೌರವ ಕೊಡುತ್ತೇನೆ ಎಂದು ಹೇಳಿದ್ದರು.ನಾನು ಗೌರವ ಕೊಟ್ಟೇ ಮಾತನಾಡಿದ್ದೆ.ಆದರೆ ಈಗ ಏಕವಚನದಲ್ಲಿ ಮಾತನಾಡುತ್ತಿರುವುದು ನೋಡಿದರೆ ಈ ಹಿಂದೆ ಇದ್ದ ಆ ನಮ್ಮ ಹಿರಿತನ ಇವರಿಗೆ ಈಗ ಎಲ್ಲಿ ಹೋಯಿತು ಎಂದು ಎನ್ನಿಸುತ್ತಿದೆ.ನೀವು ಏಕವಚನದಲ್ಲಿ ಮಾತನಾಡಲು ಶುರು ಮಾಡಿದರೆ ನಮ್ಮ ಹಿಂಬಾಲಕರು ನಿಮಗೆ ಬೇರೆ ಭಾಷೆ ಬಳಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡುವುದಾಗಿ ತಿಳಿಸಿದರು. ಮಾನನಷ್ಟ ಮೊಕದ್ದಮೆ ಹೂಡುವೆ : ಸಾರ್ವಜನಿಕರು ದೇಣಿಗೆಯಿಂದ ಜಾಗೆ ಖರೀದಿಸುವ ಮಾತುಕತೆ ನಡೆದಾಗ ನಾನು ಐದು ಲಕ್ಷ ರೂ.ಕೊಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದೆ.ನಮಗೆ ಅದೇ ದೊಡ್ಡ ಮೊತ್ತ.ಆದರೆ ಇವರು ಇವರು 7 ಸಲ ಎಂ.ಎಲ್.ಎ ಆಗಿದ್ದಾರೆ.ಅವರೇ ಕೊಡಿಸಲಿ ನೂರಾರು ಕೋಟಿ ರೂ. ಬೇನಾಮಿ ಆಸ್ತಿ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ.ಬುದ್ದಿಗೇ ಇವರಿಗೆ ದರ್ಶನ ಇದೆಯೋ ಇಲ್ಲವೋ ಗೊತ್ತಿಲ್ಲ.ಸುಮ್ಮನೆ ಬಾಯಿ ಸಡಿಲ ಬಿಟ್ಟು ಮಾತನಾಡಿದರೆ ನಾನು ಮಾನನಷ್ಟ ಮೊಕದ್ದಮೆ ಹೂಡುತ್ತೇನೆ.ಎಲೆಕ್ಷನ್‌ಗಾಗಿ ಮಾಡಿದ ಸಾಲವನ್ನೆ ತೀರಿಸಲು ಆಗುತ್ತಿಲ್ಲ.ನೀವು ಎಲ್ಲೆಲ್ಲಿ ಬೇನಾಮಿ ಆಸ್ತಿ ಮಾಡಿದ್ದೀರಿ ಗೊತ್ತಿಲ್ಲವೆ ? ಸೌಜನ್ಯದ ಭಾಷೆ ಬಳಸಿ ಮಾತನಾಡಬೇಕು.ಮಾಜಿ ಶಾಸಕರು,ಪಕ್ಷದ ರೈತ ಮೋರ್ಚಾ ಅಧ್ಯಕ್ಷರೊಬ್ಬರು ಮಾತನಾಡುವ ಸಂಸ್ಕೃತಿಯೇ ? ಧಾಟಿ ಎಂತಹದ್ದು ? ಬೇನಾಮಿ ಆಸ್ತಿ ನಾನು ಮಾಡಿದ್ದಕ್ಕೆ ದಾಖಲೆ ತೋರಿಸಿ ಎಂದು ನಾಡಗೌಡರು ಪ್ರಶ್ನಿಸಿದರು. ದೋಣಿ ಆಚೇಗೆ ಇರುವ 141 ಸರ್ವೆ ನಂಬರ್‌ದಲ್ಲಿ ಬರುವ ಭೂಮಿಯಲ್ಲಿ ಪ್ರಜಾಸೌಧ ಮಾಡಿದ್ದರೆ ಒಳ್ಳೆಯದೆಂದು ವಿಚಾರಿಸಿದಾಗ ಆ ಜಮೀನು ಖರೀದಿ ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿತ್ತು. ಟೆಂಡೆನ್ಸ್ ಆಕ್ಟ್ನಲ್ಲಿ 2013-14 ಕ್ಲಿಯರ್ ಇಲ್ಲ ಎಂದು ತಿಳಿದು ಬಂದಿತು.ಆದರೆ 139 ಎಕರೆ ಯಾವನರೆ ಒಬ್ಬ ದಡ್ಡ ಆಫೀಸರ್ ಡಿ ಕ್ಲಾಸ್ ಲ್ಯಾಂಡ್‌ನ್ನು ಲ್ಯಾಂಡ್ ರಿಫಾರ್ಮ್ ಆಕ್ಟ್ ಅಡಿ ಮಂಜೂರಿ ಮಾಡಲು ಬರುತ್ತದೆಯೇ ? ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಇಷ್ಟೊಂದು ಜಾಗೆ ಹೇಗೆ ಆಗಿದೆ ಎಂಬುದು ನಮಗೂ ಯಕ್ಷ ಪ್ರಶ್ನೆ. ಇದು ಹೇಗೆ ಆಗಿದೆ ಎಂದು ತನಿಖೆ ಮಾಡಲು ಒತ್ತಾಯಿಸಿದ್ದೇವೆ.ಇದರ ದಾಖಲೆಗಳು ಲಭ್ಯವಿಲ್ಲ.ಇಂತಹ ಜಾಗೆಯ ಬಗ್ಗೆ ಆಲೋಚಿಸಲು ಬರುತ್ತದೆಯೇ ? ಯಾರ ಮನೆಗೆ ದಾಖಲೆಗಳು ಹೋಗುತ್ತಿದ್ದವು ? ಟ್ರಿಬ್ಯೂನೆಲ್ ಒಂದು ನ್ಯಾಯಾಂಗ ವ್ಯವಸ್ಥೆ ಇದ್ದಂತೆ.ಅದು ಎಲ್ಲೂ ಬಹಿರಂಗಪಡಿಸುವOತಿಲ್ಲ.ಆದರೆ ಯಾರ ಅವಧಿಯಲ್ಲಿ ಈ ದಾಖಲೆಗಳು ಬದಲಾಗಿವೆ ಎಂಬುದು ತನಿಖೆ ಆಗಬೇಕು ಎಂದು ನಾಡಗೌಡರು ಹೇಳಿದರು.

ಏಳೇಳು ಜನ್ಮಕ್ಕು ಇಂತವರನ್ನು ಜನ ಎಂ.ಎಲ್.ಮಾಡುವುದಿಲ್ಲ : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಸುಪ್ರೀಂ.ಸಾರ್ವಜನಿಕ ಜೀವನದಲ್ಲಿರುವವರು ಘನತೆ,ಗೌರವ ಬಿಟ್ಟು ಮಾತನಾಡಬಾರದು.ಇನ್ನು ಏಳೇಳು ಜನ್ಮಕ್ಕೂ ಇಂತಹವರನ್ನು ನಮ್ಮ ಜನ ಎಂಎಲ್‌ಎ ಮಾಡುವುದಿಲ್ಲ.ಮುಂದೆ ನಿಮ್ಮನ್ನು ನನ್ನನ್ನು ತಿರಸ್ಕಾರ ಮಾಡಬಹುದು.ಆದರೆ ನಿಮ್ಮನ್ನು ಮಾತ್ರ ಯಾವ ಕಾಲಕ್ಕೂ ಚುನಾಯಿಸುವುದಿಲ್ಲ ಎಂದು ನಾಡಗೌಡರು ಭವಿಷ್ಯ ನುಡಿದರು.

Latest News

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಡಿಸಿ ಆದೇಶದ ನಂತರವೇ ಕಾರ್ಖಾನೆ ಆರಂಭ-ಹಣಮoತಗೌಡ ಪಾಟೀಲ್

ಮುದ್ದೇಬಿಹಾಳ : ರಾಜ್ಯದ ಸಕ್ಕರೆ ಕಾರ್ಖಾನೆಗಳ ಅಸೋಶಿಯೇಷನ್‌ದಲ್ಲಿ ಯಾವ ತೀರ್ಮಾನ ಕೈಗೊಂಡಿದೆಯೋ ಅದರಂತೆ ನಮ್ಮ

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ:         ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮಾಜಿ ಶಾಸಕ ಎ.ಎಸ್;ಪಾಟೀಲ ನಡಹಳ್ಳಿ ಆಕ್ರೋಶ: ಆಲಮಟ್ಟಿ ಆಣೆಕಟ್ಟು ಎತ್ತರ ವಿರೋಧಿಸಿದ ತೆಲಂಗಾಣಕ್ಕೆ ಕೃಷ್ಣೆ ನೀರು..!

ಮುದ್ದೇಬಿಹಾಳ : ತೆಲಂಗಾಣಕ್ಕೆ ಅಧಿಕೃತ ಆದೇಶವಿಲ್ಲದೆ ಸಿಎಂ ಮೌಖಿಕ ಸೂಚನೆ ಮೇರೆಗೆ ಕೃಷ್ಣಾ ನದಿ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ:                           ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಅ.13 ರಿಂದ ಕಬ್ಬು ಬೆಳೆಗಾರರಿಂದ ಹೋರಾಟ: ದೆಹಲಿಯ ಉನ್ನತ ಮಟ್ಟದ ಸಭೆ ವಿಫಲವಾದರೆ ರಾಷ್ಟ್ರೀಯ ಹೆದ್ದಾರಿ ತಡೆ

ಮುದ್ದೇಬಿಹಾಳ : ದೆಹಲಿಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳೊAದಿಗೆ ಅ.12 ರಂದು ನಡೆಯಲಿರುವ ಉನ್ನತಮಟ್ಟದ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ :                    ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜನೆ : ಪ್ರಜಾಪ್ರಭುತ್ವದ ಮೌಲ್ಯಗಳ ಅರಿವಿಗೆ ಯುವ ಸಂಸತ್ ಮಾದರಿ

ಮುದ್ದೇಬಿಹಾಳ : ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಅರಿವು ಮೂಡಿಸಲು ಯುವ ಸಂಸತ್ ಮೂಲಕ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ರೈತರನ್ನು ಅಡ್ಡದಾರಿಗೆಳೆಯುವ ಕುತಂತ್ರಕ್ಕೆ ಬಲಿಯಾಗಬೇಡಿ-ಶಾಸಕ ನಾಡಗೌಡ

ಮುದ್ದೇಬಿಹಾಳ : ನಮ್ಮ ತಾಲ್ಲೂಕಿನ ರೈತರನ್ನು ಅಡ್ಡ ಹಾದಿಗೆಳೆಯುವ ಕುತಂತ್ರ ನಡೆದಿವೆ. ಕುತಂತ್ರಿಗಳ ಪ್ರಚೋದನೆಗೆ ಒಳಗಾಗಬೇಡಿ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಾನೂ ಸಹ ರೈತನೇ, ವೇದಿಕೆಯಲ್ಲಿರುವ ಇವರೆಲ್ಲ ಅಧಿಕಾರಿಗಳು ರೈತರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಇಲ್ಲ ಸಲ್ಲದ ಅಪಪ್ರಚಾರ ನಡೆದಿದೆ. ಸರಕಾರ ನಿಮ್ಮ ಪರವಾಗಿಯೇ ಇರುತ್ತದೆ ಎನ್ನುವುದನ್ನು ಮರೆಯಬೇಡಿ. ಶಾಸಕ ನಾಡಗೌಡರಿಗೆ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ:                                          ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ಪಾಸ್ ವಿತರಣೆ: ನೈಜ ಭಾರತದ ಧ್ವನಿ ಗ್ರಾಮೀಣ ಪತ್ರಕರ್ತರು-ಸಚಿವ ಎಂ.ಬಿ. ಪಾಟೀಲ

ವಿಜಯಪುರ : ಗ್ರಾಮೀಣ ಭಾಗದ ಜನರು, ರೈತರು ಹಾಗೂ ಸಾಮಾನ್ಯ ಜನರ ನೈಜ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಗ್ರಾಮೀಣ ಪತ್ರಕರ್ತರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು ನೈಜ ಭಾರತದ ಧ್ವನಿಯಾಗಿ ಗ್ರಾಮೀಣ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ನಗರದ ಗಾಂಧಿ ಭವನದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ಪತ್ರಕರ್ತರ ಉಚಿತ