ಮುದ್ದೇಬಿಹಾಳ : ಯಾವುದೋ ಕಾಲದ ಆಗಿ ಹೋದ ಘಟನೆಗಳ ಬಗ್ಗೆ ಹೇಳುವುದು ಪ್ರವಚನವಲ್ಲ,ಬದುಕಿನ ವಾಸ್ತವ ಸತ್ಯವನ್ನು ತಿಳಿಯಪಡಿಸುವುದೇ ಪ್ರವಚನ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.
ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಮಂಗಳವಾರದಿAದ ಒಂದು ವಾರ ಕಾಲ ಆರಂಭಗೊAಡ ಜೀವನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಿನೇಮಾ, ಕುಣಿತ ಎಂದ ತಕ್ಷಣವೇ ಅಲ್ಲಿ ಸಾವಿರಾರು ಜನ ಜಮಾಯಿಸುತ್ತಾರೆ.ಆದರೆ ಸನ್ಮಾರ್ಗದಲ್ಲಿ ನಡೆಯಿರಿ ಎಂದು ಹೇಳುವ ಇಂತಹ ಸತ್ಯದರ್ಶನ ಮಾಡುವ ಕಾರ್ಯಕ್ರಮಗಳಿಗೆ ಜನರ ಸ್ಪಂದನೆ ಕ್ಷೀಣಿಸುತ್ತಿರುವುದು ಕಳವಳಪಡುವಂತಹದ್ದು ಎಂದರು.
ಪ್ರವಚನ ನಡೆಸಿಕೊಡುತ್ತಿರುವ ರಾಯಚೂರು ಜಿಲ್ಲೆ ರೊಟ್ನಡಗಿಯ ರಾಚಯ್ಯ ಶಾಸ್ತ್ರಿಗಳು ಮಾತನಾಡಿ, ಯಾವುದನ್ನು ಮಾಡಬೇಡಿ ಎಂದು ಶರಣರು ಹೇಳಿದ್ದಾರೆಯೋ ಅದನ್ನೆಲ್ಲಾ ನಾವು ಮಾಡುತ್ತಿದ್ದೇವೆ.ಧರ್ಮಗಳ ಹೆಸರಿನಲ್ಲಿ ನೆಮ್ಮದಿಯನ್ನು ಕೆಡಿಸಿಕೊಂಡಿದ್ದೇವೆ.ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಭಕ್ತರಿಗೆ ದೊರಕಿದ ಅಮೂಲ್ಯ ಮಾಣಿಕ್ಯ ಎಂದರು.ಖಾಸ್ಗತೇಶ್ವರ ಮಠದ ವೇ.ಮುರುಗೇಶ ವಿರಕ್ತಮಠ,ಶ್ರೀಧರ ಕಾಗನೂರಮಠ, ನೀಲಮ್ಮ ವಿರಕ್ತಮಠ ಸೇರಿದಂತೆ ಹಲವರು ಇದ್ದರು.