ಹುನಗುಂದ: ಸೆ.2 ರಂದು ನಡೆಯಲಿರುವ ಶ್ರೀ ಸಂಗಮೇಶ್ವರ ಜಾತ್ರೆಯಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಪಟ್ಟಣದ ಹಿರಿಯರು, ಯುವಕರು ಯಶಸ್ವಿಯಾಗಿ ಜಾತ್ರೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಹುನಗುಂದ ಪಿಎಸ್‌ಐ ಚನ್ನಯ್ಯ ದೇವೂರ ಹೇಳಿದರು.
Join Our Telegram: https://t.me/dcgkannada
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವದ ಮುನ್ನೆಚ್ಚರಿಕೆಯಾಗಿ ಮಂಗಳವಾರ ಕರೆದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವದ ಮಹಾ ರಥೋತ್ಸವ ಸೇರಿದಂತೆ ದೇವಸ್ಥಾನದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಪ್ರತಿ ವರ್ಷಕ್ಕಿಂತ ಒಂದು ಗಂಟೆ ಮುಂಚಿತವಾಗಿ ನಡೆಯಲಿವೆ.
ರಾಜ್ಯದ ಕೆಲವು ಕಡೆಗಳಲ್ಲಿ ಕಿಡಿಗೇಡಿಗಳಿಂದ ಅತಾಚುರ್ಯತೆಯಿಂದ ಅಹಿತಕರ ಘಟನೆಗಳು ನಡೆಯುತ್ತಿವೆ. ಭಕ್ತರಿಗೆ ತೊಂದರೆ ಯಾಗದಂತೆ ಹೆಚ್ಚಿನ ಪೋಲಿಸ್ ಸಿಬ್ಬಂದಿಗಳನ್ನು ಹಾಕಿ ಪ್ರಮುಖ ಕಡೆಗಳಲ್ಲಿ ಸಿಸಿ ಟಿವಿ ಅಳವಡಿಸಿ ಇಲಾಖೆ ಕಟ್ಟೆಚ್ಚರ ವಹಿಸುತ್ತಿದೆ. ಜಾತ್ರೆಯ ಯಶಸ್ವಿಗೆ ಎಲ್ಲರೂ ಕೈ ಜೋಡಿಸಬೇಕೆಂದು ತಿಳಿಸಿದರು.
ದೇವಸ್ಥಾನ ಕಮೀಟಿ ಅಧ್ಯಕ್ಷ ಶೇಖರಪ್ಪ ಬಾದವಾಡಗಿ ಮಾತನಾಡಿದರು.
ಮುಖಂಡ ಮಹಾಂತೇಶ ಅವಾರಿ, ರವಿ ಹುಚನೂರ, ಮಹೇಶ ಬೆಳ್ಳಿಹಾಳ, ಜಬ್ಬಾರ ಕಲಬುರ್ಗಿ, ರಾಮನಗೌಡ ಬೆಳ್ಳಿಹಾಳ ಮಾತನಾಡಿದರು. ಹನಮಂತಪ್ಪ ನಕನಡೋಣ , ಮಲ್ಲು ಚೂರಿ, ಗಿರಿಮಲ್ಲಪ್ಪ ಹಳಪೇಟಿ, ಶಾಂತಪ್ಪ ಹೊಸಮನಿ, ಮಹಾಂತೇಶ ಮುಕ್ಕಣ್ಣವರ, ಮಲ್ಲು ಅಂಟರತಾನಿ, ಈಶಪ್ಪ ಹವಾಲ್ದಾರ, ಮುನ್ನಾ ಭಾಗವಾನ, ದಾನಪ್ಪ ಕೆಂದೂರ ಇದ್ದರು.