ಯಲಗೂರ ಗೋಶಾಲೆಗೆ ಐದು ಟ್ರಾಕ್ಟರ್ ಮೇವು ಕೊಡುಗೆ

ಯಲಗೂರ ಗೋಶಾಲೆಗೆ ಐದು ಟ್ರಾಕ್ಟರ್ ಮೇವು ಕೊಡುಗೆ

ಮುದ್ದೇಬಿಹಾಳ : ಈಚೆಗೆ ಮುದ್ದೇಬಿಹಾಳದಲ್ಲಿ ಜರುಗಿದ್ದ ಹಿಂದೂ ಮಹಾಸಮ್ಮೇಳನದಲ್ಲಿ ಜಮಾಖರ್ಚು ಆಗಿ ಉಳಿತಾಯದ ಹಣದಲ್ಲಿ ಯಲಗೂರಿನ ಗೋಶಾಲೆಗೆ ಇಲ್ಲಿನ ಹಿಂದೂ ಸಮಾಜದ ಬಾಂಧವರು ಐದು ಟ್ರಾö್ಯಕ್ಟರ್‌ನಷ್ಟು ಮೇವು ಕಾಣಿಕೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪಟ್ಟಣದ ಹನುಮಾನ ದೇವಸ್ಥಾನದಲ್ಲಿ ಬುಧವಾರ ಸಂಜೆ ಮೇವು ತುಂಬಿದ್ದ ಟ್ರಾö್ಯಕ್ಟರ್‌ಗಳಿಗೆ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಯಲಗೂರ ಗೋಶಾಲೆ ಕಾರ್ಯದರ್ಶಿ ವಿಠ್ಠಲ ಬಿರಾದಾರ, ಇದೇ ಮೊದಲ ಬಾರಿಗೆ ಮುದ್ದೇಬಿಹಾಳದ ಹಿಂದೂ ಸಮಾಜದವರು ಗೋವುಗಳಿಗೆ ಇಂತಹ ಕಷ್ಟಕಾಲದಲ್ಲಿ ಮೇವು ಒದಗಿಸುವ ಮೂಲಕ ಮೂಕ ಜಾನುವಾರುಗಳಿಗೆ ಆಸರೆಯಾಗಿದ್ದಾರೆ.ಸಮಾಜದಲ್ಲಿ ಸಾಕಷ್ಟು ಸಿರಿವಂತರು,ಉಳ್ಳವರು ಇದ್ದು ವ್ಯರ್ಥವಾಗಿ ಯಾವುದಕ್ಕೋ ಖರ್ಚು ಮಾಡುತ್ತಾರೆ.ಆದರೆ ನಮಗೆ ಕಾಮಧೇನು ಸ್ವರೂಪವಾಗಿರುವ ಗೋವಿನ ಸಂತತಿ ಉಳಿವಿಗೆ ಹಿಂದೇಟು ಹಾಕುತ್ತಾರೆ.ಆದರೆ ಮುದ್ದೇಬಿಹಾಳದ ಸಮಾಜದ ಬಾಂಧವರು ಇಂತಹದ್ದೊAದು ಮಾನವೀಯ ಸೇವೆ ಇಡೀ ರಾಜ್ಯಕ್ಕೆ ಮಾದರಿಯಾದ ಕಾರ್ಯವಾಗಲಿದೆ ಎಂದು ಹೇಳಿದರು.

ಹಿಂದೂ ಸಮಾಜದ ಮುಖಂಡ ಪ್ರಭು ಕಡಿ ಮಾತನಾಡಿ, ಹಿಂದೂ ಮಹಾ ಸಮ್ಮೇಳನದಲ್ಲಿ ಉಳಿದ ಹಣದಲ್ಲಿ ಗೋವುಗಳಿಗೆ ಸಹಾಯ ಮಾಡಬೇಕು ಎಂಬ ಒಮ್ಮತದ ತೀರ್ಮಾನವನ್ನು ಕೈಗೊಂಡು ಜಾನುವಾರುಗಳಿಗೆ ಮೇವು ಒದಗಿಸುವ ಸೇವೆ ಕೈಗೊಳ್ಳಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಿಂದೂ ಸಮಾಜದ ಪ್ರಮುಖರಾದ ವೆಂಕನಗೌಡ ಪಾಟೀಲ, ಮಾಣಿಕಚಂದ ದಂಡಾವತಿ, ಮುರಿಗೆಪ್ಪ ಮೋಟಗಿ,ಸಂಗಮೇಶ ನಾವದಗಿ, ಗುರುಸ್ವಾಮಿ ಬೂದಿಹಾಳಮಠ, ಉಮಾರಾಮ್ ಪಟೇಲ್,ಅಶೋಕ ಮಣಿ, ಮಹಾಂತೇಶ ಬೂದಿಹಾಳಮಠ, ಕಾಶೀನಾಥ ಹುಗ್ಗಿ, ಸುರೇಶ ಕಲಾಲ,ವಿಕ್ರಮ ಓಸ್ವಾಲ್,ಸಂಗನಗೌಡ ಪಾಟೀಲ,ಮೋತಿಲಾಲ ಕಲಾಲ,ಶ್ರೀಕಾಂತ ಹಿರೇಮಠ ಮೊದಲಾದವರು ಇದ್ದರು.ಬಜಾರ್ ಹನುಮಾನ ದೇವಸ್ಥಾನದಿಂದ ಪ್ರಮುಖ ಬೀದಿಯಲ್ಲಿ ಮೇವು ತುಂಬಿದ್ದ ಟ್ರಾö್ಯಕ್ಟರ್‌ಗಳನ್ನು ಮೆರವಣಿಗೆ ಮೂಲಕ ಯಲಗೂರಕ್ಕೆ ಕಳಿಸಿಕೊಡಲಾಯಿತು.

ಗೋವುಗಳು ಎಲ್ಲಿಯವರೆಗೆ ನಿಮಗೆ ಉಪಯೋಗಕ್ಕೆ ಬರುತ್ತವೆ ಅವುಗಳನ್ನು ಬಳಸಿಕೊಳ್ಳಿ.ಅವುಗಳಿಂದ ಉಪಯೋಗ ಇಲ್ಲ ಎಂದಾದಾಗ ಯಲಗೂರ ಗೋಶಾಲೆಗೆ ನೀಡಿ ನಾವು ಸಾಕುತ್ತೇವೆ.ದಯವಿಟ್ಟು ಅವುಗಳನ್ನು ಕೊಲ್ಲುವುದಕ್ಕೆ ಕೊಡಬೇಡಿ.
–ವಿಠಲ ಬಿರಾದಾರ,ಯಲಗೂರ ಗೋಶಾಲೆ ಕಾರ್ಯದರ್ಶಿ

Latest News

ಸರಳತೆಯ ಸೇವೆಯಿಂದಲೇ ಜನಮನ್ನಣೆ-ಪ್ರಭುಗೌಡ ದೇಸಾಯಿ

ಸರಳತೆಯ ಸೇವೆಯಿಂದಲೇ ಜನಮನ್ನಣೆ-ಪ್ರಭುಗೌಡ ದೇಸಾಯಿ

ಮುದ್ದೇಬಿಹಾಳ : ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಲ್ಲಿ ಸರಳತೆಯು ಅವರನ್ನು ಬಹುದೊಡ್ಡ ಮಟ್ಟಕ್ಕೆ ಕೊಂಡೊಯ್ಯುತ್ತದೆ.ಸೇವೆಯಲ್ಲಿ ಪ್ರಾಮಾಣಿಕತೆ,ದಕ್ಷತೆಯಿಂದ

ಏ.1 ರಿಂದ ಸರ್ಕಾರಿ ಕಚೇರಿ ಸಮಯದಲ್ಲಿ ಬದಲಾವಣೆ

ಏ.1 ರಿಂದ ಸರ್ಕಾರಿ ಕಚೇರಿ ಸಮಯದಲ್ಲಿ ಬದಲಾವಣೆ

ವಿಜಯಪುರ : 2026ನೇ ಸಾಲಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಬಿಸಿಲಿನ ತಾಪಮಾನದ

ಬಡ ಮಕ್ಕಳನ್ನು ಬೆಳೆಸುವ ಶಿಕ್ಷಣ ಸಂಸ್ಥೆಗಳನ್ನು ಸಮಾಜ ಬೆಂಬಲಿಸಲಿ-ನಡಹಳ್ಳಿ

ಬಡ ಮಕ್ಕಳನ್ನು ಬೆಳೆಸುವ ಶಿಕ್ಷಣ ಸಂಸ್ಥೆಗಳನ್ನು ಸಮಾಜ ಬೆಂಬಲಿಸಲಿ-ನಡಹಳ್ಳಿ

ಮುದ್ದೇಬಿಹಾಳ : ಗ್ರಾಮೀಣ ಪ್ರದೇಶದಲ್ಲಿರುವ ಬಡವರ ಮಕ್ಕಳ ಶೈಕ್ಷಣಿಕ ಭವಿಷ್ಯ ಕಟ್ಟುತ್ತಿರುವ ಖಾಸಗಿ ಶಾಲೆಗಳನ್ನು

ಮಕ್ಕಳನ್ನು ಕೇವಲ ಅಂಕದ ಚೀಲ ಮಾಡದಿರಿ: ಡಾ. ಎಂ.ಎಂ.ಬೆಳಗಲ್ಲ

ಮಕ್ಕಳನ್ನು ಕೇವಲ ಅಂಕದ ಚೀಲ ಮಾಡದಿರಿ: ಡಾ. ಎಂ.ಎಂ.ಬೆಳಗಲ್ಲ

ಮುದ್ದೇಬಿಹಾಳ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಾಲಕರು ಮಕ್ಕಳ ಮೇಲೆ ಅನಗತ್ಯ ಒತ್ತಡ ಹೇರುವುದನ್ನು

ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಸಿದ್ದಪ್ಪ ಪೂಜಾರಿ ಆಯ್ಕೆ

ರಾಷ್ಟ್ರೀಯ ಕಬಡ್ಡಿ ತಂಡಕ್ಕೆ ಸಿದ್ದಪ್ಪ ಪೂಜಾರಿ ಆಯ್ಕೆ

ಮುದ್ದೇಬಿಹಾಳ : ನಗರದ ಎಂಜಿವಿಸಿ ಕಾಲೇಜಿನ ವಿಶೇಷಚೇತನ ವಿದ್ಯಾರ್ಥಿ ವಿನಾಯಕ ಸಿದ್ದಪ್ಪ ಪೂಜಾರಿರಾಷ್ಟ್ರೀಯ ಹಿರಿಯ ಕಬಡ್ಡಿ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪಂಜಾಬಿನ ಚಂಡಿಘಡ ನಗರದಲ್ಲಿ ನಡೆಯುವ ರಾಷ್ಟ್ರೀಯ ಕಬ್ಬಡಿ ಪಂದ್ಯಾವಳಿಗಳಲ್ಲಿ ಅವರು ಭಾಗವಹಿಸಲಿದ್ದಾರೆ. ಈ ಮೂಲಕ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕೇಸಾಪೂರ ಗ್ರಾಮದ ಯುವಕನೋರ್ವ ಮೊದಲನೇ ಬಾರಿಗೆ ರಾಷ್ಟಿçÃಯ ಕಬಡ್ಡಿ ತಂಡಕ್ಕೆ ಆಯ್ಕೆ ಆಗಿರುವುದಕ್ಕೆ ಕೇಸಾಪೂರ ಗ್ರಾಮದ ಗುರುಹಿರಿಯರು ಹಾಗೂ ಯುವಕ ಮಿತ್ರರು ಪೂಜಾರಿ ಅವರನ್ನು

ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾದ ಆಕಾಶ್

ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾದ ಆಕಾಶ್

ಮುದ್ದೇಬಿಹಾಳ : ರಸ್ತೆ ಅಪಘಾತದಲ್ಲಿ ಮೃತಪಟ್ಟ ಹತ್ತು ವರ್ಷದ ಬಾಲಕನೋರ್ವನ ಕಣ್ಣುಗಳನ್ನು ದಾನ ಮಾಡುವ ಮೂಲಕ ಆತನ ಕುಟುಂಬವು ಸಾವಿನಲ್ಲೂ ಸಾರ್ಥಕತೆ ಮೆರೆದ ಮಾನವೀಯ ಘಟನೆ ನಗರದ ಬಿ.ಎಲ್.ಡಿ.ಇ (ಬಿಎಂ ಪಾಟೀಲ) ಆಸ್ಪತ್ರೆಯಲ್ಲಿ ಬುಧವಾರ ನಡೆದಿದೆ. ಮುದ್ದೇಬಿಹಾಳ ತಾಲ್ಲೂಕಿನ ಮಲ್ಲಪ್ಪ ಹರಿಜನ ಹಾಗೂ ಸುಜಾತಾ ದಂಪತಿಯ ಏಕೈಕ ಪುತ್ರ ಆಕಾಶ ಹರಿಜನ (10) ಕಳೆದ ಮಾರ್ಚ್ 22ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದನು. ಕೂಡಲೇ ಬಾಲಕನನ್ನು ಬಿ.ಎಲ್.ಡಿ.ಇ ಆಸ್ಪತ್ರೆಗೆ