ಗಂಗಾವತಿ : ನಗರದ ಗುಂಡಮ್ಮ ಕ್ಯಾಂಪನ ಗಜಾನನ ಯುವಕ ಸಂಘದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಯಶೋಧ ಆಸ್ಪತ್ರೆ ಮುಂಭಾಗದಲ್ಲಿ ಯುವಕರ ಮಧ್ಯ ನಡೆದ ಗಲಾಟೆಯಲ್ಲಿ ನಾಲ್ಕು ಯುವಕರಿಗೆ ಚಾಕು ಇರಿದ ಘಟನೆ ಜರುಗಿದೆ.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಕಳೆದ ರಾತ್ರಿ 10:30 ಕ್ಕೆ ನಗರದ ಗುಂಡಮ್ಮ ಕ್ಯಾಂಪನ ಗಣೇಶ ವಿಸರ್ಜನೆ ಸಮಯದಲ್ಲಿ ಒಂದೇ ಕೋಮಿನ ಎರಡು ಗುಂಪಿನ ಯುವಕರ ನಡುವೆ ನಡೆದ ಗಲಾಟೆಯಲ್ಲಿ ನಾಲ್ಕು ಚಾಕು ಇರಿತದಿಂದ ಗಾಯಗಳಾಗಿವೆ.
ಈ ಘಟನೆಯಲ್ಲಿ ಅಂಬೇಡ್ಕರ್ ನಗರದ ಶಿವು ತಂದೆ ದುರುಗಪ್ಪ ಎನ್ನುವ ಯುವಕನಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮಂಜು, ಶಂಕ್ರಪ್ಪ, ಸಾಗರ್ ಗಣೇಶ್, ಮನೋಹರ, ಶ್ರೀನಿವಾಸ್ ಎಂಬುವರು ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಈ ಘಟನೆಗೆ ಹಳೆ ವೈಷಮ್ಯ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಪೋಲಿಸ್ ಮೂಲಗಳು ತಿಳಿಸಿದ್ದಾರೆ.
ಈ ಘಟನೆಗೆ ಕಾರಣರಾದ ಮುತ್ತಣ್ಣ, ಧರ್ಮಣ್ಣ, ಜಂಭ, ಬಾಬು ವೆಂಕಟೇಶ ಮತ್ತು ಇತರರು ಸೇರಿ ಹದಿನೈದು ಜನರು ಹಲ್ಲೆ ಮಾಡಿದ್ದಾಗಿ ಪೋಲಿಸರು ಪ್ರಾಥಮಿಕ ತನಿಖೆಯಿಂದ ಮಾಹಿತಿ ಕಲೆ ಹಾಕಿದ್ದಾರೆ.
ಇದನ್ನೂ ಓದಿ: Rain update: ಭಾರೀ ಮಳೆಗೆ ಒಂದೇ ಕುಟುಂಬದ ಮೂವರು ಸೇರಿ ಸಿಡಿಲಿಗೆ ನಾಲ್ವರ ದುರ್ಮರಣ