Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ ₹80 ಸಾವಿರಕ್ಕೆ ಮುಟ್ಟಿದೆ. 23 10 ( 99.9 ಪರಿಶುದ್ಧತೆ) ₹300 ಏರಿಕೆಯಾಗಿ, ₹80 ಸಾವಿರದಂತೆ ಮಾರಾಟವಾಗಿದೆ. ಸ್ಟ್ಯಾಂಡರ್ಡ್ ಚಿನ್ನದ (ಶೇ 99.5 ಶುದ್ಧತೆ) ಬೆಲೆಯು ಇಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದ್ದು, ₹79,600 ತಲುಪಿದೆ.
2025ರ ಆರಂಭದಲ್ಲಿ 80 ಸಾವಿರ ದಾಟಿದ ಚಿನ್ನದ ಬೆಲೆ ವರ್ಷಾಂತ್ಯಕ್ಕೆ 90 ಸಾವಿರದ ಗಡಿ ತುಲುಪಲಿದೆ ಎಂದು ಮಾರುಕಟ್ಟೆ ಪರಿಣಿತರು ಭವಿಷ್ಯ ನುಡಿದಿದ್ದಾರೆ.
ಬೆಳ್ಳಿ ಧಾರಣೆಯು ಕೆ.ಜಿಗೆ ₹500 ಹೆಚ್ಚಳವಾಗಿ, ₹92,500ರಂತೆ ಮಾರಾಟ ವಾಗಿದೆ ಎಂದು ಅಖಿಲ ಭಾರತ ಸರಾಫ್ ಅಸೋಸಿಯೇಷನ್ ತಿಳಿಸಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಆಭರಣ ತಯಾರಕರು ಮತ್ತು ದಾಸ್ತಾನುಗಾರರಿಂದ ಖರೀದಿ ಪ್ರಮಾಣ ಹೆಚ್ಚಾಗಿದೆ. ಇದರಿಂದ ಹಳದಿ ಲೋಹದ ಧಾರಣೆ ಏರಿಕೆಯಾಗಿದೆ ಎಂದು ತಿಳಿಸಿದೆ.
‘ಮಾರುಕಟ್ಟೆಯಲ್ಲಿ ಹೆಚ್ಚಿನ ದರವಿದ್ದರೂ ಮೀಸಲು ಸಂಗ್ರಹಕ್ಕಾಗಿ ಚೀನಾವು ಸತತ ಎರಡನೇ ತಿಂಗಳು ಕೂಡ ಅಧಿಕ ಪ್ರಮಾಣದಲ್ಲಿ ಹಳದಿ ಲೋಹವನ್ನು ಖರೀದಿಸುತ್ತಿದೆ. ಇದು ಸಹ ಚಿನ್ನದ ದರ ಏರಿಕೆಗೆ ಕಾರಣವಾಗಿದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸೌಮಿಲ್ ಗಾಂಧಿ ಹೇಳಿದ್ದಾರೆ.
ಒಟ್ಟಾರೆ, ಚಿನ್ನಪ್ರಿಯರಿಗೆ ಇದು ಕಹಿ ಸುದ್ದಿಯಾಗಿದೆ. ಮುಂದೆ ಶತಕ ಬಾರಿಸಿದರೂ ಅಚ್ಚರಿ ಇಲ್ಲ. ಷೇರುಪೇಟೆ ಏರಿಳಿತ ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀಳುತ್ತಿದೆ.