ಸ್ನಾತಕೋತ್ತರ ಪತ್ರಿಕೋದ್ಯಮ ಪದವಿಯಲ್ಲಿ ಗುಮ್ಮಟ ನಗರಿಗೆ ಚಿನ್ನದ ಸಂತೋಷ

ಸ್ನಾತಕೋತ್ತರ ಪತ್ರಿಕೋದ್ಯಮ ಪದವಿಯಲ್ಲಿ ಗುಮ್ಮಟ ನಗರಿಗೆ ಚಿನ್ನದ ಸಂತೋಷ

ವಿಜಯಪುರ(ಚಡಚಣ): ಗುಮ್ಮಟ ನಗರಿ ಜಿಲ್ಲೆಯಿಂದ ಕಲ್ಪತರು ನಾಡಿನ ಕಡೆ ಉನ್ನತ ವ್ಯಾಸಂಗಕ್ಕೆ ಪಯಣ ಬೆಳೆಸಿ, ಎಲೆಕ್ಟ್ರಾನಿಕ್ ಮೀಡಿಯಾ ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಗೋಲ್ಡ್ ಮೆಡಲ್ ಮುಡಿಗೇರಿಸಿಕೊಂಡ ಯುವಕ ಸಂತೋಷ.

ತುಮಕೂರು ವಿಶ್ವವಿದ್ಯಾಲಯದ 17 ನೇ ಘಟಿಕೋತ್ಸವ ಸಮಾರಂಭದಲ್ಲಿ ಜಿಲ್ಲೆಯ ಚಡಚಣ ಪಟ್ಟಣದ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಬಗಲಿಯವರ ತೃತೀಯ ಪುತ್ರನಾದ ಸಂತೋಷ ಬಗಲಿ ‘ಚಿನ್ನದ ಪದಕ’ವನ್ನು ರಾಜ್ಯಪಾಲರಾದ ಡಾ. ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪಡೆದು ವಿಜಯಪುರ ಜಿಲ್ಲೆಯ ಕೀರ್ತಿ ಇಮ್ಮಡಿಗೊಳಿಸಿದ್ದಾನೆ.

ತುಮಕೂರಿನ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ಪದವಿ ವಿಭಾಗದ ವಿದ್ಯಾರ್ಥಿ ಸಂತೋಷ. ಚಿಕ್ಕಂದಿನಿಂದ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದು ಚಡಚಣ ಪಟ್ಟಣದಲ್ಲೆ ಬಿ.ಎಸ್.ಡಬ್ಲ್ಯೂ ಪದವಿ ವರೆಗೂ ವ್ಯಾಸಂಗ ಮುಗಿಸಿ, ಸದ್ಯ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ಶಿಕ್ಷಣದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ತನ್ನ ಕುಟುಂಬಕ್ಕೆ ಮೊದಲ ‘ಗೋಲ್ಡ್ ಮೆಡಲ್’ ನ ಸಾಧನೆ ತಂದಿದ್ದಾರೆ.

ಅಂದು ಊರಲ್ಲಿ ದಿನಪತ್ರಿಕೆಗಳನ್ನು ಮನೆ ಮನೆಗೆ ವಿತರಿಸುತ್ತಿದ್ದ ಯುವಕ ಸಂತೋಷ. ಪತ್ರಿಕೋದ್ಯಮ ಪದವಿ ಕಲಿಯಬೇಕೆಂದು ನಿರಂತರ ಅಧ್ಯಯನ ಮಾಡಿ, ಇಂದು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡು ಚಿನ್ನದ ಬೇಟೆಯಾಡಿದ್ದಾನೆ.

ಸದ್ಯ, ಬೆಂಗಳೂರು ಗ್ರಾಮಾಂತರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆಯುತ್ತಿರುವ ಸಂತೋಷ, ಮುಂದಿನ ದಿನಗಳಲ್ಲಿ ರಾಜ್ಯಪಾಲರಿಂದ ಪಿ.ಎಚ್.ಡಿ ಪದವಿ ಕೂಡಾ ಪಡೆದುಕೊಳ್ಳಬೇಕು ಎನ್ನುವ ಬಹುದೊಡ್ಡ ಕನಸು ಹೊತ್ತಿದ್ದಾನೆ.

”ತಾಳ್ಮೆ, ನಿರಂತರ ಓದು ಹಾಗೂ ಶಿಕ್ಷಕರ ಮಾರ್ಗದರ್ಶನದ ಜತೆಗೆ ಕುಟುಂಬ, ಸ್ನೇಹಿತರ ಸಹಕಾರದಿಂದ ಈ ಗೋಲ್ಡ್ ಮೆಡಲ್ ನ ಕನಸು ಸಾಕಾರವಾಯಿತು. ಈ ‘ಚಿನ್ನದ ಪದಕ’ ಇನ್ನಷ್ಟು ಓದುವ ಹವ್ಯಾಸವನ್ನು ನನ್ನಲ್ಲಿ ಪ್ರೇರಣೆ ತುಂಬಿದೆ ಎಂದಿದ್ದಾರೆ ಸಂತೋಷ ಬಗಲಿ(ಗೋಲ್ಡ್ ಮೆಡಲಿಸ್ಟ್, ಎಂಎಸ್ಸಿ ಎಲೆಕ್ಟ್ರಾನಿಕ್ ಮೀಡಿಯಾ ವಿಭಾಗದ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು)

“ಸ್ಪಷ್ಟ ಮತ್ತು ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಸಂತೋಷ ಅಧ್ಯಯನ ಮಾಡಿದ್ದನು. ಹಾಗಾಗಿ ರ‍್ಯಾಂಕ್ ಗಳಿಸಲು ಸಾಧ್ಯವಾಯಿತು. ಜೊತೆಗೆ ಉದ್ಯೋಗ ಕೂಡ ಸಿಕ್ಕಿದೆ. ಇದು ಅವರ ನಿರಂತರ ಪರಿಶ್ರಮದ ಫಲ. ರಾತ್ರಿ 9 ರ ತನಕ ನಮ್ಮಲ್ಲಿರುವ ರೇಡಿಯೋ & ಟಿವಿ ಸ್ಟುಡಿಯೋಗಳಲ್ಲಿ ಕೆಲಸ ಮಾಡಿದ್ದಾನೆ. ಇದು ಅವನ ಕಾರ್ಯತತ್ಪರತೆಯನ್ನು ಮತ್ತು ಬದ್ದತೆಯನ್ನು ತೋರಿಸುತ್ತದೆ‌ ಎಂದಿದ್ದಾರೆ‌ ಡಾ. ಬಿ.ಟಿ ಮುದ್ದೇಶ. (ನಿದೇರ್ಶಕರು, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು)

Latest News

ಹಣ ಬೇಡಿಕೆ ಇಟ್ಟಿದ್ದು ಸಾಬೀತುಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವೆ-ನಾಟೀಕಾರ

ಹಣ ಬೇಡಿಕೆ ಇಟ್ಟಿದ್ದು ಸಾಬೀತುಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವೆ-ನಾಟೀಕಾರ

ಮುದ್ದೇಬಿಹಾಳ : ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ತಾವು ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ತಮ್ಮ

ದಸ್ತು ಬರಹಗಾರರ ಸಂಘಕ್ಕೆ ಆಯ್ಕೆ

ದಸ್ತು ಬರಹಗಾರರ ಸಂಘಕ್ಕೆ ಆಯ್ಕೆ

ಮುದ್ದೇಬಿಹಾಳ : ತಾಲೂಕಾ ದಸ್ತು ಬರಹಗಾರರ ಸಂಘದ ನೂತನ ಪದಾಧಿಕಾರಿಗಳನ್ನು ಈಚೇಗೆ ಆಯ್ಕೆ ಮಾಡಲಾಯಿತು.

ಹೋರಾಟಗಾರನಿಂದ ಹಣಕ್ಕೆ ಬೇಡಿಕೆ : ಪುರಸಭೆ ಅಧ್ಯಕ್ಷ ಗೊಳಸಂಗಿ ಆರೋಪ

ಹೋರಾಟಗಾರನಿಂದ ಹಣಕ್ಕೆ ಬೇಡಿಕೆ : ಪುರಸಭೆ ಅಧ್ಯಕ್ಷ ಗೊಳಸಂಗಿ ಆರೋಪ

ಮುದ್ದೇಬಿಹಾಳ : ತಾಲ್ಲೂಕು ಪಂಚಾಯಿತಿಗೆ ಸೇರಿದ ವಸತಿ ಗೃಹಗಳನ್ನು ನೆಲಸಮಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪುರಸಭೆ

ತಾಪಂ ಕಚೇರಿ ಎದುರು ಧರಣಿ: ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಿದ ತಾಪಂ ಇಒ

ತಾಪಂ ಕಚೇರಿ ಎದುರು ಧರಣಿ: ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಿದ ತಾಪಂ ಇಒ

ಮುದ್ದೇಬಿಹಾಳ : ಗ್ರಾಮದ ದೇವತೆ ಜಾತ್ರೆಯ ಸಮಯದಲ್ಲಿ ಪಟ್ಟಣದ ಲಕ್ಷ್ಮಿ ಚಿತ್ರಮಂದಿರದ ಎದುರಿಗೆ ಇರುವ

ಆ.12 ರಂದು ಕಿಲ್ಲಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

ಆ.12 ರಂದು ಕಿಲ್ಲಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

ಮುದ್ದೇಬಿಹಾಳ : ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಆ.12 ರಂದು ನಡೆಸಲು ಊರಿನ ದೈವದವರು ನಿರ್ಣಯ ಕೈಗೊಂಡಿದ್ದಾರೆ. ಪಟ್ಟಣದ ಕುಂಬಾರ ಓಣಿಯಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಕುರಿತ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯ ಕುರಿತು ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಯಿತು. ವೇ.ಆಯ್.ಬಿ.ಹಿರೇಮಠ ಮಾತನಾಡಿ, ಆ.12 ರಂದು ದೇವರನ್ನು ಗಂಗಸ್ಥಳಕ್ಕೆ ಕರೆದೊಯ್ಯುವುದು,9ಕ್ಕೆ ಪಿಲೇಕೆಮ್ಮ ದೇವಸ್ಥಾನದಿಂದ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿಟಿ ಬಸ್ ಆರಂಭ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿಟಿ ಬಸ್ ಆರಂಭ

ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಮಾದರಿ ಎಸ್.ಸಿ.ಎಸ್.ಟಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಿತ್ಯವೂ ವಿದ್ಯಾರ್ಥಿಗಳ ಓಡಾಟಕ್ಕೆ ನಗರ ಸಾರಿಗೆ ಬಸ್‌ನ್ನು ಮಂಗಳವಾರದಿಂದ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಎಸ್.ಎಲ್.ಪಾಟೀಲ್ ತಿಳಿಸಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಿಂದ ಕಾಲೇಜಿಗೆ ಸುಮಾರು 1.50 ಕಿ.ಮೀ ದೂರವಿದ್ದು ವಿದ್ಯಾರ್ಥಿಗಳು, ಉಪನ್ಯಾಸಕರ ಓಡಾಟಕ್ಕೆ ಸಮಸ್ಯೆಯಾಗಿದ್ದನ್ನು ಸಾರಿಗೆ ಘಟಕದ ಅಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ನಗರ ಸಾರಿಗೆ ಬಸ್ ಆರಂಭಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು