ಮುದ್ದೇಬಿಹಾಳ : ಪಟ್ಟಣದ ಗ್ರಾಮದೇವತೆ ಜಾತ್ರೆಯ ಅಂಗವಾಗಿ ಭಾನುವಾರ ಸಂಜೆ ಇಲ್ಲಿನ ಪ್ರಾರ್ಥನಾ ವಿದ್ಯಾಮಂದಿರದ ಹಿಂಭಾಗದಲ್ಲಿರುವ ಕುಸ್ತಿ ಮೈದಾನದಲ್ಲಿ ರಾಷ್ಟ್ರ, ರಾಜ್ಯಮಟ್ಟದ ಕುಸ್ತಿಪಟುಗಳಿಂದ ಭರ್ಜರಿ ಕುಸ್ತಿ ಪ್ರದರ್ಶನ ನಡೆಯಿತು.
ಮಧ್ಯಪ್ರದೇಶ, ಮಹಾರಾಷ್ಟ್ರ, ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರಾಜ್ಯಮಟ್ಟದ ಕುಸ್ತಿಪಟುಗಳು ಪಾಲ್ಗೊಂಡು ಅಖಾಡವನ್ನು ರಂಗೇರಿಸಿದ್ದರು.
ವಿಶೇಷವಾಗಿ ಕುಸ್ತಿಯನ್ನು ನಿಗದಿ ಮಾಡಿದ ಪೈಲ್ವಾನ್‌ರೊಂದಿಗೆ ಆಡಿಸಿದ್ದು ಕುಸ್ತಿ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಯಿತು. ಸಾವಿರಾರು ಜನರು ಕುಸ್ತಿಯನ್ನು ವೀಕ್ಷಿಸಿದರು.