ಮುದ್ದೇಬಿಹಾಳ : ಪಟ್ಟಣದ ಶ್ರೀ ವಿನಾಯಕ ಹಾಗೂ ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಾರ್ಥ ನಿಧಿಯಿಂದ 50 ಸಾವಿರ ರೂ. ಸಹಾಯ ಧನವನ್ನು ಸಂಸ್ಥೆಯ ಯೋಜನಾಧಿಕಾರಿ ನಾಗೇಶ, ಕೃಷ್ಣಮೂರ್ತಿ ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಸೋಮವಾರ ಹಸ್ತಾಂತರಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಶಾಹೀಲ ನಾಗಠಾಣ, ಆರ್ಚ ಚಂದ್ರಕಾಂತ ಹೆಬ್ಬಾಳ, ಸದಸ್ಯರಾದ ಬಸವರಾಜ ಬೇನಾಳ, ವಿನೋದ ನಾಗಠಾಣ, ವೀರೇಶ ಅಗಸಬಾಳ ಮೊದಲಾದವರು ಇದ್ದರು.