HDK, ಯತ್ನಾಳ್ ಅಪಸ್ವರ, ಶಾ – ವಿಜಯೇಂದ್ರ ಭೇಟಿ

HDK, ಯತ್ನಾಳ್ ಅಪಸ್ವರ, ಶಾ – ವಿಜಯೇಂದ್ರ ಭೇಟಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಆಯೋಜಿಸಿರುವ ಮೈಸೂರು ಚಲೋ ಪಾದಯಾತ್ರೆಗೆ ಜೆಡಿಎಸ್ ಬೆಂಬಲ ನೀಡುತ್ತಿಲ್ಲವೆಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಬಿಜೆಪಿ ಮುಖಂಡರ ವಿರುದ್ಧ ವಾಗ್ದಾಳಿ ಬೆನಯ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಬೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಇದಕ್ಕೂ ಮುನ್ನ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ‘ರಾಜಕಾರಣ ಬೇರೆ, ಈ ರೀತಿ ಕಾರ್ಯಕ್ರಮದಿಂದ ಏನು ಸಾಧನೆ ಮಾಡಲು ಸಾಧ್ಯ? ಬಿಜೆಪಿಯವರು ನಡೆದುಕೊಂಡ ರೀತಿ ನನ್ನ ಮನಸ್ಸಿಗೆ ನೋವಾಗಿದೆ.

ಪಾದಯಾತ್ರೆ ಮುಖ್ಯಸ್ಥರನ್ನಾಗಿ ಯಾರನ್ನ ಮಾಡಿದ್ದಾರೆ? ಯಾರು ಈ ಪ್ರೀತಂಗೌಡ? ದೇವೇಗೌಡರ ಕುಟುಂಬವನ್ನ ಸರ್ವನಾಶ ಮಾಡಲು ಹೊರಟಿದ್ದವ. ಅವನನ್ನು ಸಭೆಗೆ ಕರಿತಾರೆ, ಅದಕ್ಕೆ ನನ್ನನ್ನೂ ಕರೀತಾರೆ, ನನಗೂ ಸಹಿಸೋಕೆ ಇತಿ ಮಿತಿ ಇದೆ ಎಂದು ಮಿತ್ರ ಪಕ್ಷ ಬಿಜೆಪಿಯ ಮುಖಂಡರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರ ಹಾಕಿದ್ದಾರೆ.

ಪೆನ್‌ಡ್ರೈವ್‌ ಬೀದೀಲಿ ಹಂಚೋಕೆ ಯಾರು ಕಾರಣ ಎಂದು ಬಿಜೆಪಿಗರಿಗೆ ಪ್ರಶ್ನಿಸಿರುವ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ, ನನ್ನ ಕುಟುಂಬಕ್ಕೆ ವಿಷ ಹಾಕಿದವರನ್ನ ನನ್ನ ಜೊತೇಲಿ ಕೂರಿಸ್ತಾರೆ. ಈಗ ಪಾದಯಾತ್ರೆಗೆ ನಮ್ಮ ಬೆಂಬಲ ಕೇಳ್ತಾರಾ? ಎಂದು ಹರಿಹಾಯ್ದರು.

ಯಾವುದೋ ಒಂದು ಪ್ರಕರಣ ಇಟ್ಕೊಂಡು ಪಾದಯಾತ್ರೆ ಮಾಡೋದು ಎಷ್ಚು ಸರಿ? ಜನರ ಭಾವನೆ, ನೋವಿಗೆ ಸ್ಪಂದಿಸಬೇಕಾಗಿದೆ. ರಾಜಕೀಯವೇ ನಮಗೆ ಪ್ರಾಮುಖ್ಯವಲ್ಲ ಎಂದು ಬಿಜೆಪಿ ಆಯೋಜಿಸಿರುವ ಪಾದಯಾತ್ರೆ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಕೇರಳದಲ್ಲಿ ಮಳೆಯಿಂದ ನೂರಾರು ಜನರ ಜೀವಕ್ಕೆ ಹಾನಿಯಾಗಿದೆ. ರಾಜ್ಯದಿಂದ ಹೋದವರು ವಾಪಸ್ ಬರಲು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಯೆಲ್ಲೋ, ರೆಡ್ ಅಲರ್ಟ್ ಘೋಷಣೆ ಆಗಿದೆ. ಮತ್ತೊಂದೆಡೆ, ಈಗ ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸುವ ಸಮಯ. ಹೀಗಾಗಿ ಪಾದಯಾತ್ರೆಯಲ್ಲಿ ಜೆಡಿಎಸ್​​​ ಭಾಗವಹಿಸುವುದಿಲ್ಲ ಎಂದು ಅವರು ತಿಳಿಸಿದರು.

ಬಿಜೆಪಿಯ ಪಾದಯಾತ್ರೆ ಬಗ್ಗೆ ಅವರೇ ತೀರ್ಮಾನ ತೆಗೆದುಕೊಂಡು ಮಾಡುತ್ತಿದ್ದಾರೆ. ಈ ಸಮಯದಲ್ಲಿ ಪಾದಯಾತ್ರೆ ಸೂಕ್ತವಲ್ಲ ಎಂಬುದು ನಮ್ಮ ನಿಲುವು. ಹೀಗಾಗಿ ಅದರಿಂದ ಹಿಂದೆ ಸರಿದಿದ್ದೇವೆ. ಆ ಭಾಗದ ಜನರ ಭಾವನೆ ಮುಖ್ಯ. ಹಾಗಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಲ್ಲ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ಮತ್ತೊಂದೆಡೆ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಪಾದಯಾತ್ರೆಗೆ ಅಪಸ್ವರ ತೆಗೆದಿದ್ದು, ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಪ್ರರ್ಯಾಯ ಪಾದಯಾತ್ರೆಯ ಬಗ್ಗೆ ಚರ್ಚೆ ನಡೆಸಿದ್ದು, ಕೂಡಲಸಂಗಮ ಅಥವಾ ಹುಬ್ಬಳ್ಳಿಯಿಂದ ಬಳ್ಳಾರಿಯವರೆಗೆ ಹೆಜ್ಜೆ ಹಾಕಲು ಸಮಾಲೋಚನೆ ನಡೆಸುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೆ, ವಿಜಯೇಂದ್ರ ಅವರು ಅಮಿತ್ ಶಾ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಅಮಿತ್ ಶಾ ಭೇಟಿ ಕುರಿತು ಟ್ವಿಟ್ ಮಾಡಿರುವ ವಿಜಯೇಂದ್ರ, ನವದೆಹಲಿಯಲ್ಲಿಂದು ಕೇಂದ್ರ ಗೃಹ ಸಚಿವರಾದ ಅಮಿತ್ ಶಾಅವರನ್ನು ಭೇಟಿಯಾಗಿ ಪಕ್ಷದ ಸಂಘಟನಾತ್ಮಕ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು.

ಭ್ರಷ್ಟ ಕಾಂಗ್ರೆಸ್ ಸರ್ಕಾರದ ಹಗರಣಗಳ ಕುರಿತ ಮಾಹಿತಿ ವಿವರಗಳನ್ನು ನೀಡಲಾಯಿತು.

ಸಂಘಟನೆಯ ಕುರಿತು ನಿರಂತರ ಮಾರ್ಗದರ್ಶನ ನೀಡುತ್ತಾ ಬಂದಿರುವ ಅವರು ಕರ್ನಾಟಕದ ಪ್ರಸ್ತುತ ಬೆಳವಣಿಗೆಯಲ್ಲಿ ಪಕ್ಷ ನಿರ್ವಹಿಸುತ್ತಿರುವ ರೀತಿ-ನೀತಿಗಳ ಕುರಿತು ಮೆಚ್ಚುಗೆ ಸೂಚಿಸಿದರು.

ಪಕ್ಷ ಬಲವೃದ್ಧಿಗೆ ಪ್ರೇರಣೆ ತುಂಬುವ ಚೈತನ್ಯಶೀಲ ವ್ಯಕ್ತಿತ್ವದ ಅಮಿತ್ ಶಾ ಅವರ ಇಂದಿನ ಭೇಟಿ ನನ್ನಲ್ಲಿ ಅದಮ್ಯ ಉತ್ಸಾಹ ತುಂಬಿದೆ ಎಂದು ಬರೆದುಕೊಂಡಿದ್ದು, ಕುಮಾರಸ್ವಾಮಿ ಮುನಿಸು, ಯತ್ನಾಳ್ ಇಕ್ಕಟ್ಟಿನ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ.

Latest News

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: ನಿಮಗೆ ತಕ್ಷಣ ಹಣದ ಅವಶ್ಯಕತೆ ಇದೆಯಾ? ಶ್ಯೂರಿಟಿ ಇಲ್ಲದೆ ಸಾಲ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಮುದ್ದೇಬಿಹಾಳ : ಅನಿರೀಕ್ಷಿತ ಫಲಿತಾಂಶವನ್ನು ಇಲ್ಲಿನ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ನೂತನ

ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?;                                                                           ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ..?

ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ ?; ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಹೊಸಬರ ಆಯ್ಕೆ..?

ಮುದ್ದೇಬಿಹಾಳ : ಪಟ್ಟಣದ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ₹601 5G ರೀಚಾರ್ಜ್ ಯೋಜನೆಯು Jio ಬಳಕೆದಾರರಿಗೆ, ವಿಶೇಷವಾಗಿ ಇಡೀ ವರ್ಷಕ್ಕೆ ಅನಿಯಮಿತ 5G ಡೇಟಾವನ್ನು ಬಯಸುವವರಿಗೆ ಆಕರ್ಷಕ ಕೊಡುಗೆಯಾಗಿದೆ. Jio ₹601 5G ರೀಚಾರ್ಜ್ ಯೋಜನೆ ಮುಖ್ಯಾಂಶಗಳು ವೆಚ್ಚ : ಒಂದು ವರ್ಷಕ್ಕೆ ₹601.ಪ್ರಯೋಜನಗಳು : 12 ತಿಂಗಳವರೆಗೆ ಅನಿಯಮಿತ 5G ಡೇಟಾ.ಅರ್ಹತೆ : Jio 5G ಸಿಮ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.ವಿನಾಯಿತಿಗಳು : 4G ಸಿಮ್ ಬಳಕೆದಾರರಿಗೆ ಅನ್ವಯಿಸುವುದಿಲ್ಲ. Join Our Telegram: https://t.me/dcgkannada ಈ

RRB GROUP D RECRUITMENT ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ನೇಮಕಾತಿ

RRB GROUP D RECRUITMENT ರೈಲ್ವೆ ಇಲಾಖೆಯಲ್ಲಿ 32,000 ಹುದ್ದೆಗಳ ನೇಮಕಾತಿ

RRB GROUP D RECRUITMENT: ಭಾರತೀಯ ರೈಲ್ವೆ ಇಲಾಖೆಯು ಬರೋಬ್ಬರಿ 32 ಸಾವಿರ ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ಈ ಕುರಿತು ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಿಗೆ SSLC ಪಾಸಾದ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. Join Our Telegram: https://t.me/dcgkannada ಆರಂಭಿಕ ವೇತನವು 18000 ರೂ. ಇರುತ್ತದೆ. ಸದ್ಯದಲ್ಲಿಯೇ ಅರ್ಜಿ ಸ್ವೀಕೃತಿಯು ಆರಂಭವಾಗಲಿದೆ. ನಂತರ ಪರೀಕ್ಷೆ ದಿನಾಂಕವನ್ನು ಬಿಡುಗಡೆ ಮಾಡಲಾಗುತ್ತದೆ. 2024 ನೇ