ಮುದ್ದೇಬಿಹಾಳ : ಪಟ್ಟಣದ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಚುನಾವಣೆಗೆ ಸ್ಪರ್ಧಿಸಿರುವ ದಿ.ಎಸ್.ಜಿ.ಪಾಟೀಲ್ ಶೃಂಗಾರಗೌಡ ಪೆನಲ್‌ದ ಅಭ್ಯರ್ಥಿಗಳು ಸೋಮವಾರ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೋಡ್ ಶೋ ನಡೆಸಿ ಕೈ ಮುಗಿದು ಮತಯಾಚಿಸಿದರು.
ಪಟ್ಟಣದ ಬಜಾರ ಹನುಮಾನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಚಾರ
ಕಾರ್ಯ ಆರಂಭಿಸಿದ ಅಭ್ಯರ್ಥಿಗಳು ಬ್ಯಾಂಕಿನ ಏಳ್ಗೆಗೆ , ಗ್ರಾಹಕರ ಅಭಿವೃದ್ಧಿಗೆ ತಮ್ಮನ್ನು ಬೆಂಬಲಿಸುವAತೆ ಮನವಿ ಮಾಡಿಕೊಂಡರು.
ಹಾಲಿ ಅಧ್ಯಕ್ಷ ಸತೀಶ ಓಸ್ವಾಲ್, ನಿರ್ದೇಶಕ ರಾಜಶೇಖರ ಕರಡ್ಡಿ ಮಾತನಾಡಿ, ಊರಿನ ಹಿರಿಯರ ಸಲಹೆಯಂತೆ ಬ್ಯಾಂಕಿನ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಪರ ಊರಿನ ಗಣ್ಯರು ಮತಯಾಚನೆಗೆ ಆಗಮಿಸಿರುವುದು ನಮಗೆ ಬಲ ತಂದುಕೊಟ್ಟಿದೆ. ಪಾರದರ್ಶಕವಾಗಿ ವ್ಯವಹಾರ ನಡೆಸಿದ್ದರಿಂದಲೇ ಗ್ರಾಹಕರು ನಮ್ಮ ಮೇಲೆ ವಿಶ್ವಾಸ ಇರಿಸಿದ್ದು ಅದನ್ನು ಉಳಿಸಿಕೊಂಡು ಮುಂದೆ ಸಾಗುವುದಾಗಿ ಹೇಳಿದರು.
ಪಟ್ಟಣದ ಪ್ರಮುಖ ರಸ್ತೆ, ಸರಾಫ ಬಜಾರ, ಅಂಬೇಡ್ಕರ್ ಸರ್ಕಲ್, ಏಪಿಎಂಸಿಯಲ್ಲಿ ಅಭ್ಯರ್ಥಿಗಳು ಮತಯಾಚನೆ ಮಾಡಿದರು.ಪೆನಲ್‌ನ ಅಭ್ಯರ್ಥಿಗಳು, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಬಿ.ಪಿ.ಕುಲಕರ್ಣಿ, ಎಂ.ಬಿ.ನಾವದಗಿ, ಬಸವರಾಜ ನಂದಿಕೇಶ್ವರಮಠ, ಬಾಬು ಬಿರಾದಾರ, ವಕೀಲರಾದ ಎಂ.ಎಸ್.ನಾವದಗಿ,ಗುರುಸ್ವಾಮಿ ಬೂದಿಹಾಳಮಠ, ಚನ್ನಬಸ್ಸು ಗುಡ್ಡದ, ಎ.ಗಣೇಶ ನಾರಾಯಣಸ್ವಾಮಿ, ವಾಯ್.ಎಚ್.ವಿಜಯಕರ್, ಹುಲಗಪ್ಪ ನಾಯ್ಕಮಕ್ಕಳ,ಮಹಾಂತೇಶ ಬೂದಿಹಾಳಮಠ, ಶರಣು ಸಜ್ಜನ ಮೊದಲಾದವರು ಪಾಲ್ಗೊಂಡಿದ್ದರು.