ಮುದ್ದೇಬಿಹಾಳ : ಮಾಧ್ಯಮಗಳು ಇಂದು ಜಾಹೀರಾತು ಕೊಟ್ಟವರನ್ನು ಓಲೈಸುವ ಸ್ಥಿತಿಯಲ್ಲಿವೆ.ನಿಜವಾಗಿಯೂ ನೊಂದವರ,ಶೋಷಿತರ ಪರವಾಗಿ ಧ್ವನಿಯಾಗಿ ನಿಲ್ಲುವ ಕಾರ್ಯ ಮಾಧ್ಯಮಗಳು ಮಾಡಬೇಕು ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಚೆನ್ನವೀರ ಶಿವಾಚಾರ್ಯರು ಹೇಳಿದರು.
ತಾಲ್ಲೂಕು ಕುಂಟೋಜಿಯ ಶ್ರೀ ಬಸವೇಶ್ವರ ದೇವಸ್ಥಾನದ ಯಾತ್ರಿ ನಿವಾಸದ ಸಭಾಂಗಣದಲ್ಲಿ ಯಶಸ್ವಿನಿ ಮಹಿಳಾ ಸ್ವ ಸಹಾಯ ಸಂಘ, ಹೆಬ್ಬಾಳ ಪಬ್ಲಿಸಿಟಿ ಹಾಗೂ ಜನರಕೂಗು ಬಳಗದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಿದ್ಧೇಶ್ವರ ಸ್ವಾಮೀಜಿಯವರ ಸ್ಮರಣೆ,ದಿನದರ್ಶಿಕೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಿಕೆಗಳು ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಉಳಿಸಿಕೊಂಡಿವೆ.ಆದರೆ ಜಾಹೀರಾತು ಒಂದು ಭಾಗವಾಗಿರಲಿ,ಅದೇ ಪ್ರಧಾನವಾದರೆ ಸಮಾಜದ ವ್ಯವಸ್ಥೆಯಲ್ಲಿ ಮಾಧ್ಯಮ ರಂಗದ ಅಸ್ತಿತ್ವದ ಬಗ್ಗೆಯೂ ಆತಂಕಪಡುವAತಾಗುತ್ತದೆ ಎಂದರು.
ಮಾಜಿ ಸೈನಿಕ ನಾಗಲಿಂಗಯ್ಯ ಮಠ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿಯವರು ಈ ಶತಮಾನದ ಸಂತರಾಗಿದ್ದು ಅವರ ಬಗ್ಗೆ ಮಾತನಾಡುವುದಕ್ಕೆ ಒಂದು ದಿನ ಸಾಕಾಗುವುದಿಲ್ಲ.ಅವರು ನುಡಿದಂತೆ ನಡೆದ ದಾರ್ಶನಿಕರು.ಅವರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದರು.
ಜಿಪಂ ನಿವೃತ್ತದ ಅಧಿಕಾರಿ ಬಿ.ಎಚ್.ಹೂಗಾರ, ಬಿಇಒ ಕಚೇರಿ ಲಿಪಿಕ ನೌಕರರ ಸಂಘದ ಅಧ್ಯಕ್ಷ ಶರಣು ಹಿರೇಮಠ, ಪತ್ರಕರ್ತ ಶಂಕರ ಹೆಬ್ಬಾಳ ಮಾತನಾಡಿದರು.ಯಶಸ್ವಿನಿ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಪಾರ್ವತಿ ಕೋಳೂರು, ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಲ್ಲಳ್ಳಿ, ಹೆಸ್ಕಾಂ ಅಧಿಕಾರಿ ಶಿವಪ್ಪ ಆರೇಶಂಕರ, ಪತ್ರಕರ್ತ ಗುಲಾಮಮೊಹ್ಮದ ದಫೇದಾರ, ವಕೀಲರಾದ ಸಿ.ವಿ.ಊರಾನ ಇದ್ದರು.