ಪಾಟ್ನಾ: ವ್ಯಕ್ತಿಯೊಬ್ಬ ಮದುವೆಯಾದ ಬಳಿಕ ಹೆಂಡತಿಯನ್ನು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿರುವ ಅಪರೂಪದ ಘಟನೆಯೊಂದು ಬಿಹಾರದಲ್ಲಿ ಬೆಳಕಿಗೆ ಬಂದಿದೆ.
ಬಿಹಾರದ ರಾಮನಗರ ಗ್ರಾಮದ ನಿವಾಸಿಯಾದ ರಾಜೇಶ್ ಕುಮಾರ್ (26) ಎಂಬಾತ, ತನ್ನ ಹೆಂಡತಿ ಖುಷ್ಟೂಳನ್ನು (22) ಆಕೆಯ ಮಾಜಿ ಪ್ರಿಯತಮನೊಂದಿಗೆ ಮದುವೆ ಮಾಡಿಸಿದ್ದಾನೆ.
ರಾಜೇಶ್ ಕುಮಾರ್ ಮನೆಯಲ್ಲಿ ಇಲ್ಲದಿದ್ದಾಗ ಆತನ ಪತ್ನಿ ಖುಷ್ಟೂ ಪ್ರಿಯಕರ ಚಂದನ್‌ನನ್ನು (24) ಮನೆಗೆ ಕರೆಸಿದ್ದಳು. ಇಬ್ಬರೂ ಮನೆಯಲ್ಲಿ ಸರಸವಾಡುತ್ತಿದ್ದಾಗಲೇ ರಾಜೇಶ್ ಕುಮಾರ್ ಮನೆಗೆ ಬಂದಿದ್ದಾನೆ. ಆಗ ಇಬ್ಬರ ಪ್ರೇಮಪುರಾಣ ಬಯಲಾಗಿದೆ.
ಪತ್ನಿಯು ತನಗೆ ಮೋಸ ಮಾಡಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಗಲಾಟೆ ಮಾಡದೆ, ಚಂದನ್ ಮೇಲೆ ಹಲ್ಲೆ ನಡೆಸದೆ, ಕೋಪದ ಕೈಗೆ ಬುದ್ಧಿಯನ್ನೂ ಕೊಡದ ರಾಜೇಶ್ ಕುಮಾರ್, ಖುಷ್ಟೂ ಹಾಗೂ ಚಂದನ್‌ರ ಮದುವೆ ಮಾಡಿಸಿದ್ದಾರೆ.
ಇಡೀ ಗ್ರಾಮದ ಜನರನ್ನು ಕರೆಸಿ, ಅವರನ್ನು ಸ್ಥಳೀಯ ದೇವಾಲಯಕ್ಕೆ ಕರೆದುಕೊಂಡು ಹೋಗಿ, ಇಬ್ಬರಿಗೂ ಮದುವೆ ಮಾಡಿಸಿದ್ದಾರೆ. ಮದುವೆ ಮಾಡಿಸಿದ ಬಳಿಕ ಅವರಿಗೆ ಶುಭ ಹಾರೈಸಿ, ಬೀಳ್ಕೊಟ್ಟಿದ್ದಾರೆ.