ಮುದ್ದೇಬಿಹಾಳ : ನಾಗರಬೆಟ್ಟ ಏತನೀರಾವರಿ ಯೋಜನೆಗೆ ಸಂಬoಧಿಸಿದoತೆ ಅಲ್ಲಿ ಕುಟುಂಬವೊoದರ ವಯಕ್ತಿಕ ಸಮಸ್ಯೆ ಇದ್ದು ಅದನ್ನು ಗ್ಯಾರಂಟಿ ಸಮೀತಿ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಅವರಿಗೆ ಪರಿಹಾರಕ್ಕೆ ಜವಾಬ್ದಾರಿ ವಹಿಸಿದ್ದೇವೆ.ಅವರನ್ನು ರೈತರನ್ನು ಕರೆದು ಮಾತನಾಡಿಸಿದ್ದೇವೆ.ಶೀಘ್ರದಲ್ಲಿ ಆ ಸಮಸ್ಯೆ ಬಗೆ ಹರಿಯುವ ವಿಶ್ವಾಸವಿದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಮುದ್ದೇಬಿಹಾಳದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾಗರಬೆಟ್ಟ ಏತ ನೀರಾವರಿ ಯೋಜನೆಯನ್ನು ಎಸ್.ಎನ್.ಬಿರಾದಾರ ಎಂಬ ಗುತ್ತಿಗೆದಾರರು ಮಾಡುತ್ತಿದ್ದಾರೆ.ರಾಜಕಾರಣಿಯೊಬ್ಬರು ಕೆಲವು ಮಾತುಗಳನ್ನು ಈ ವಿಚಾರವಾಗಿ ಆಡಿದ್ದಾರೆ.ಅದು ಮೂರ್ಖತನದ ಪರಮಾವಧಿ.ಗುತ್ತಿಗೆದಾರರನ್ನು ಎಲ್ಲಿಯೂ ನಾನು ಭೇಟಿಯಾಗುವಂತೆ ಹೇಳಿಲ್ಲ.ಅವರಿಂದ ಒಂದು ಕಪ್ ಚಹಾ ಅಲ್ಲ ನೀರನ್ನೂ ಕುಡಿದಿಲ್ಲ.ಇಂತಹ ಆರೋಪ ಮಾಡಿರುವವರು ಅದನ್ನು ಸಾಕ್ಷಿ ಸಮೇತ ಸಾಬೀತು ಮಾಡಬೇಕು.ಸಾಬೀತು ಮಾಡಿದರೆ ನಾನು ರಾಜಕೀಯದಿಂದ ನಿವೃತ್ತಿ ಆಗುತ್ತೇನೆ.ಇಲ್ಲದಿದ್ದಲ್ಲಿ ನೀವು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಶಾಸಕ ನಾಡಗೌಡರು ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೆಸರು ಹೇಳದೇ ಸವಾಲು ಹಾಕಿದರು.
ಕೆಲವರು ಯಾರ ಬೆಳವಣಿಗೆಯನ್ನು ಸಹಿಸುವುದಿಲ್ಲ.ಒಳ್ಳೆಯವರನ್ನು ಗುಣಗಾಣವನ್ನು ಮಾಡುವುದಿಲ್ಲ.ಅವರದ್ದು ಸ್ಯಾಡಿಸ್ಟ ಮನೋಭಾವದವರು ಇದ್ದಾರೆ.ಇವರನ್ನು ಯಾಕೆ ಕಾರ್ಯಕ್ರಮಗಳಿಗೆ ಜನ ಕರೆಸುತ್ತಾರೆಯೋ ಗೊತ್ತಿಲ್ಲ.ದೊಡ್ಡವರನ್ನು ಬಯ್ಯುವುದಕ್ಕೆ ಕರೆಸುತ್ತಾರೆಯೋ ಹೇಗೆ ? ಇನ್ನು ಮುಂದೆ ಅಂತಹ ಸಮಾರಂಭಕ್ಕೆ ನಾನು ಹೋಗುವುದಿಲ್ಲ.ಅಂತಹವರನ್ನು ಕರೆದುಕೊಂಡು ಕಾರ್ಯಕ್ರಮ ಮಾಡಿ ಎಂದು ಹೇಳಿದರು.
ಕೆಲಸ ಬಾಕಿ ಇದೆ ಎನ್ನುವ ಅವರು, ಅವರ ಮಾವನೇ ಆ ಕೆಲಸ ಮಾಡುತ್ತಿದ್ದಾರೆ.ಅದನ್ನು ಪರಿಗರಿಸುವುದಕ್ಕೆ ಏನು ಪ್ರಯತ್ನ ಮಾಡಿದ್ದಾರೆ.ಗುತ್ತಿಗೆದಾರರ ಬಗ್ಗೆ ಗೌರವ ಇದೆ.ಆದರೆ ನೀವು ಚುನಾವಣೆ ಇದ್ದಾಗ ೧೫ ದಿನ ಮುಂಚೆ ಬಂದು ನಮ್ಮನ್ನು ಸೇರಿಕೊಂಡಿದ್ದಿರಿ.ಆದರೆ ಉದ್ಧಟತಬದ ಮಾತು ಸರಿಯಲ್ಲ.ಸಿನೇಮಾದಲ್ಲಿ ಹಿರೋಯಿನ್ ಜಗ್ಗಾಡುವಾಗ ಜನ ಸೀಟಿ ಹೊಡೆದು ಚಪ್ಪಾಳೆ ತಟ್ಟುತ್ತಾರಲ್ಲ.ಆ ಮನಸ್ಥಿತಿ ಜನ ಇವರು ಎಂದು ಮುಖಂಡ ಶಾಂತಗೌಡ ಪಾಟೀಲ ನಡಹಳ್ಳಿ ಹೆಸರು ಹೇಳದೇ ಟೀಕಿಸಿದರು.
‘ಕೆಲವರದ್ದು ಸ್ಯಾಡಿಸ್ಟ್ ಮನೋಭಾವ’ ಗುತ್ತಿಗೆದಾರರಿಂದ ನಯಾಪೈಸೆ ಕೇಳಿದ್ದರೆ ರಾಜಕೀಯ ನಿವೃತ್ತಿ-ನಾಡಗೌಡ
‘ಕೆಲವರದ್ದು ಸ್ಯಾಡಿಸ್ಟ್ ಮನೋಭಾವ’ ಗುತ್ತಿಗೆದಾರರಿಂದ ನಯಾಪೈಸೆ ಕೇಳಿದ್ದರೆ ರಾಜಕೀಯ ನಿವೃತ್ತಿ-ನಾಡಗೌಡ
Latest News
ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’
ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ
ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್
ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ
ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ
ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ
ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ
ಮುದ್ದೇಬಿಹಾಳ : ಕರ್ನಾಟಕ ವಕ್ಭ್ ಕಾಯ್ದೆ 1995ರ ಸಂಬAಧಿತ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ
ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!
ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ ಚುನಾವಣಾಧಿಕಾರಿಗಳಿಂದ ಆಗದೇ ಇರುವುದು ಅಚ್ಚರಿ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಂತೆ ಫಲಿತಾಂಶ ಪ್ರಕಟಿಸಿರುವ ಚುನಾವಣಾಧಿಕಾರಿಯೂ ಆಗಿರುವ ಔದ್ರಾಮ್ ಹಾಗೂ ಕೇರ್ಟೇಕರ್ ಆಗಿರುವ ತಬಸ್ಸುಮ ಮುಲ್ಲಾ ಅವರು ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ಕೊಡದೇ ಇರುವುದು ಯಾತಕ್ಕಾಗಿ ಎಂಬುದು ಆಯ್ಕೆಯಾಗಿರುವ ಹಲವು ಸದಸ್ಯರ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾನೂನು ಬದ್ಧವಾಗಿ
ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ
ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರು ಅವರು ಎಂದು ತಹಶೀಲ್ದಾರ್ ಆನಂದ ಕೋಲಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ಇರುವ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎ.ಗಣೇಶ ಅನ್ನಗೌನಿ,ಮುಖಂಡರಾದ ಟಿ.ವಿಜಯಭಾಸ್ಕರ್,ಎ.ಚಂದ್ರಶೇಖರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ







