ಲಖನೌ: ಮನೆಯಲ್ಲಿ ಮುದ್ದಾದ ಮಡದಿ ಇದ್ದರೂ ಹೊರಗೆ ಅಕ್ರಮ ಸಂಬಂಧ (Extra Marital Affair) ಇಟ್ಟುಕೊಳ್ಳುವ ಮಂದಿಗೆ ಇದು ಎಚ್ಚರಿಕೆ ಗಂಟೆ!
ವ್ಯಕ್ತಿಗೆ ಮದುವೆಯಾಗಿದೆ ಎಂಬುದು ಗೊತ್ತಿದ್ದರೂ ಆತನ ಬಲೆಗೆ ಬೀಳುವ ಹೆಣ್ಣುಮಕ್ಕಳು ಇರುತ್ತಾರೆ. ಇಲ್ಲವೇ ಹೆಣ್ಣುಮಕ್ಕಳೇ ಆತನನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆ. ಇಂತಹದೇ ಪ್ರಕರಣ ಉತ್ತರ ಪ್ರದೇಶದಲ್ಲಿ (Uttar Pradesh) ಬೆಳಕಿಗೆ ಬಂದಿದೆ.
ವ್ಯಕ್ತಿಯೊಬ್ಬರು ಮನೆಯಲ್ಲಿ ಪತ್ನಿ ಇದ್ದರೂ, ಸರ್ಕಾರಿ ಗೆಸ್ಟ್‌ಹೌಸ್‌ನಲ್ಲಿ ಮಹಿಳಾ ಇನ್ಸ್‌ಪೆಕ್ಟರ್ ಜತೆ ಕಾಲ ಕಳೆಯುವಾಗ ತಗಲಾಕಿಕೊಂಡಿದ್ದಾನೆ. ಪತಿ ಹಾಗೂ ಮಹಿಳಾ ಇನ್ಸ್‌ಪೆಕ್ಟರ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿಯು ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ. ಈ ವಿಡಿಯೊ (Viral Video) ಈಗ ವೈರಲ್ ಆಗಿದೆ.
#आगरा में एक पुलिस इंस्पेक्टर का पत्नी से तलाक का केस चल रहा था. इसी बीच साहब "नई कहानी" शुरू कर दी. जिले में थानेदार महिला इंस्पेक्टर से नैन लड़ गये
— Narendra Pratap (@hindipatrakar) August 3, 2024
बेफिक्री थी, मगर पत्नी के घरवालों ने रंगेहाथ सरकारी आवास में प्रेम करते पकड़ लिया
दोनो की सरेआम जमकर पिटाई की जालिमों ने pic.twitter.com/creRmSatPO
ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುವ ವ್ಯಕ್ತಿಯೋರ್ವನು ಮದುವೆಯಾಗಿದ್ದರೂ, ಮನೆಯಲ್ಲಿ ಪತ್ನಿ ಇದ್ದರೂ, ಆಗ್ರಾದಲ್ಲಿರುವ ಪೊಲೀಸ್ ಗೆಸ್ಟ್ ಹೌಸ್‌ನಲ್ಲಿ ಮತ್ತೊಬ್ಬ ಮಹಿಳಾ ಇನ್ಸ್‌ಪೆಕ್ಟರ್ ಜತೆ ಕಾಲ ಕಳೆಯುತ್ತಿದ್ದರು. ವಿಷಯ ತಿಳಿದ ವ್ಯಕ್ತಿಯ ಪತ್ನಿಯು ನೇರವಾಗಿ ಸರ್ಕಾರಿ ವಿಶ್ರಾಂತಿ ಗೃಹಕ್ಕೆ ಆಗಮಿಸಿದ್ದಾರೆ. ಅಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಇನ್ಸ್‌ಪೆಕ್ಟರ್ ಒಟ್ಟಿಗೆ ಇರುವುದನ್ನು ಕಂಡು ಗಲಾಟೆ ಮಾಡಿದ್ದಾರೆ. ಏನಿದು ಹುಡುಗಾಟ ಎಂದು ಜೋರಾಗಿ ಪ್ರಶ್ನಿಸಿದ್ದಾರೆ.