ಮುದ್ದೇಬಿಹಾಳ : ದೇಶದ ಸ್ವಾತಂತ್ರ್ಯಕ್ಕಾಗಿ ಹಲವು ಗಣ್ಯರು ತಮ್ಮ ಪ್ರಾಣಾರ್ಪಣೆ ಮಾಡಿದ್ದಾರೆ.ಅವರ ತ್ಯಾಗದ ಫಲವೇ ನಾವು ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ವಾಗಿದೆ. ಅದನ್ನು ಉಳಿಸಿಕೊಂಡು ಸಾಗುವ ಹೊಣೆ ನಮ್ಮೆಲ್ಲರದು ಎಂದು ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ ಹೇಳಿದರು.
ಪಟ್ಟಣದ ಅಭ್ಯುದಯ ಶಿಕ್ಷಣ ಸಂಸ್ಥೆಯ ಹಾಸ್ಟೆಲ್ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮಹನೀಯರ ಸ್ಮರಣೆಗೆ ಸರಕಾರ ಮುಂದಾಗಿದ್ದು ಅಪ್ರತಿಮ ಹೋರಾಟಗಾರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರವನ್ನು ಈ ವರ್ಷದಿಂದ ಎಲ್ಲ ಕಡೆ ಪೂಜಿಸುವಂತೆ ತಿಳಿಸಿರುವುದಕ್ಕೆ ಸರ್ಕಾರಕ್ಕೆ ಅಭಿನಂದಿಸುವುದಾಗಿ ಹೇಳಿದರು.
Join Our Telegram: https://t.me/dcgkannada
ಕಾರ್ಯಕ್ರಮದಲ್ಲಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ, ಬಿ.ಎಚ್.ಹಾಲಣ್ಣವರ, ಎಂ.ಬಿ.ಕೆಸರಟ್ಟಿ, ಯಮನಪ್ಪ ಕುರಿ,ಭೀಮಶೆಪ್ಪ ಮದರಿ,ರವಿ ಜಗಲಿ, ಪ್ರಾಚಾರ್ಯ ಎಂ..ಧನ್ನೂರ,ಬಿ.ಜಿ.ಬಿರಾದಾರ,ಅಭ್ಯುದಯ ಇಂಟರ್‌ನ್ಯಾಶನಲ್ ಸ್ಕೂಲ್ ಮುಖ್ಯಗುರು ಎಚ್.ಬಿ.ಜಾಯವಾಡಗಿ ಇದ್ದರು.
ಇದನ್ನೂ ಓದಿ: ಆರ್ಥಿಕ ಸಮಾನತೆ ಎಲ್ಲ ವರ್ಗದವರಿಗೂ ವಿಸ್ತರಿಸಲಿ: ನಾಡಗೌಡ
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಓಲಂಪಿಕ್ಸ್ನಲ್ಲಿ ಭಾರತದ ಕ್ರೀಡಾಪಟುಗಳು ಗಳಿಸಿದ ಪದಕದ ಮಾಹಿತಿ ಕುರಿತು ರಚಿಸಿದ ರಂಗೋಲಿ ಚಿತ್ರ ಗಮನ ಸೆಳೆಯಿತು. ವಿದ್ಯಾರ್ಥಿಗಳಿಂದಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
