ಯಾದಗಿರಿ: ಜಿಲ್ಲೆಯ ಹುಣಸಗಿ ತಾಲೂಕಿನ ಮಾರನಾಳ ತಾಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾನ ಮಾಡಲಾಯಿತು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಿ: https://t.me/dcgkannada
ಮಾರನಾಳ ತಾಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾನ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳ ವರ್ಗಾವಣೆ ಪ್ರಯುಕ್ತ ಈ ಕಾರ್ಯ ಆಯೋಜಿಸಲಾಗಿತ್ತು.
ಮೂರ್ತಿ ನಿರ್ಮಾಣವು ಗ್ರಾಮಸ್ಥರು ದೇಣಿಗೆ ಹಾಗೂ ಸರ್ಕಾರದ ಹಿರಿಯರ ಪ್ರಾಥಮಿಕ ಶಾಲೆ ಅನುದಾನದಲ್ಲಿ 6 ಫಿಟ್ ಎತ್ತರ 4 ಫಿಟ್ ಅಡ್ಡ ಅಳತೆಯ ಸರಸ್ವತಿ ಮೂರ್ತಿ ಪ್ರತಿಷ್ಠಾಣ ಮಾಡಲಾಯಿತು.
ಇದರ ಜೊತೆಯಲ್ಲಿ ವರ್ಗಾವಣೆಯಾದ ಮುಖ್ಯ ಶಿಕ್ಷಕ ಕೊಟ್ರೇಶ್ ಬಿ. ಕೊಳುರ, ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಹುಣಸಗಿ ತಾಲ್ಲೂಕಿನ ಅಧ್ಯಕ್ಷ ಡಾ. ಶಿವು ರಾಠೋಡ್, ಪಿಎಸ್ಐ ರಾಜಶೇಖರ್ ರಾಠೋಡ್ ಅವರನ್ನು ಸನ್ಮಾನಿಸಲಾಯಿತು.
ಪಿಎಸ್ಐ ರಾಜಶೇಖರ ರಾಠೋಡ್ ಮಕ್ಕಳಿಗೆ ಕಾನೂನು ಜಾಗೃತಿ ಮೂಡಿಸಿದರು.
ಇದನ್ನೂ ಓದಿ: Viral video: ರೀಲ್ಸ್ ಗಾಗಿ ನಾಗರ ಹಾವನ್ನೇ ಕಚ್ಚಿ ನಿಂತ ಯುವಕ! ಆಮೇಲ್ ಆಗಿದ್ದು ದೊಡ್ದುಡ ದುರಂತ! (ವೈರಲ್ ವಿಡಿಯೋ ನೋಡಿ)
ಈ ವೇಳೆ ಓಂ ಪ್ರಕಾಶ ಪತ್ತಾರ್, ಬಸಲಿಂಗಪ್ಪ ಹಿರೇಮಠ, ಪವಿತ್ರ ಎಸ್, ರುದ್ರಮ್ಮ, ಭಾವನೇಶ್ವರಿ, ರೇಷ್ಮಾ ಖಾಜಿ, ತಿರುಪತಿ ರಾಠೋಡ್, ಮಾಹಾದೇವ ರಾಠೋಡ್, ಆನಂದ ಕೆರೆಹೋಲ ಇದ್ದರು.