ಮುದ್ದೇಬಿಹಾಳ: ತಾಲ್ಲೂಕು ಆಡಳಿತದಿಂದ ಮಂಗಳವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಅವರ ಜಯಂತ್ಯೋತ್ಸವದ ಆಚರಣೆಯ ವೇಳೆ ಗ್ಲಾಸ್ ಒಡೆದಿರುವ ಫೋಟೋ ಇಟ್ಟು ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿವೆ.
Join Our Telegram: https://t.me/dcgkannada
ಈ ಕುರಿತು ಲಿಖಿತ ಮನವಿ ಪತ್ರ ಕೊಟ್ಟಿರುವ ಆರ್ಯ ಈಡಿಗ ಸಮಾಜದ ತಾಲ್ಲೂಕು ಘಟಕದ ಪದಾಧಿಕಾರಿಗಳು, ಮಂಗಳವಾರ ಜಯಂತಿ ಆಚರಣೆ ಸಮಯದಲ್ಲಿ ಡಿ.ದೇವರಾಜು ಅರಸು ಅವರ ಭಾವಚಿತ್ರವನ್ನು ಮಾತ್ರ ಒಂದೇ ಹಾಕಿದ್ದು ಗುರೂಜಿ ಅವರ ಫೋಟೋ ಹಾಳಾಗಿದ್ದರೂ ಅದನ್ನೆ ಇಟ್ಟು ಪೂಜಿಸುವ ಮೂಲಕ ತಾರತಮ್ಯ ನೀತಿ ಅನುಸರಿಸಿ ಅಪಮಾನಿಸಿದ್ದಾರೆ.
ಇದನ್ನೂ ಓದಿ: Basava shreerakshe: ನಟ ವಿಶ್ವಪ್ರಕಾಶ ಮಲಗೊಂಡಗೆ “ಬಸವ ಶ್ರೀರಕ್ಷೆ” ನೀಡಿ ಗೌರವ ಸನ್ಮಾನ
ನಾರಾಯಣಗುರು ಜಯಂತಿ ಆಚರಣೆಯ ಸಮಯದಲ್ಲಿ ಉಪನ್ಯಾಸಕರನ್ನೂ ನೇಮಿಸದೇ ನಿರ್ಲಕ್ಷ್ಯ ವಹಿಸಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎ.ಗಣೇಶ ತಿಳಿಸಿದ್ದಾರೆ.