ILAKAL: ಪತ್ರಕರ್ತರಿಗೆ ಸರ್ಕಾರದಿಂದ ಸೌಲಭ್ಯ ಸಿಗಲೇಬೇಕು: ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್

ILAKAL: ಪತ್ರಕರ್ತರಿಗೆ ಸರ್ಕಾರದಿಂದ ಸೌಲಭ್ಯ ಸಿಗಲೇಬೇಕು: ಕಾನಿಪ ಧ್ವನಿ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್


ಇಳಕಲ್: ಪತ್ರಕರ್ತರಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಸರ್ಕಾರ ಒದಗಿಸಬೇಕು. ಪತ್ರಕರ್ತರು ಮತ್ತು ಅವರ ಕುಟುಂಬ ಸಾಮಾಜಿಕವಾಗಿ ಗುರುತಿಸಲ್ಪಟ್ಟರೂ ಕುಟುಂಬ ಬೆಳೆದಂತೆ ಪತ್ರಕರ್ತರ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿವೆ. ಇದರಿಂದ ಪಾರಾಗಲು ಸರ್ಕಾರದ ಸೌಲಭ್ಯ ಅಗತ್ಯ ಎಂದು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ನಗರದ ವಿಜಯ ಮಹಾಂತೇಶ್ವರ ದಾಸೋಹ ಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಆಯೋಜಿಸಿದ್ದ ಪತ್ರಕರ್ತರ ದಿನಾಚರಣೆ ಹಾಗೂ ಸತ್ಕಾರ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಈಗಾಗಲೇ ಸರ್ಕಾರವು ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಕಲ್ಪಿಸಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಪಡೆಯಲು ಒಗ್ಗಟ್ಟಾಗಿ ಶ್ರಮಿಸೋಣ ಎಂದು ಸಂಘದ ಸದಸ್ಯರಿಗೆ ಕಿವಿ ಮಾತು ಹೇಳಿದರು.

ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಪೂಜ್ಯ ಗುರುಮಹಾಂತಶ್ರೀಗಳು ಶ್ಲಾಘಿಸಿ ಮಾತನಾಡಿ, ಪತ್ರಿಕೆಗಳು ಜನರ ಅಭಿಪ್ರಾಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತವೆ ಎಂದರು.

ನಿತ್ಯ ಪತ್ರಿಕೆ ಓದುವುದರಿಂದ ಗತಕಾಲದ ಘಟನೆಗಳು ನೆನಪಿನ ಬಿಟ್ಟಿಯಲ್ಲಿ ಉಳಿದತ್ತವೆ. ಅವಶ್ಯಕತೆ ಇದ್ದಾಗ ನೆನಪಿಗೆ ಬರುತ್ತದೆ. ಈ ಮೂಲಕ ನಮ್ಮ ಜ್ಞಾನ ವೃದ್ಧಿಯಾಗುತ್ತದೆ ಎಂದರು.

ಸಾಮಾಜಿಕ ಜಾಲತಾಣದಿಂದ ಪತ್ರಿಕೆಗಳಿಗೆ ತೊಡಕಲ್ಲ. ಜಾಲತಾಣದಲ್ಲಿ ತಕ್ಷಣ ಮಾಹಿತಿ ದೊರೆದರೆ, ಪತ್ರಿಕೆಗಳಿಂದ ಸಮಗ್ರ ಮಾಹಿತಿ ಸಿಗುತ್ತದೆ. ಇಂತಹ ಉತ್ತಮ ಕೆಲಸ ಮಾಡುವ ಪತ್ರಕರ್ತರ ಬದುಕು ಸುಧಾರಣೆ ಕಾಣಬೇಕು. ಇದಕ್ಕೆ ಸರ್ಕಾರ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಅಭಿಪ್ರಾಯ ಪಟ್ಟಿದರು.

ಸಂವಿಧಾನದ ನಾಲ್ಕನೇ ಅಂಗವಾಗಿ ಪತ್ರಿಕೋದ್ಯಮ ತನ್ನ ಕಾರ್ಯವನ್ನು ಮಾಡಬೇಕು. ಪತ್ರಕರ್ತರು ಆಗಾಗ ಛಾಟಿ ಬೀಸಿದಾಗ ಮಾತ್ರ ಕಾರ್ಯಾಂಗ‌ ಚುರುಕಿನಿಂದ ಕೆಲಸ ಮಾಡುತ್ತದೆ ಎಂದು ಉಪತಹಶೀಲ್ದಾರ್ ಈಶ್ವರ್ ಗಡ್ಡಿ ಹೇಳಿದರು.

ಹಿರಿಯ ವರದಿಗಾರರಾದ ಬಿ.ಬಾಬು, ಸಜ್ಜನರಾಜ ಮೆಹ್ತಾ, ಪತ್ರಿಕಾ ವಿತರಕರಾದ ಅಬ್ದುಲ್ ಸಾಬ್ ಮುಲ್ಲಾ, ಓದುಗರಾದ ಗಂಗಪ್ಪ ಮಾನಪ್ಪ ಬಡಿಗೇರ, ಪ್ರಕಾಶ ಲೊಖಂಡೆ ಅವರನ್ನು ಸತ್ಕರಿಸಲಾಯಿತು.

ಸುರಕ್ಷಾ ಸೇವಾ ಸಂಸ್ಥೆಯಲ್ಲಿ ಬಂಗ್ಲೆ ಮಲ್ಲಿಕಾರ್ಜುನ್ ರಿಂದ ಉಪಹಾರ ಅರ್ಪಣೆ: ಇಳಕಲ್ ನಗರದ ಸುರಕ್ಷಾ ಸೇವಾ ಸಂಸ್ಥೆಯಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿಯ ಇಳಕಲ್ ತಾಲೂಕು ಘಟಕದ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ಸಂಘದ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಸಮ್ಮುಖದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಯಿತು.

ಈ ವೇಳೆ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ತಾಲೂಕು ಅಧ್ಯಕ್ಷ ಶರಣಪ್ಪ ಹೊದ್ನೂರ್, ಹಿರಿಯ ಪತ್ರಕರ್ತರಾದ ವಿಜಯ ಪಲ್ಲೆದ್(VP), ಗುಂಡಣ್ಣ ಲಾಟಿ, ಶರಣಗೌಡ ಕಂದಕೂರು, ದೊಡ್ಡನಗೌಡ ಗುಡಿಹಿಂದಿನ, ಸುರಕ್ಷಾ ಸೇವಾ ಸಂಸ್ಥೆಯ ಮುಖ್ಯಸ್ಥ ಪುರುಷೋತ್ತಮ ದರಕ ಇದ್ದರು.

Latest News

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: ಸರ್ಕಾರದಿಂದ ಆಧಾರ್ ಕಾರ್ಡ್ ಹೊಂದಿದವರಿಗೆ 5 ಹೊಸ ರೂಲ್ಸ್ ಜಾರಿ ಮಾಡಿದೆ. ಈ ಐದೂ ನಿಮಯ ಪಾಲಿಸದಿದ್ದರೆ ದಂಡ ಗ್ಯಾರಂಟಿ! ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆಯಾಗಿ ಗುರುತಿಸಲಾಗಿದೆ. ಇದು ನಮ್ಮ ಗುರುತಿನ ಕಡ್ಡಾಯ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳು ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. Join Our Telegram: https://t.me/dcgkannada

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ. ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ