ಕೋಲಾರ: ತಾಲೂಕಿನ ವಕ್ಕಲೇರಿ ಗ್ರಾಮದಲ್ಲಿ ಶುಕ್ರವಾರ ಕಾರ್ಗಿಲ್ ಯುದ್ಧದ 25 ವರ್ಷಗಳ ನೆನಪಿನಲ್ಲಿ ಭಗತ್ ಸಿಂಗ್ ಸೇವಾ ಸಮಿತಿ ಹಾಗೂ ಶಾಲಾ ಮಕ್ಕಳಿಂದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ವಕ್ಕಲೇರಿ ಗ್ರಾಪಂ ಅಧ್ಯಕ್ಷೆ ರಾಧಾ ಮಂಜುನಾಥ್ ಉದ್ಘಾಟಿಸಿ ಮಾತನಾಡಿ, ಭಾರತೀಯರಿಗೆ ಇದು ಎಂದು ಮರೆಯದ ದಿನವಾಗಿದೆ ದೇಶದ ಅವಿಸ್ಮರಣೀಯ ದಿನಗಳಲ್ಲಿ ಜುಲೈ 26 ಒಂದಾಗಿದೆ ಕಾರ್ಗಿಲ್ ಯುದ್ಧ ಭಾರತದ ಪ್ರತಿಯೊಬ್ಬ ಪ್ರಜೆಯ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಜಮ್ಮು ಕಾಶ್ಮೀರದ ಕಾರ್ಗಿಲ್‌ನಲ್ಲಿ ನಡೆದ ಈ ಯುದ್ಧದಲ್ಲಿ ಪಾಕಿಸ್ತಾನವನ್ನು ನಮ್ಮ ಭಾರತದ ವೀರ ಯೋಧರು ಸದೆ ಬಡೆದು ಅವರು ಆಕ್ರಮಿಸಿಕೊಂಡಿದ್ದ ಜಾಗವನ್ನು ವಶಕ್ಕೆ ಪಡೆದ ದಿನವಾಗಿದೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ವಕ್ಕಲೇರಿ ರಾಜಪ್ಪ ಮಾತನಾಡಿ ದೇಶ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ನಮ್ಮ ದೇಶದ ಸೈನಿಕರು ನಮ್ಮ ಹೆಮ್ಮೆಯಾಗಿದ್ದಾರೆ. ಅವರು ಇಲ್ಲದೇ ಹೋದರೆ ನಮ್ಮ ರಕ್ಷಣೆ ಅಸಾಧ್ಯವಾಗುತ್ತದೆ ದೇಶ ಭಕ್ತಿ ಎಂಬುದು ನಮ್ಮಲ್ಲಿ ತಾನಾಗಿಯೇ ಬರಬೇಕು ನಿಮ್ಮಲ್ಲಿ ಇರುವವರು ಕೂಡ ನಾನು ದೇಶದ ಸೈನಿಕನಾಗಿ ಕಾರ್ಯನಿರ್ವಹಿಸುತ್ತೇನೆ ಎಂಬ ಛಲ ನಿಮ್ಮಲ್ಲಿ ಬರಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸೈನಿಕರಾದ ಶೆಟ್ಟಿಗಾನಹಳ್ಳಿ ಮುನಿಯಪ್ಪ, ದೊಡ್ಡ ಅಯ್ಯೂರು ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು, ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು, ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರಾದ ನಾರಾಯಣಪ್ಪ, ಗೌಡರ ವೆಂಕಟಪ್ಪ, ಗೋವಿಂದಪ್ಪ, ಕನ್ವೀನರ್ ರಾಜಣ್ಣ, ಪೂಜಾರಿ ರಘು, ಭಗತ್ ಸಿಂಗ್ ಸೇವಾ ಸಮಿತಿ ಅಧ್ಯಕ್ಷ ಮೋಹನ್ ಉಪಾಧ್ಯಕ್ಷ ಮಾರ್ಕೊಂಡಯ್ಯ, ಸಮಿತಿ ಸದಸ್ಯರಾದ ರವಿಕುಮಾರ್, ನವೀನ್, ನೃತ್ಯ ನಿರ್ದೇಶಕ ಶ್ರವಣ್ ಸೇರಿದಂತೆ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿಧ್ಯಾರ್ಥಿಗಳು ಮತ್ತು ಗ್ರಾಮಸ್ಥರು ಇದ್ದರು ಕಾರ್ಯಕ್ರಮವನ್ನು ದೊಮ್ಮಸಂದ್ರ ನರಸಿಂಹ ನಿರೂಪಣೆ ಮಾಡಿದರು.