ಕಾರ್ಗಿಲ್ ವಿಜಯೋತ್ಸವ.. ರೈತ ಸಂಘದಿಂದ ನಿವೃತ್ತ ಯೋಧರಿಗೆ ಸನ್ಮಾನ

ಕಾರ್ಗಿಲ್ ವಿಜಯೋತ್ಸವ.. ರೈತ ಸಂಘದಿಂದ ನಿವೃತ್ತ ಯೋಧರಿಗೆ ಸನ್ಮಾನ

ಕೋಲಾರ: 25ನೇ ಕಾರ್ಗಿಲ್ ವಿಜಯೋತ್ಸವವನ್ನು ರೈತ ಸಂಘದಿಂದ ಜಿಲ್ಲೆಯ ನಿವೃತ್ತ ಯೋಧರಿಗೆ ಹಸಿರು ಶಾಲು ಮ ಗಿಡ ನೀಡುವ ಮುಖಾಂತರ ಸರಳವಾಗಿ ಆಚರಣೆ ಮಾಡಿ ಯೋಧರ ಬೇಡಿಕೆಗಳನ್ನು ಸರ್ಕಾರಗಳು ಈಡೇರಿಸಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ನಿವೃತ್ತ ಯೋಧರ ಸನ್ಮಾನ ಕಾರ್ಯಕ್ರಮದಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ ನಾರಾಯಣಗೌಡ ಮಾತನಾಡಿ ಆದಮ್ಯ ಸಾಹಸ ಅಪ್ರತಿಮೆ ದೇಶಭಕ್ತಿಯ ಸ್ಪೂರ್ತಿಯೊಂದಿಗೆ ಶತ್ರುಗಳನ್ನು ಸದೆಬಡಿದು ಭಾರತಾಂಭೆಯ ಘನತೆ ಗೌರವವನ್ನು ಮುಗಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್ ಯುದ್ದದ ವೀರ ಹುತಾತ್ಮರಿಗೆ ಶತ ಶತ ನಮನಗಳನ್ನು ಸಲ್ಲಿಸುವ ಜೊತೆಗೆ ರೈತ ಮತ್ತು ಯೋಧರನ್ನು ಸರ್ಕಾರಗಳು ನಿರ್ಲಕ್ಷ ಮಾಡಬಾರದೆಂದು ಕಿವಿ ಮಾತು ಹೇಳಿದರು.

ಕಾರ್ಗಿಲ್ ವಿಜಯ ದಿವಸಕ್ಕೆ ಇಂದು ರಜತ ಸಂಭ್ರಮ ಭಾರತೀಯ ಸೇನೆಯ ಶೌರ್ಯ ಸಾಹಸಗಾಥೆ ಎಂದೆದಿಗೂ ಪ್ರೇರಣಾದಾಯಿ ಭಾರತದ ವೀರ ಯೋಧರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಜೊತೆಗೆ ಪಾಕಿಸ್ತಾನದ ವಿರುದ್ದ ಭಾರತ ವಿಜಿಯ ಸಾದಿಸಿದ ಸಂಭ್ರವನ್ನು ಆಚರಿಸುವ ಕ್ಷಣವು ಹೌದು, ಭಾವೈಕ್ಯತೆಯನ್ನು ಜಾಗೃತಗೊಳಿಸಿದ ಕಾರ್ಗ್ರಿಲ್ ಯುದ್ದ ದೇಶ ಮೊದಲು ಎಂಬ ಉದಾತ್ತ ಭಾವಕ್ಕೆ ಜೀವ ತುಂಬಿತು ಭಯೋತ್ಪಾದನೆ ಹಾಗೂ ದೇಶ ದ್ರೋಹಿಗಳ ವಿರುದ್ದ ಕಠಿಣ ಕ್ರಮವೇ ಅನಿರ್ವಾಯ ಎಂಬುದನ್ನು ಕಾರ್ಗಿಲ್ ಸಮರ ಸಾಬೀತು ಮಾಡಿತು.

ಕಾರ್ಗಿಲ್ ಸಮರ ಪಾಕಿಸ್ತಾನಕ್ಕೆ ಹಲವು ಪಾಠಗಳನ್ನು ಕಲಿಸಿದಲ್ಲದೆ ಅಂತರ ರಾಷ್ಟ್ರೀಯ ವಲಯದಲ್ಲಿ ಅದರ ಮುಖವಾಡವನ್ನು ಬಯಲು ಮಾಡಿತು. ಗಡಿಯನ್ನು ಕಾಯುವ ಯೋಧರನ್ನು ಗೌರವಿಸುತ್ತಾ ರಾಷ್ಟ್ರಕ್ಕಾಗಿ ಜೀವಿಸುವ ಸಂಕಲ್ಪವನ್ನು ಕೈಗೊಂಡಲು ಈ ವಿಜಯದಿನ ಕಾರ್ಗಿಲ್ ವಿಜಯ ೨೫ನೇ ವರ್ಷಾಚರಣೆಯ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಯೋಧರನ್ನು ಗುರುತಿಸುವ ಇಚ್ಛಾಶಕ್ತಿ ಸರ್ಕಾರಗಳು ಮಾಡಬೇಕೆಂದು ಒತ್ತಾಯಿಸಿದರು.

ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಮಾತನಾಡಿ ದೇಶಕ್ಕೆ ತನ್ನ ಜೀವವನ್ನು ಮುಡುಪಾಗಿಟ್ಟಿರುವ ಲಕ್ಷಾಂತರ ಕುಟುಂಬಗಳ ರಕ್ಷಣೆಗೆ ಸರ್ಕಾರ ನಿಲ್ಲುತ್ತಿಲ್ಲ. ಹುತಾತ್ಮರಾದ ಯೋಧರನ್ನು ಅವರ ಅಂತ್ಯಕ್ರಿಯೆ ಆಗುವರೆಗೂ ಮಾಧ್ಯಮದ ಮುಂದೆ ಸರ್ಕಾರಗಳು ವಿವಿಧ ಆಸ್ವಾಶಣೆ ನೀಡಿ ಕಡೆಗೆ ಸರ್ಕಾರಗಳು ಕುಟುಂಬಗಳು ವರ್ಷಾನಗಟ್ಟಲೆ ಅಲೆದಾಡಿದರು ಕನಿಷ್ಠ ಅವರ ಸಮಸ್ಯೆ ಬಗ್ಗೆ ವಿಚಾರಿಸುವ ಅಧಿಕಾರಿಗಳು ಇರುವುದಿಲ್ಲವೆಂದು ಆರೋಪ ಮಾಡಿದರು.

ಸರ್ಕಾರವೇ ಮಂಜೂರು ಮಾಡುವ ಸರ್ಕಾರಿ ಜಮೀನಿಗಾಗಿ ೨೫ ವರ್ಷಗಳಿಂದ ಜಿಲ್ಲಾಡಳಿತ ತಾಲ್ಲೂಕು ಆಡಳಿತಕ್ಕೆ ಅಲೆದಾಡಿದರು ಯಾವುದೇ ನ್ಯಾಯ ಸಿಗುತ್ತಿಲ್ಲ. ಕಡೆಗೆ ದೇಶ ಕಾದು ತನ್ನ ಪ್ರಾಣವನ್ನು ಅರ್ಪಣೆ ಮಾಡಿದ ಕುಟುಂಬಗಳು ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಇರುವುದು ದುರದೃಷ್ಟಕರ ಎಂದರು.

ಪದವಿ ಪಡೆದು ಉದ್ಯೋಗ ಸಿಗದೆ ಪರದಾಡುತ್ತಿರುವ ಯುವ ಪೀಳಿಗೆಗೆ ಅನುಕೂಲವಾಗುವ ಅಗ್ನಿಪತ್ ಮೂಲಕ ಹೆಚ್ಚಿನ ಸೇನೆಗೆ ನೇಮಕ ಮಾಡಿಕೊಳ್ಳಬೇಕು. ನಿರುದ್ಯೋಗ ತಪ್ಪಿಸಿ ಯುವಕರು ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದನ್ನು ತಪ್ಪಿಸಬೇಕೆಂದು ಸರ್ಕಾರಗಳಿಗೆ ಸಲಹೆ ನೀಡಿದರು.

ನಿವೃತ್ತ ಯೋಧರಾದ ಮಂಜುನಾಥ, ವೆಂಕಟೇಶ್ ಮತ್ತಿತರರು ಮಾತನಾಡಿ ಸರ್ಕಾರ ನುಡಿದಂತೆ ನಡೆಯುತ್ತಿಲ್ಲ. ಸೈನಿಕರ ವಿವಿಧ ಬೇಡಿಕೆಗಳನ್ನು ಹೀಡೇರಿಸಲು ಇಚ್ಚಾಸಕ್ತಿ ಕೊರತೆ ಇದೆ. ಜಮೀನು ಇಲ್ಲ. ಶಾಲೆ ಇಲ್ಲ. ಕನಿಷ್ಠ ಪಕ್ಷ ಯೋಧರ ಆರೋಗ್ಯದ ಹಿತದೃಷ್ಟಿಯಿಂದ ಆಸ್ಪತ್ರೆ ನಿರ್ಮಿಸಲು ಜಾಗವನ್ನು ಸಹ ನೀಡುತ್ತಿಲ್ಲವೆಂದು ಸರ್ಕಾರದ ಯೋಧರ ವಿರೋಧಿ ನೀತಿಯನ್ನು ಖಂಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಂಜುನಾಥಗೌಡ, ಶಾಂತಕುಮಾರ್, ಕುಮಾರ್, ಸಿ.ಎನ್.ರಘು, ಶಿವರಾಜ್, ಶ್ರೀರಾಮ್, ಸುರೇಶ್, ದೇವರಾಜ್, ಪುತ್ತೇರಿರಾಜು, ಗಿರೀಶ್, ವಕ್ಕಲೇರಿ ಹನುಮಯ್ಯ, ನಿವೃತ್ತಿ ಯೋಧರು ಭಾಗವಹಿಸಿದರು.

Latest News

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: 50 ಸಾವಿರ ರೂಪಾಯಿವರೆಗೆ ಯಾವುದೇ ಶ್ಯೂರಿಟಿ ಇಲ್ಲದೆ ಪಡೆಯಲು ಅವಕಾಶ!

Adhar Card Loan: ನಿಮಗೆ ತಕ್ಷಣ ಹಣದ ಅವಶ್ಯಕತೆ ಇದೆಯಾ? ಶ್ಯೂರಿಟಿ ಇಲ್ಲದೆ ಸಾಲ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಸಿ.ಎಲ್.ಬಿರಾದಾರ ಅಧ್ಯಕ್ಷ, ಜಿ.ಬಿ.ಪಾಟೀಲ್ ಉಪಾಧ್ಯಕ್ಷ; ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ಗೆ ಹೊಸಬರ ಆಯ್ಕೆ

ಮುದ್ದೇಬಿಹಾಳ : ಅನಿರೀಕ್ಷಿತ ಫಲಿತಾಂಶವನ್ನು ಇಲ್ಲಿನ ದಿ ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್‌ನ ನೂತನ

Prize Money Scholarship: ವಿದ್ಯಾರ್ಥಿಗಳ ಖಾತೆಗೆ 35 ಸಾವಿರ ಜಮಾ!

Prize Money Scholarship: ವಿದ್ಯಾರ್ಥಿಗಳ ಖಾತೆಗೆ 35 ಸಾವಿರ ಜಮಾ!

Prize Money Scholarship 2025: ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದ ಕಡೆಯಿಂದ ಗುಡ್ ನ್ಯೂಸ್ ನೀಡಿದೆ. 2024 ಮತ್ತು 2025 ನೇ ಸಾಲಿನ ಮೆಟ್ರಿಕ್ ನಂತರ ವಿದ್ಯಾರ್ಥಿಗಳು ಹಾಗೂ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಅರ್ಜಿಯನ್ನು ಕರೆಯಲಾಗಿದೆ. Join Our Telegram: https://t.me/dcgkannada ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಶಿಕ್ಷಣ ಅನುಕೂಲಕ್ಕಾಗಿ ಸಾಕಷ್ಟು ಯೋಜನೆ ಮತ್ತು ಸ್ಕಾಲರ್ಶಿಪ್ ಗಳನ್ನು ಜಾರಿಗೆ ತರುತ್ತಿದೆ ಮತ್ತು ಅವರ ಪರೀಕ್ಷೆ ಉತ್ತಮವಾಗಿ ಪಾಸಾಗಿದ್ದರೆ ಸಾಕು.

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ಕೇವಲ ₹601 ವರ್ಷಪೂರ್ತಿ free 5G ಯೋಜನೆ

Jio: ₹601 5G ರೀಚಾರ್ಜ್ ಯೋಜನೆಯು Jio ಬಳಕೆದಾರರಿಗೆ, ವಿಶೇಷವಾಗಿ ಇಡೀ ವರ್ಷಕ್ಕೆ ಅನಿಯಮಿತ 5G ಡೇಟಾವನ್ನು ಬಯಸುವವರಿಗೆ ಆಕರ್ಷಕ ಕೊಡುಗೆಯಾಗಿದೆ. Jio ₹601 5G ರೀಚಾರ್ಜ್ ಯೋಜನೆ ಮುಖ್ಯಾಂಶಗಳು ವೆಚ್ಚ : ಒಂದು ವರ್ಷಕ್ಕೆ ₹601.ಪ್ರಯೋಜನಗಳು : 12 ತಿಂಗಳವರೆಗೆ ಅನಿಯಮಿತ 5G ಡೇಟಾ.ಅರ್ಹತೆ : Jio 5G ಸಿಮ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ.ವಿನಾಯಿತಿಗಳು : 4G ಸಿಮ್ ಬಳಕೆದಾರರಿಗೆ ಅನ್ವಯಿಸುವುದಿಲ್ಲ. Join Our Telegram: https://t.me/dcgkannada ಈ