ಕೋಚಿಮುಲ್ ಕಾಂಗ್ರೆಸ್ ಸರಕಾರದ ಕೃಪಾಪೋಷಿತ ನಾಟಕ ಮಂಡಳಿ: ಆರೋಪ

ಕೋಚಿಮುಲ್ ಕಾಂಗ್ರೆಸ್ ಸರಕಾರದ ಕೃಪಾಪೋಷಿತ ನಾಟಕ ಮಂಡಳಿ: ಆರೋಪ

Ad
Ad

Ad
Ad

ಕೋಲಾರ: ಕೋಚಿಮುಲ್ ಆಡಳಿತ ಮಂಡಳಿಗೆ ಮೂರು ತಿಂಗಳಲ್ಲಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ನೀಡಿದರು ಚುನಾವಣೆ ನಡೆಸುತ್ತಿಲ್ಲ ಎಂದು ಆರೋಪಿಸಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ ನಾಗರಾಜ್ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಅಕ್ರಂ ಪಾಷಗೆ ಮನವಿ ನೀಡಿ ಒತ್ತಾಯಿಸಿದರು.

ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಆಗಮಿಸಿ ಕೋಚಿಮುಲ್ ಆಡಳಿತ ಮಂಡಳಿಗೆ ಕೂಡಲೇ ಚುನಾವಣೆ ನಡೆಸುವಂತೆ ಆದೇಶವನ್ನು ನೀಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ ಕೋಚಿಮುಲ್ ಆಡಳಿತ ಮಂಡಳಿಯ ಅಧಿಕಾರ ಅವಧಿಯು ಕಳೆದ ಮೇ 12 ಕ್ಕೆ ಮುಕ್ತಾಯವಾಗಿದೆ ಆದರೂ ಆಡಳಿತ ಮಂಡಳಿಯು ಕಾಂಗ್ರೆಸ್ ಸರಕಾರದ ಕೃಪಾ ಪೋಷಿಕ ನಾಟಕ ಮಂಡಳಿ ರೀತಿಯಲ್ಲಿ ವರ್ತಿಸುತ್ತಿದೆ ಆಡಳಿತ ಮಂಡಳಿಯಲ್ಲಿ ಯಾವುದೇ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲು ಅಂಕಾರವಿಲ್ಲ ಈ ಬಗ್ಗೆ ಸರ್ಕಾರವು ಸ್ಪಷ್ಟ ಆದೇಶವನ್ನು ಹೊರಡಿಸಿದೆ ಆದರೂ ವಿಶೇಷ ಸಾಮಾನ್ಯ ಸಭೆ ಸೇರಿದಂತೆ ಹಣಕಾಸಿನ ವ್ಯವಹಾರಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.

ಕೋಚಿಮುಲ್ ಆಡಳಿತ ಮಂಡಳಿಯನ್ನು ವಜಾ ಮಾಡಿ ಕೂಡಲೇ ಮೂರು ತಿಂಗಳೊಳಗೆ ಚುನಾವಣೆ ನಡೆಸಬೇಕು ಎಂದು ಕಳೆದ ಜುಲೈ 07 ರಂದು ಹೈಕೋರ್ಟ್ ಆದೇಶ ನೀಡಿದ್ದಾರೆ ಹಿಂದೆ ರಿಟರ್ನಿಂಗ್ ಅಧಿಕಾರಿಯಿಂದ ಕರಡು ಮತದಾರರ ಪಟ್ಟಿ ಪ್ರಕಟ ಮಾಡಿ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಿ ಮಾ.೨೧ಕ್ಕೆ ಸ್ಥಗಿತಗೊಂಡಿದೆ. ಆ ಹಂತದಿಂದಲೇ ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಬೇಕು ಎಂಬುದನ್ನು ಸೂಚಿಸಿದ್ದರು ಇದುವರೆಗೂ ಚುನಾವಣೆಗೆ ಸಂಬಂಧಿಸಿದ ಸಣ್ಣ ಪ್ರಯತ್ನವನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಿಲ್ಲ ಎಂದರು.

ಚಿತ್ರದುರ್ಗ ಜಿಲ್ಲಾ ಸಹಕಾರಿ ಡಿಸಿಸಿ ಬ್ಯಾಂಕ್ ಮತ್ತು ಕೋಚಿಮುಲ್ ಸಹಕಾರಿ ಸಂಸ್ಥೆಗೆ ಏಕಕಾಲದಲ್ಲಿ ಚುನಾವಣೆ ನಡೆಸಬೇಕು ಎಂದು ಆದೇಶ ನೀಡಿದರು ಚಿತ್ರದುರ್ಗದಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆ ನಡೆಸಿದ್ದಾರೆ ಕೋಚಿಮುಲ್ ಆಡಳಿತ ಮಂಡಳಿಗೆ ಯಾಕೆ ಚುನಾವಣೆ ನಡೆಸಲಿಲ್ಲ ಇವತ್ತು ಕೋಚಿಮುಲ್ ಆಡಳಿತ ಮಂಡಳಿಯಲ್ಲಿನ ಏಕಪಕ್ಷೀಯ ನಿರ್ಧಾರದಿಂದ ನೇಮಕಾತಿಯ ಉದ್ದೇಶಕ್ಕಾಗಿ ಇಡಿ ತನಿಖಾ ಸಂಸ್ಥೆಯು ದಾಳಿ ಮಾಡಿದೆ ಇಂತಹ ಘಟನೆಗಳು ಇತಿಹಾಸದಲ್ಲಿ ಯಾವತ್ತೂ ಕೂಡ ನಡೆದಿಲ್ಲ ಒಂದು ಸಹಕಾರಿ ಸಂಸ್ಥೆಗೆ ಹೈಕೋರ್ಟ್ ಆದೇಶವನ್ನು ಪಾಲಿಸಲಿಲ್ಲ ಸರಕಾರದ ಒತ್ತಡದಿಂದಾಗಿ ಜಿಲ್ಲೆಯ ಹೈನುಗಾರಿಕೆಯಿಂದ ಜೀವನ ನಡೆಸುವ ರೈತರನ್ನು ಬೀದಿಗೆ ತರಲಾಗುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಮುನಿಯಪ್ಪ ಮಾತನಾಡಿ ಬಾಗೇಪಲ್ಲಿಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಒಕ್ಕೂಟವನ್ನು ಪ್ರತ್ಯೇಕ ಮಾಡಲು ಅಂಗೀಕಾರವಾಗಿದೆ ಕೂಡಲೇ ಆಡಳಿತ ಮಂಡಳಿಯನ್ನು ವಜಾ ಮಾಡಿ ಹೈಕೋರ್ಟ್ ಆದೇಶವನ್ನು ಜಾರಿ ಮಾಡಬೇಕು ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಸಂಸದರು, ಶಾಸಕರ ನೇತೃತ್ವದಲ್ಲಿ ಹಾಲು ಉತ್ಪಾದಕರು ಉಗ್ರವಾದ ಹೋರಾಟಕ್ಕೆ ಹೋಗಬೇಕಾಗುತ್ತದೆ ಕೂಡಲೇ ಆದೇಶವನ್ನು ಪಾಲನೆ ಮಾಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಮಾತನಾಡಿ ಸಂಬಂಧಿಸಿದವರ ಗಮನಕ್ಕೆ ತಂದು ಮುಂದಿನ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಇದ್ದರು.

Latest News

ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆಗೆ ಅರ್ಜಿ ಆಹ್ವಾನ

ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ

ಯತ್ನಾಳ ಉಚ್ಚಾಟನೆಗೆ ಆಕ್ರೋಶ: ಯತ್ನಾಳರಿಗಾಗಿ ಪ್ರಾಣ ಕೊಡಲು ಸಿದ್ಧ- ದೇಸಾಯಿ

ಯತ್ನಾಳ ಉಚ್ಚಾಟನೆಗೆ ಆಕ್ರೋಶ: ಯತ್ನಾಳರಿಗಾಗಿ ಪ್ರಾಣ ಕೊಡಲು ಸಿದ್ಧ- ದೇಸಾಯಿ

ಮುದ್ದೇಬಿಹಾಳ : ಬಸನಗೌಡ ಪಾಟೀಲ ಯತ್ನಾಳರು ಯಾವ ಪಕ್ಷದಲ್ಲಿರುತ್ತಾರೆಯೋ ಸಾಯುವವರಿಗೂ ಅವರ ಜೊತೆಗೆ ಇದ್ದು

ಭಾವಚಿತ್ರಗಳಿಗೆ ಅಪಮಾನ ತಡೆಗಟ್ಟಲು ಪೊಲೀಸರಿಗೆ ಬಿಜೆಪಿ ಪತ್ರ

ಭಾವಚಿತ್ರಗಳಿಗೆ ಅಪಮಾನ ತಡೆಗಟ್ಟಲು ಪೊಲೀಸರಿಗೆ ಬಿಜೆಪಿ ಪತ್ರ

ಯತ್ನಾಳ ಆಪ್ತ, ಜಿಪಂ ಮಾಜಿ ಉಪಾಧ್ಯಕ್ಷ ದೇಸಾಯಿ ವಿರುದ್ಧ ಕ್ರಮಕ್ಕೆ ಆಗ್ರಹ ಮುದ್ದೇಬಿಹಾಳ :

ರೇವಣಸಿದ್ದಪ್ಪಗೆ ಟ್ಯಾಲೆಂಟ್ ಅವಾರ್ಡ್ ಪ್ರಶಸ್ತಿಶಿಕ್ಷಣದೊಂದಿಗೆ ಸಂಸ್ಕಾರವೂ ಹೆಚ್ಚಲಿ- ಅಮರೇಶ್ವರ ಸ್ವಾಮೀಜಿ

ರೇವಣಸಿದ್ದಪ್ಪಗೆ ಟ್ಯಾಲೆಂಟ್ ಅವಾರ್ಡ್ ಪ್ರಶಸ್ತಿಶಿಕ್ಷಣದೊಂದಿಗೆ ಸಂಸ್ಕಾರವೂ ಹೆಚ್ಚಲಿ- ಅಮರೇಶ್ವರ ಸ್ವಾಮೀಜಿ

ಮುದ್ದೇಬಿಹಾಳ : ಮೊದಲು ಸಂಸ್ಕಾರ ಹೆಚ್ಚಾಗಿತ್ತು,ಶಿಕ್ಷಣ ಕಡಿಮೆ ಇತ್ತು. ಆದರೆ ಇಂದು ಶಿಕ್ಷಣ ಹೆಚ್ಚಿದಂತೆ

ಯತ್ನಾಳ ಉಚ್ಚಾಟನೆ ವಾಪಸಾತಿಗೆ ಪಂಚಮಸಾಲಿಗರ ಆಗ್ರಹ

ಯತ್ನಾಳ ಉಚ್ಚಾಟನೆ ವಾಪಸಾತಿಗೆ ಪಂಚಮಸಾಲಿಗರ ಆಗ್ರಹ

ಮುದ್ದೇಬಿಹಾಳ : ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಳಗಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಗೌರವಯುತವಾಗಿ ಮರಳಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ಮುಖಂಡರು ಇಂದಿಲ್ಲಿ ಆಗ್ರಹಿಸಿದರು. ಪಟ್ಟಣದ ಏಪಿಎಂಸಿಯಲ್ಲಿರುವ ಬಸಲಿಂಗಪ್ಪ ರಕ್ಕಸಗಿ ಅವರ ಅಡತಿ ಅಂಗಡಿಯಲ್ಲಿ ಗುರುವಾರ ಪಂಚಮಸಾಲಿ ಸಮಾಜದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡರಾದ ಶಿವಶಂಕರಗೌಡ ಹಿರೇಗೌಡರ, ಸಮಾಜದ ತಾಲ್ಲೂಕು ಅಧ್ಯಕ್ಷ ಅಮರೇಶ ಗೂಳಿ, ಕಾಮರಾಜ ಬಿರಾದಾರ ಮೊದಲಾದವರು,

ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆ:ಏ.5 ರಂದು 172 ಮೆಡಿಕಲ್ ವಿದ್ಯಾರ್ಥಿಗಳ ಸನ್ಮಾನ

ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆ:ಏ.5 ರಂದು 172 ಮೆಡಿಕಲ್ ವಿದ್ಯಾರ್ಥಿಗಳ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನಲ್ಲಿ ಏ.5 ರಂದು ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ-2025 ನ್ನು ಹಮ್ಮಿಕೊಳ್ಳಲಾಗಿದ್ದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಹೇಳಿದರು. ಪಟ್ಟಣದಲ್ಲಿ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ಪರೀಕ್ಷೆಯ ವಿವರಗಳನ್ನು ಅವರು ನೀಡಿದರು. ಸಂಸ್ಥೆಯ ಚೇರಮನ್ ಎಂ. ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ