ಕೆಯುಡಿಎ ಅನುಮತಿ ಕೊಟ್ಟರೆ ಅನಾಹುತಕ್ಕೆ ಹೊಣೆ ಯಾರು?

ಕೆಯುಡಿಎ ಅನುಮತಿ ಕೊಟ್ಟರೆ ಅನಾಹುತಕ್ಕೆ ಹೊಣೆ ಯಾರು?

ಕೋಲಾರ: ನಗರಾಭಿವೃದ್ಧಿ ಪ್ರಾಧಿಕಾರದಿಂದ ಇಷ್ಟ ಬಂದ ಹಾಗೇ ಅನುಮತಿ ಕೊಟ್ಟರೆ ಮುಂದೆ ನಡೆಯುವ ಅನಾಹುತಗಳಿಗೆ ಯಾರು ಹೊಣೆ ಯಾವುದೇ ಅನುಮತಿ ಕೊಡಬೇಕಾದರೂ ಮೊದಲು ಸ್ಥಳ ಪರಿಶೀಲನೆ ಮಾಡಬೇಕು ಇದಕ್ಕೆ ಸಂಬಂಧಪಟ್ಟ ಇಲಾಖೆಯ ಕಡೆಯಿಂದ ನಡೆಯಬೇಕು ಎಂದು ಶಾಸಕ ಕೊತ್ತೂರು ಜಿ ಮಂಜುನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಹೊರವಲಯದ ಕೆಯುಡಿಎ ಕಛೇರಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರಾಧಿಕಾರಕ್ಕೆ ಹೆಸರಿಗೆ ಅಷ್ಟೇ ಹೋಟೆಲ್, ಮನೆ, ಮಳಿಗೆ ಅಂತ ಅರ್ಜಿ ಹಾಕಿಕೊಳ್ಳತ್ತಾರೆ ಅನುಮತಿ ಬಂದ ಮೇಲೆ ಮುಂದಿನ ದಿನಗಳಲ್ಲಿ ಬೇರೆ ಕೆಲಸಕ್ಕೆ ಬಳಸಿಕೊಳ್ಳತ್ತಾರೆ ಅವತ್ತು ಏನಾದರೂ ಸಮಸ್ಯೆ ಬಂದರೆ ಪ್ರಾಧಿಕಾರದ ಮೇಲೆ ಆರೋಪ ಮಾಡತ್ತಾರೆ ಇಷ್ಟು ದಿನ ಆಗಿರಬಹುದು ಮುಂದೆ ಅಂತಹವುಗಳು ನಡೆಯಬಾರದು ಕೋಲಾರವನ್ನು ಮುಂದಿನ‌ ಐವತ್ತು ವರ್ಷದ ಭವಿಷ್ಯದಲ್ಲಿ ನೋಡಿಕೊಂಡು ಕೆಲಸ ಮಾಡಬೇಕು ಎಂದರು.

ನಗರದಿಂದ ಸುಮಾರು ಒಂಭತ್ತು ಕಿಮೀ ಅಂತರದಲ್ಲಿ ರಿಂಗ್ ರೋಡ್ ಕಾಮಗಾರಿಗೆ ಸರಕಾರದಿಂದ ಅನುಮೋದನೆ ಸಿಕ್ಕಿದೆ ಈಗಾಗಲೇ ಇದಕ್ಕೆ ಅನುದಾನ ಸಹ ಬಿಡುಗಡೆಯಾಗಿದೆ ಅದರ ಒಳಗಡೆಯಲ್ಲಿ ಕೆಯುಡಿಎ ವತಿಯಿಂದ ರೈತರ ಸಹಭಾಗಿತ್ವದಲ್ಲಿ ಬಡಾವಣೆ ನಿರ್ಮಿಸಲು ಭೂಮಿಯನ್ನು ಪಡೆಯಬೇಕು ಇದಕ್ಕೆ ರೈತ ಪಟ್ಟಿಯನ್ನು ಕೊಡಿ ನಂತರ ಅದರ ಬಗ್ಗೆ ಪರಿಶೀಲನೆ ಮಾಡಿ ರೈತರನ್ನು ಮನವೊಲಿಸುವ ಪ್ರಯತ್ನ ಮಾಡಲಾಗುತ್ತದೆ ಖಾಲಿ ಉಳಿದಿರುವ 332 ನಿವೇಶನಗಳನ್ನು ಸರಕಾರದ ನಿಯಮಾನುಸಾರವಾಗಿ ಮಾರಾಟ ಮಾಡಲು ಅದಕ್ಕೆ ಬೇಕಾದ ತಯಾರಿಗಳನ್ನು ನಡೆಸಲು ಸೂಚನೆ ನೀಡಿದರು.

ಬೆಂಗಳೂರಿನಲ್ಲಿ ಬಿಬಿಎಂಪಿ ಕಡೆಯಿಂದ ಕೇಳಿದಕ್ಕೆ ಎಲ್ಲಾ ಅನುಮತಿ ಕೊಟ್ಟು ಕೊಟ್ಟು ಇವತ್ತು ಹಾಳಾಗಿ ಹೋಗಿದೆ ಕೆಲವು ಸಂದರ್ಭಗಳಲ್ಲಿ ಕುಡಿಯಕ್ಕೆ ನೀರು ಇರಲ್ಲ ಮಳೆ ಬಂದರೆ ಅಷ್ಟೇ ಕಥೆ ಮುಗಿದಂತೆ ಅದರ ಪರಿಸ್ಥಿತಿ ಕೋಲಾರಕ್ಕೆ ಬರಬಾರದು ಎಂದರೆ ಮುಂಜಾಗ್ರತವಾಗಿ ಆಲೋಚನೆ ಮಾಡಿ ಯೋಜನೆ ರೂಪಿಸಬೇಕು ಖಾಸಗಿಯಾಗಿ ಲೇಔಟ್ ನಿರ್ಮಾಣ ಮಾಡೋರಿಗೆ ಕನಿಷ್ಠ ನೀರು, ಚರಂಡಿ, ರಸ್ತೆ, ವಿದ್ಯುತ್‌ ಇದ್ದೀಯಾ ಇಲ್ಲವಾ ಅಂತ ಪರಿಶೀಲನೆ ನಡೆಸಬೇಕು ಸಂಬಂಧಿಸಿದ ಇಲಾಖೆಯಿಂದ ಅನುಮತಿ ಇದ್ದರೆ ಅಷ್ಟೇ ಪ್ರಾಧಿಕಾರದಿಂದ ಅನುಮತಿ ಕೊಡಿ ಇಲ್ಲದೆ ಹೋದರೆ ಸಭೆಯ ಅಜೆಂಡಾಗೆ ತರಬೇಡಿ ಎಂದರು.

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಯಲ್ಲಿ ನ್ಯಾಯಾಧೀಶರು ವಾಸ ಮಾಡತ್ತಾ ಇದ್ದಾರೆ ಅವರಿಗೆ ಮೂಲಭೂತ ಸೌಲಭ್ಯಗಳನ್ನು ಇಲ್ಲ ಎಂದರೆ ಮುಂದೆ ನಮ್ಮ ಬಗ್ಗೆ ತಪ್ಪು ತಿಳಿವಳಿಕೆ ಹೋಗುತ್ತದೆ ಸುಮಾರು 30 ವರ್ಷವಾಗಿದೆ ಬಡಾವಣೆ ಪ್ರಾರಂಭವಾಗಿ ಅಭಿವೃದ್ಧಿ ಯಾಗಿಲ್ಲ ಎಂದರೆ ಹೇಗೆ ಮಳೆಗಾಲ ಪ್ರಾರಂಭವಾಗಿದೆ ಚರಂಡಿಗಳು ಸೇರಿದಂತೆ ಇನ್ನೂ ವಿವಿಧ ಅಭಿವೃದ್ಧಿ ಕೆಲಸವನ್ನು ಮಾಡಲಿಕ್ಕೆ ಅಗತ್ಯ ಸಿದ್ದತೆ ಮಾಡಿಕೊಳ್ಳಿ ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ. ಎಲ್ ಅನಿಲ್ ಕುಮಾರ್ ಮಾತನಾಡಿ ಕೆಯುಡಿಎ ಕಛೇರಿ ಪ್ರಾರಂಭವಾಗಿ ಇಷ್ಟು ವರ್ಷಗಳ ಕಳೆದರೂ ಕಡತಗಳನ್ನು ಗಣಕೀಕೃತ ಮಾಡಿಲ್ಲ ಎಂದರೆ ಹೇಗೆ ಕೂಡಲೇ ಸಂಬಂಧಿಸಿದ ಇಲಾಖೆಯ ಮಾರ್ಗದರ್ಶನದಲ್ಲಿ ಕೂಡಲೇ ಮಾಡಬೇಕು ಪ್ರಾಧಿಕಾರಕ್ಕೆ ಅನುಮತಿಗಾಗಿ ಬರುವ ಪ್ರತಿಯೊಬ್ಬರ ಅರ್ಜಿಯ ಜೊತೆಗೆ ನೇರವಾಗಿ ಸ್ಥಳ ಪರಿಶೀಲನೆ ಮಾಡಿ ಸಮಸ್ಯೆ ಇದ್ದರೆ ಇಂತಿಷ್ಟು ದಿನಗಳಲ್ಲಿ ಸರಿ ಪಡಿಸಬೇಕು ಅಂತ ಅವರ ಕಡೆಯಿಂದ ಲಿಖಿತವಾಗಿ ಉತ್ತರ ಪಡೆದು ಅನುಮತಿ ಕೊಡಬೇಕು ಎಂದರು.

ಸಭೆಯಲ್ಲಿ ಕೆಯುಡಿಎ ಅಧ್ಯಕ್ಷ ಮಹಮ್ಮದ್ ಹನೀಫ್, ಅಪರ ಜಿಲ್ಲಾಧಿಕಾರಿ ಮಂಗಳಾ, ಕೆಯುಡಿಎ ಆಯುಕ್ತ ಶ್ರೀನಾಥ್, ಸಹಾಯಕ ನಿರ್ದೇಶಕಿ ಅನಿತಾ, ಡಿಹೆಚ್ಒ ಜಗದೀಶ್, ಪಿಡ್ಯೂಡಿ ಇಂಜಿನಿಯರ್ ರಾಮಮೂರ್ತಿ, ಇನ್ಸ್ಪೆಕ್ಟರ್ ಶಿವಕುಮಾರ್ ಸೇರಿದಂತೆ ಮುಂತಾದವರು ಇದ್ದರು.

Latest News

BREAKING: ಭೀಕರ ಅಪಘಾತ.. ಐವರು ಸಾವು

BREAKING: ಭೀಕರ ಅಪಘಾತ.. ಐವರು ಸಾವು

ಯಾದಗಿರಿ: ರಾಜ್ಯದಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಬೈಕ್‌'ಗೆ ಸಾರಿಗೆ ಬಸ್‌ ಡಿಕ್ಕಿಯಾಗಿ ಐವರು

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

Budget Breaking : ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೇಂದ್ರ ಸರ್ಕಾರ

ದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

Gruhalakshmi Yojane: ಸಂಕ್ರಾಂತಿಗೆ ಸರ್ಕಾರದಿಂದ ಬಂಪರ್ ಆಫರ್

ಗೃಹಲಕ್ಷ್ಮಿ ಯೋಜನೆಯ (Gruhalakshmi Yojane) 16ನೇ ಕಂತಿನ ಹಣದ ಕುರಿತು ಮಾಹಿತಿ ಇಲ್ಲಿದೆ. ಪ್ರತಿ

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ₹90 ಸಾವಿರ ಗಡಿ ದಾಟುವುದು ಫಿಕ್ಸ್!!

Gold Rate: ನವದೆಹಲಿಯ ಚಿನಿವಾರ ಪೇಟೆಯಲ್ಲಿ ಬುಧವಾರ 10 ಗ್ರಾಂ ಚಿನ್ನದ ಧಾರಣೆಯು ಮತ್ತೆ

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: 5 ಹೊಸ ನಿಮಯ ಜಾರಿ.. ದಂಡ ಫಿಕ್ಸ್.!

Adhaar Card New Rules: ಸರ್ಕಾರದಿಂದ ಆಧಾರ್ ಕಾರ್ಡ್ ಹೊಂದಿದವರಿಗೆ 5 ಹೊಸ ರೂಲ್ಸ್ ಜಾರಿ ಮಾಡಿದೆ. ಈ ಐದೂ ನಿಮಯ ಪಾಲಿಸದಿದ್ದರೆ ದಂಡ ಗ್ಯಾರಂಟಿ! ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬ ನಾಗರಿಕನ ಅಗತ್ಯ ದಾಖಲೆಯಾಗಿ ಗುರುತಿಸಲಾಗಿದೆ. ಇದು ನಮ್ಮ ಗುರುತಿನ ಕಡ್ಡಾಯ ದಾಖಲೆಯಾಗಿದೆ. ಎಲ್ಲಾ ಸರ್ಕಾರಿ ಯೋಜನೆಗಳು ಮತ್ತು ಹಣಕಾಸು ಸೇವೆಗಳು ನಮ್ಮನ್ನು ತಲುಪಲು ಆಧಾರ್ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಅಗತ್ಯವಿರುತ್ತದೆ. Join Our Telegram: https://t.me/dcgkannada

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan: ನಿವೃತ್ತಿ ಕುರಿತು ವಿರಾಟ್ ಕೊಹ್ಲಿ ಕ್ಲಾರಿಟಿ

Virat Kohli Retirement Plan ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ವಿರಾಟ್ ಕಳಪೆ ಫಾರ್ಮ್ ನಿಂದ ನಿವೃತ್ತಿ ಕುರಿತು ಚರ್ಚೆ ಶುರುವಾಗಿದೆ. ಈ ಸರಣಿಯಲ್ಲಿ 9 ಇನಿಂಗ್ಸ್ ಆಡಿದ್ದ ವಿರಾಟ್ ಕೊಹ್ಲಿ 23.75 ರ ಕಳಪೆ ಸರಾಸರಿಯೊಂದಿಗೆ 190 ರನ್ ಮಾತ್ರ ಕಲೆಹಾಕಿದ್ದಾರೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಕೊಹ್ಲಿ ನಿವೃತ್ತರಾಗುವುದು ಉತ್ತಮ ಎಂಬ ಕೂಗುಗಳು ಕೇಳಿಬಂದಿದ್ದವು. ಆದರೀಗ ವಿರಾಟ್ ಕೊಹ್ಲಿ ತಾವು ಯಾವಾಗ ನಿವೃತ್ತಿ ಆಗುತ್ತೇನೆ ಎಂಬುದರ