ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಾಯಕತ್ವವನ್ನು ನಾನು ಒಪ್ಪಿಲ್ಲ. ಬಿಜೆಪಿಯಲ್ಲಿ ಶುದ್ದೀಕರಣ ಆಗಬೇಕು ಎನ್ನುವುದು ನನ್ನೊಬ್ಬನ ಆಸೆ ಅಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ(KS Eshwarappa) ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸತ್ತರೆ ಬಿಜೆಪಿ ಧ್ವಜವನ್ನು ಮೈಮೇಲೆ ಹಾಕಿಕೊಂಡೇ ಸಾಯುತ್ತೇನೆ. ಬಿಜೆಪಿಯಿಂದ ಹೊರಗೆ ಇರುವುದಿಲ್ಲ ಎಂದು ಹೇಳಿದರು. ಬಿಜೆಪಿಯಲ್ಲಿ ಶುದ್ದೀಕರಣ ಆಗಬೇಕು ಎನ್ನುವುದು ನನ್ನೊಬ್ಬನ ಆಸೆ ಅಲ್ಲ. ನಾನು ಆರಂಭದಿಂದಲೂ ಈ ಬಗ್ಗೆ ಧ್ವನಿ ಎತ್ತಿದ್ದೇನೆ. ನಂತರ ಯತ್ನಾಳ, ರಮೇಶ ಜಾರಕಿಹೊಳಿ, ಲಿಂಬಾವಳಿ ಶುರು ಮಾಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪಕ್ಷದೊಳಗೆ ಅಸಮಾಧಾನ, ಆತೃಪ್ತಿ ಇದೆ. ಅದು ಶುದ್ದೀಕರಣ ಆಗಬೇಕು ಎಂದು ಹೇಳಿದರು.
ನಾನು ಚುನಾವಣೆಯಲ್ಲಿ ಸೋತೆ. ಆದರದು ಯಡಿಯೂರಪ್ಪ ಅವರ ಮಗನ ವಿರುದ್ದ ಅಲ್ಲ, ಮೋದಿಗೆ ಸೋತೆ. ಶಿವಮೊಗ್ಗದ ಜನ ಮೋದಿಗೆ ಓಟ್ ಕೊಟ್ಟಿದ್ದಾರೆ. ರಾಘವೇಂದ್ರನಿಗಲ್ಲ. ಯಡಿಯೂರಪ್ಪ ಕುಟುಂಬ ಮೋದಿನ ಬಿಟ್ಟು ಹೊರ ಬಂದು ಗೆಲ್ಲಲಿ ಎಂದು ಸವಾಲೆಸೆದರು.
ಈ ಹಿಂದೆ ಒಮ್ಮೆ ನನಗೆ ಅಖಿಲೇಶ್ ಯಾದವ್ ಕಾಲ್ ಮಾಡಿದ್ದರು. ಕಾಲ್ ಮಾಡಬೇಡಿ ಅಂತಾ ಹೇಳಿದೆ. ಕಾಂಗ್ರೆಸ್ ನಾಯಕರು ಫೋನ್ ಮಾಡಿದ್ದರು. ನನ್ನ ಕುತ್ತಿಗೆ ಕೊಯ್ದರೂ ಬಿಜೆಪಿ ಬಿಟ್ಟು ಹೊರಗೆ ಹೋಗಲ್ಲ ಎಂದಿದ್ದೇನೆ ಎಂದರು.
ಇದನ್ನೂ ಓದಿ: Accident news: ಭೀಕರ ಅಪಘಾತದಲ್ಲಿ ಯುವಕನ ದುರ್ಮರಣ