KSRTC New Rules: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತನ್ನದೇ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಆ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ಸಾಕಷ್ಟು ಚರ್ಚೆಯಾಗುತ್ತಿದೆ. ಇದೀಗ ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರ ಹೊಸ ರೂಲ್ಸ್ ಜಾರಿಗೆ ತಂದಿದೆ.
ರಾಜ್ಯದಲ್ಲಿನ ಶಕ್ತಿ ಯೋಜನೆಯಿಂದಾಗಿ ಮಹಿಳೆಯರಿಗೆ ಯಾವುದೇ ಹಣ ಖರ್ಚು ಮಾಡದೆ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಶಕ್ತಿ ಯೋಜನೆ ಕಲ್ಪಿಸಿದೆ. ಇದೀಗ ಈ ಒಂದು ಯೋಜನೆ ಅಡಿಯಲ್ಲಿ ಹೊಸದಾದ ರೂಲ್ಸ್ ಗಳನ್ನು ಜಾರಿ ಮಾಡಿದೆ.
ಉಚಿತ ಬಸ್ ಪ್ರಯಾಣಿಸುವ ಮಹಿಳೆಯರಿಗೆ ಹೊಸ ರೂಲ್ಸ್ ಜಾರಿ
ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದು ವರ್ಷಗಳೇ ಕಳೆದಿವೆ. ಮತ್ತು ಈ ಒಂದು ಯೋಜನೆಯಿಂದಾಗಿ ರಸ್ತೆ ಸಾರಿಗೆ ಸಂಚಾರ ಇಲಾಖೆ ಸಂಸ್ಥೆಗಳಿಗೆ ನಷ್ಟವೂ ಉಂಟಾಗಿದೆ. ರಾಜ್ಯದಲ್ಲಿನ ಮಹಿಳೆಯರು ಸಂಚರಿಸುವುದು ಅಲ್ಲದೆ ಬೇರೆ ರಾಜ್ಯದ ಮಹಿಳೆಯರು ಸಹ ನಮ್ಮ ರಾಜ್ಯದಲ್ಲಿ ಆಧಾರ್ ಕಾರ್ಡ್ ವಿಳಾಸ ಬದಲಿಸಿಕೊಂಡು ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ. ಇಂಥ ಪ್ರಯಾಣ ಮಾಡುವ ಮಹಿಳೆಯರು ತಪ್ಪಿಸುವ ಸಲುವಾಗಿ ಅತಿ ಶೀಘ್ರದಲ್ಲಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ಕುರಿತು ಅರ್ಜಿಯನ್ನು ಅತಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದೆ.
ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಮತ್ತು ಗಂಡಸರಿಗೆ ಕುಳಿತುಕೊಳ್ಳುವ ಆಸನದ ತೊಂದರೆ ಆಗಬಾರದೆಂದು ಸಮ ಪ್ರಮಾಣದಲ್ಲಿ ನೀಡುವ ಮತ್ತೊಂದು ವ್ಯವಸ್ಥೆ ಮಾಡುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಮತ್ತು ಯಾವುದೇ ವ್ಯಕ್ತಿ ಬಸ್ಗಳಲ್ಲಿ ಸಂಚಾರ ಮಾಡುವಾಗ ಇನ್ನೊಬ್ಬರಿಗೆ ಅಸಭ್ಯವಾಗಿ ವರ್ತನೆ ದಾಂದಲೇ ಮಾಡುವ ಹಾಗಿಲ್ಲ. ಜೋರಾಗಿ ಸಂಗೀತ ಮತ್ತು ಹಾಡು ಹೇಳುವುದನ್ನು ಕೂಡ ಮಾಡುವಂತಿಲ್ಲ. ಬಸ್ ನಿರ್ವಾಹಕರಿಗೆ ಅಸಭ್ಯವಾಗಿ ಪ್ರತಿ ಉತ್ತರ ನೀಡುವಂತಿಲ್ಲ.
ಈ ಮೇಲೆ ನೀಡಿರುವ ರೂಲ್ಸ್ ಗಳನ್ನು ಮೀರಿದರೆ ಅಂತ ವ್ಯಕ್ತಿಗಳಿಗೆ ಕಾನೂನು ಪ್ರಕಾರ ಶಿಕ್ಷೆ ಒದಗಿಸಲಾಗುತ್ತದೆ ಎಂದು ರಾಜ್ಯ ಸರ್ಕಾರ ಹಾಗೂ ರಸ್ತೆ ಸಾರಿಗೆ ಸಂಚಾರ ಇಲಾಖೆ ಕ್ರಮಬದ್ಧವಾಗಿ ತಿಳಿಸಿದೆ.