ಬೆಂಗಳೂರು, (ಆಗಸ್ಟ್ 10); ಮೂಡಾ ಹಗರಣದ ಆರೋಪದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ (DKS vs HDK) ಅವರ ರಾಜೀನಾಮೆಗೆ ಆಗ್ರಹಿಸಿ ಕಮಲ-ದಳ ದೋಸ್ತಿಗಳು ಬೆಂಗಳೂರಿನಿಂದ ಮೈಸೂರು ವರೆಗೆ ನಡೆಸಿದ ಪಾದಯಾತ್ರೆ ಇಂದಯ ಸಮಾರೋಪ ಕಂಡಿದೆ.
Jion Our Telegram: https://t.me/dcgkannada
ಈ ಪಾದಯಾತ್ರೆ ಆರಂಭವಾದ ಉದ್ದೇಶ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಆದ್ರೂ, ಶರಪರ ಕಿತ್ತಾಡಿದ್ದು ಮಾತ್ರ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ. (DKS vs HDK) ಇವರ ನಡುವೆ ವಾಗ್ದಾಳಿ ಯಾವ ಮಟ್ಟಕ್ಕಿತ್ತೆಂದರೆ ಪಾದಯಾತ್ರೆಯ ಉದ್ದೇಶವೇ ಮರೆತು ಹೋಗಿದೆ.
ನಿನ್ನೆ ನವದೆಹಲಿಯಲ್ಲಿ ‘ಹುಷಾರು ಶಿವಕುಮಾರ್. ಗಂಡಸ್ತನದ ರಾಜಕಾರಣ ಮಾಡಿ’ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಖಡಕ್ ಆಗಿಯೇ ಟಾಂಗ್ ನೀಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಇಂದು ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಕುಮಾರಸ್ವಾಮಿ ಒಬ್ಬರೇ ಗಂಡಸ್ಸಾ ಎಂದು ಪ್ರಶ್ನಿಸಿ, ಇತ್ತೀಚೆಗೆ ಅವರು ಏನು ಮಾತನಾಡಿದ್ದಾರೆ ಒಮ್ಮೆ ನೆನಪಿಸಿಕೊಳ್ಳಲಿ. ನನ್ನನ್ನು ಮಿಲಿಟರಿ ಬಂದು ಕರೆದುಕೊಂಡು ಹೋಗುತ್ತದೆ ಎಂದಿದ್ದರು. ಅದರ ಅರ್ಥ ನನ್ನನ್ನು ಮತ್ತೆ ಜೈಲಿಗೆ ಕಳುಹಿಸುತ್ತೇನೆ ಎಂಬ ಎಚ್ಚರಿಕೇನಾ ಎಂದು ತಿವಿದಿದ್ದಾರೆ.
ಇದನ್ನೂ ಓದಿ: BJP-JDS ಪಾದಯಾತ್ರೆ ಸಮಾರೋಪಕ್ಕೂ ಮುನ್ನ ಚಾಮುಂಡಿ ಮೊರೆ ಹೋದ ಸಿಎಂ ಸಿದ್ದರಾಮಯ್ಯ
ನಾನು ಈಗಾಗಲೇ ಜೈಲು ಕಂಡಿರೋನು. ಅದಲ್ಲದೇ ನಾನು ಜೈಲಲ್ಲಿ ಇದ್ದಾಗ ಅವರೂ ಬಂದು ನೋಡಿದ್ದರು. ಜೈಲಿನ ಒಳಗೆ ನಾನು ಎಷ್ಟು ಶಕ್ತಿಶಾಲಿಯಾಗಿದ್ದೆ ಅಂತಾ ಖುದ್ದು ಕುಮಾರಸ್ವಾಮಿ ಕಣ್ಣಾರೇ ನೋಡಿದ್ದಾರೆ ಎಂದು ತಿರುಗೇಟು ನೀಡಿದ್ದು ಕುಮಾರಸ್ವಾಮಿ ಬೆದರಿಕೆಗಳಿಗೆ ಹೆದರುವ ರಕ್ತ ನನ್ನದಲ್ಲ ಎಂದು ಡಿಕೆಶಿ ಅವರು ಮಾತಿನಲ್ಲೇ ಡಿಚ್ಚಿ ಕೊಟ್ಟಿದ್ದಾರೆ.