ಮುದ್ದೇಬಿಹಾಳ : ಮುದ್ದೇಬಿಹಾಳ ಮೂಲದ ಉಪನ್ಯಾಸಕಿ ಗುರುದೇವಿ ಹಳ್ಳೂರ ಅವರು ಶಿಕ್ಷಣಶಾಸ್ತçದಲ್ಲಿ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ಎ ಸ್ಟಡಿ ಆಫ್ ಲರ್ನಿಂಗ್ ಟೀಚಿಂಗ್ ಅಂಡ್ ಥಿಂಕಿAಗ್ ಸ್ಟೈಲ್ ಆಫ್ ಪ್ರಾಸ್ಪೆಕ್ಟಿವ್ ಟೀಚರ್ಸ್ ಇನ್ ರಿಲೇಶನ್ ಟು ದೇಆರ್ ಟೀಚಿಂಗ್ ಕಾಂಪಿಟನ್ಸ” ವಿಷಯದ ಮೇಲೆ ಸಂಶೋಧನೆ ನಡೆಸಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ಡಿ ಪದವಿ ಪ್ರದಾನ ಮಾಡಲಾಗಿದೆ.
ಹಾಲಿ ವಿಜಯಪುರದ ಶ್ರೀ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ವಿಜಯಪುರದ ಇಂಗ್ಲೀಷ್ ವಿಭಾಗದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಗುರುದೇವಿ ಹಳ್ಳೂರ ಅವರಿಗೆ ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರು,ಶಿಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಲ್. ಲಕ್ಕಣ್ಣನವರು ಮಾರ್ಗದರ್ಶನ ಮಾಡಿದ್ದರು.
ಗುರುದೇವಿ ಹಳ್ಳೂರ ಅವರು ವಿಜಯಪುರ ಜಿಲ್ಲಾ ಗ್ರಂಥಾಲಯ ಸಂಘದ ಅಧ್ಯಕ್ಷ ಮಹಾಂತೇಶ ಕೆ . ಬಿರಾದಾರ ಅವರ ಪತ್ನಿ,ಮುದ್ದೇಬಿಹಾಳ ಸಾಂತ್ವನ ಸಹಾಯವಾಣಿ ಕೇಂದ್ರದ ಆಪ್ತ ಸಮಾಲೋಚಕಿ ರೇಣುಕಾ ಹಳ್ಳೂರ ಅವರ ಸಹೋದರಿಯರಾಗಿದ್ದಾರೆ.







