Let's live selflessly on the Earth with the award of the Eco Protector Award: Balarama Kattimani

ಪರಿಸರ ರಕ್ಷಕ” ಪ್ರಶಸ್ತಿ ಪ್ರದಾನ ಭೂಮಿ ಮೇಲೆ ಸ್ವಾರ್ಥವಿಲ್ಲದೇ ಬದುಕು ನಡೆಸೋಣ: ಬಲರಾಮ ಕಟ್ಟಿಮನಿ

ಪರಿಸರ ರಕ್ಷಕ” ಪ್ರಶಸ್ತಿ ಪ್ರದಾನ ಭೂಮಿ ಮೇಲೆ ಸ್ವಾರ್ಥವಿಲ್ಲದೇ ಬದುಕು ನಡೆಸೋಣ: ಬಲರಾಮ ಕಟ್ಟಿಮನಿ

ಮುದ್ದೇಬಿಹಾಳ : ಭೂಮಿಯ ಮೇಳೆ ಮನುಷ್ಯ ಸ್ವಾರ್ಥವಿಲ್ಲದ ಜೀವನ ನಡೆಸಬೇಕು. ಈ ಭೂಮಿಯ ಮೇಲೆ ಮನುಷ್ಯನಿಗೆ ಇರುವಷ್ಟೇ ಹಕ್ಕು ಪ್ರಾಣಿ, ಪಕ್ಷಿಗಳಿಗೂ ಇದೆ ಎಂಬುದನ್ನು ಅರಿತುಕೊಂಡು ಜೀವನ ನಡೆಸಬೇಕು ಎಂದು ತಹಶೀಲ್ದಾರ್ ಬಲರಾಮ ಕಟ್ಟಿಮನಿ ಹೇಳಿದರು.

ಪಟ್ಟಣದ ಹುಡ್ಕೋದ ಹಸಿರು ತೋರಣ ಉದ್ಯಾನವನದಲ್ಲಿ ಗುರುವಾರ ಹಸಿರು ತೋರಣ ಗೆಳೆಯರ ಬಳಗ, ಅರಣ್ಯ ಇಲಾಖೆ, ಪುರಸಭೆ ಮತ್ತು ತಾಲ್ಲೂಕು ಆಡಳಿತದ ಸಂಯುಕ್ತಾಶ್ರದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೊರೊನಾ ಸಂಕಷ್ಟದ ಸಮಯದಲ್ಲಿ ಆಮ್ಲಜನಕದ ಕೊರತೆಯಿಂದ ಲಕ್ಷಾಂತರ ಜನ ಪ್ರಾಣ ಕಳೆದುಕೊಂಡ ಘಟನೆ ಕಣ್ಣೆದುರಿಗೇ ಇದೆ. ದೊಡ್ಡ ನಗರಗಳಲ್ಲಿ ಆಮ್ಲಜನಕವನ್ನು ಹಣ ಕೊಟ್ಟು ಕೊಳ್ಳುವ ಪರಿಸ್ಥಿತಿ ಇದೆ ಎಂದು ನಾವು ಅರಿಯಬೇಕು ಎಂದರು.

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾದಾರ ಮಾತನಾಡಿ, ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಬಹಳಷ್ಟು ಸಂಘಟಿತರಾಗಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಇದು ಜಿಲ್ಲೆಗೇ ಮಾದರಿಯಾಗಿದೆ ಎಂದರು.

ಸಾಮಾಜಿಕ ವಲಯ ಅರಣ್ಯಾಧಿಕಾರಿ ಗಿರೀಶ ಆಲಕುಡೆ, ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ, ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಕೆಬಿಜೆನ್ನೆಲ್ ವಿಭಾಗದ ಉಪ ಅರಣ್ಯಾಧಿಕಾರಿ ಶ್ರೀಕಾಂತ ಘೋರ್ಪಡೆ,ಹಸಿರು ತೋರಣ ಬಳಗದ ಅಧ್ಯಕ್ಷ ಬಿ.ಎಚ್.ಬಳಬಟ್ಟಿ ಇದ್ದರು.

“ಪರಿಸರ ರಕ್ಷಕ” ಪ್ರಶಸ್ತಿಗೆ ಆಯ್ಕೆಯಾದ ಶರಣಪ್ಪ ನಾಗಾವಿ, ಅನಿಲಕುಮಾರ ಚಲವಾದಿ, ಶರಣಬಸಪ್ಪ ನೆಲವಾಸಿ, ಸಿದ್ದನಗೌಡ ಲಿಂಗದಳ್ಳಿ ಅವರನ್ನು ಸನ್ಮಾನಿಸಲಾಯಿತು. ಹಸಿರು ತೋರಣ, ಮನೆಯಲ್ಲಿ ಮಹಾಮನೆ, ಪುರಸಭೆ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಗಿಡಗಳನ್ನು ನೆಟ್ಟು ನೀರೆರೆಯುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಲಾಯಿತು. ಪ್ರೇರಣಾ ಬೆಳಗಲ್ಲ ಪರಿಸರ ಗೀತೆ ಹಾಡಿದಳು. ಅಮರೇಶ ಗೂಳಿ ಸ್ವಾಗತಿಸಿದರು. ವೀರೇಶ ಢವಳಗಿ ಸನ್ಮಾನಿತರನ್ನು ಪರಿಚಯಿಸಿದರು. ಸಂಚಾಲಕ ಮಹಾಬಲೇಶ್ವರ ಗಡೇದ ನಿರೂಪಿಸಿದರು. ರವಿ ಗೂಳಿ ವಂದಿಸಿದರು.

Latest News

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಮುದ್ದೇಬಿಹಾಳ : ಕಿರು ಹಾಗೂ ಮಧ್ಯಮ ಉದ್ದಿಮೆ ಆರಂಭಿಸಲು ಬಯಸುವವರು ಸಿಡ್ಬಿ ಸಮೃದ್ಧಿ ಯೋಜನೆಯಡಿ

ಶಾಲೆ,ಕಾಲೇಜು,ಬಸ್ ಸಂಚಾರ ಇದೆಯಾ ? ಇಲ್ವಾ ?:                ಸೆ.12 ರಂದು ಪಕ್ಷಾತೀತವಾಗಿ ಮುದ್ದೇಬಿಹಾಳ ಬಂದ್ ಕರೆ

ಶಾಲೆ,ಕಾಲೇಜು,ಬಸ್ ಸಂಚಾರ ಇದೆಯಾ ? ಇಲ್ವಾ ?: ಸೆ.12 ರಂದು ಪಕ್ಷಾತೀತವಾಗಿ ಮುದ್ದೇಬಿಹಾಳ ಬಂದ್ ಕರೆ

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡುವಂತೆ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ:                   ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಬಿಎಎಸ್ ಶಾಲೆಯಲ್ಲಿ ಶಿಕ್ಷಕರ ದಿನದ ಸಂಭ್ರಮ: ಗುರು ಕಾರುಣ್ಯದಿಂದಲೇ ಶಿಷ್ಯನ ಏಳ್ಗೆ-ಶಿವನಗೌಡ ಬಿರಾದಾರ

ಮುದ್ದೇಬಿಹಾಳ : ಮನುಷ್ಯನಿಗೆ ದೈವ ಬಲದೊಂದಿಗೆ ಗುರುವಿನ ಅವಶ್ಯಕತೆ ಬಹಳವಿದೆ. ಇದರಿಂದಲೇ ಇಂದಿನ ಆಧುನಿಕ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಡೆದಿರುವ ಧರಣಿ ಸತ್ಯಾಗ್ರಹ ಮೂರು ದಿನ ಪೂರೈಸಿದ್ದು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಯರಝರಿ ಜಿಪಂ ಭಾಗದ ರೈತರು ಬುಧವಾರದ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.ಪಟ್ಟಣದಲ್ಲಿ ಮೆರವಣಿಗೆ ನಡೆಸಿದ ಶಾಸಕರು,ಸರಕಾರಕ್ಕೆ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ, ಮಳೆ ಕೊರತೆ ಇದೆ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ ಹೇಳಿಕೆಯನ್ನು ತಗೆದುಕೊಂಡರೋ ಗೊತ್ತಿಲ್ಲ.ಸದ್ಯಕ್ಕೆ ಮುಖ್ಯಮಂತ್ರಿಗಳು ಪತ್ರವ್ಯವಹಾರ ನಿಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸುಮ್ಮನಾಗಿದ್ದೇನೆ.ನನ್ನದು ಸಿದ್ಧಾಂತದ ಮೇಲೆ ಹೋರಾಟ ನಡೆಯುತ್ತದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಬಳಿ ತಮ್ಮನ್ನು ಎದುರಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ನನ್ನ ಮಾನಸಿಕ ಸ್ಥಿತಿ ಹೇಗಿದೆ ? ಎಂಬುದನ್ನು ಮತ್ತೊಬ್ಬರಿಂದ ಹೇಳಿಸಿಕೊಳ್ಳಬೇಕಾಗಿಲ್ಲ.ಮಾನಸಿಕ ಚಿಕಿತ್ಸೆಯ ಬಗ್ಗೆ ಕೊಟ್ಟಿರುವ ಮಾತಿಗೆ ನಾನು