ಹುನಗುಂದ/ಮುದ್ದೇಬಿಹಾಳ : ಲಾರಿ – ಕಾರು ಮುಖಾಮುಖಿ ಡಿಕ್ಕಿ ಸಂಭವಿಸಿ ನಾಲ್ವರು ಸ್ಥಳದಲ್ಲೇ ಅಸುನೀಗಿದ ಘಟನೆ ಹುನಗುಂದ ತಾಲ್ಲೂಕಿನ ಧನ್ನೂರ ಟೋಲ್ ನಾಕಾ ಸಮೀಪದಲ್ಲಿ ಗುರುವಾರ ನಡೆದಿದೆ.
ಮೃತರನ್ನು ಮುದ್ದೇಬಿಹಾಳ ತಾಲ್ಲೂಕು ಬಿದರಕುಂದಿಯ ಪ್ರಥಮ ದರ್ಜೆ ಗುತ್ತಿಗೆದಾರ ಲಕ್ಷ್ಮಣ ವಡ್ಡರ,ಬೈಲಪ್ಪ ಬಿರಾದಾರ, ಕಾರು ಚಾಲಕ ಮಹ್ಮದರಫೀಕ ಗುಡ್ನಾಳ, ಮುದ್ದೇಬಿಹಾಳದ ರಾಮಣ್ಣ ನಾಯಕಮಕ್ಕಳ ಮೃತಪಟ್ಟವರು.
ಹುಲಿಗೆಮ್ಮನ ದೇವಸ್ಥಾನದ ದರ್ಶನ ಮುಗಿಸಿಕೊಂಡು ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎಂದು ಮುದ್ದೇಬಿಹಾಳ ಪುರಸಭೆ ಸದಸ್ಯ ಯಲ್ಲಪ್ಪ ನಾಯಕಮಕ್ಕಳ ಮಾಹಿತಿ ನೀಡಿದ್ದಾರೆ.
ಹುನಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.