ಬೆಂಗಳೂರು: ಋತುಚಕ್ರ ರಜೆ ನೀತಿ ಕುರಿತು, ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು, ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾದ ಅಶೋಕ್ ಬಿ ಹಿಂಚಿಗೇರಿ ಅವರೊಂದಿಗೆ, ಚರ್ಚೆ ನಡೆಸಿದರು.
ಸಚಿವರ ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಈ ಭೇಟಿ ಮಾಡಲಾಯಿತು.
ಋತುಚಕ್ರ ರಜೆ ನೀತಿಗೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನೀತಿಯನ್ವಯ ಖಾಸಗಿ ಮತ್ತು ಸರ್ಕಾರ ವಲಯಗಳಲ್ಲಿ ದುಡಿಯುವ ಉದ್ಯೋಗಸ್ಥ ಮಹಿಳೆಯರು ತಿಂಗಳಲ್ಲಿ ಒಂದು ದಿನ ಋತುಚಕ್ರ ರಜೆಯನ್ನು ಪಡೆಯಬಹುದಾಗಿದೆ. ಇದು ವೇತನ ಸಹಿತ ರಜೆಯಾಗಿದೆ.







