ಇಳಕಲ್: ತಾಲೂಕಿನ ಚಿಕ್ಕ ಆದಾಪೂರ ಗ್ರಾಮದಲ್ಲಿ ಗ್ರಾಮ ದೇವತೆ ಕಾಳಿಕಾ ದೇವಿ ಜಾತ್ರೆ ಅಂಗವಾಗಿ ಇಂದು (27-8-2024) ಆಯೋಜನೆಗೊಂಡಿರುವ “ಯಾರಿವಳ ಗಂಡ” ಸಾಮಾಜಿಕ ನಾಟಕವನ್ನು ಉದ್ಘಾಟನೆಗೆ ಆಗಮಿಸುವುದು ಖಚಿತವಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ನಿನ್ನೆ ಪ್ರದರ್ಶನಗೊಂಡ “ಕಿಲಾಡಿ ರಂಗಣ್ಣ” ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ್ದ ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ್ ಅವರ ಮಗ ರಾಜುಗೌಡ ಪಾಟೀಲ್ ಅವರು, ಶಾಸಕ ವಿಜಯಾನಂದ ಕಾಶಪ್ಪನವರ ಮೇಲೆ ಏಕವಚನದಲ್ಲಿಯೇ ವಾಗ್ದಾಳಿ ಮಾಡಿ.. “ನಾಳೆ ಬಾ ಆದಾಪೂರಕ್ಕ.. ಏನ್ ಮಾಡ್ತಿ ನೋಡ್ತಿವಿ” ಎಂದು ಅಬ್ಬರಿಸಿದ್ದಾರೆ.
ಇಂದು ಗ್ರಾಮಕ್ಕೆ ಆಗಮಿಸಲಿರುವ ಶಾಸಕ ವಿಜಯಾನಂದ ಕಾಶಪ್ಪನವರ ಅವರು ನಾಟಕ ಉದ್ಘಾಟನೆ ಮಾಡಿದ ನಂತರ ಏನು ಮಾತನಾಡುತ್ತಾರೆ ಎನ್ನುವ ಕುತೂಹಲ ಗ್ರಾಮಸ್ಥರಲ್ಲಿದೆ. ಈ ಕುತೂಹಲಕ್ಕೆ ರಾತ್ರಿ ಸುಮಾರು 11 ಗಂಟೆಗೆ ತೆರೆಬೀಳಲಿದೆ.
ವಿಜ್ಜಾ.. ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತಿದ್ದೇನೆ: ಏಕ ವಚನದಲ್ಲಿಯೇ ರಾಜುಗೌಡ ಪಾಟೀಲ್ ವಾಗ್ದಾಳಿ

ಇಳಕಲ್: “** ವಿಜ್ಜಾ.. ಇನ್ನೂ ನೀನು ಬೋ* ನಾನು ಸಜ್ಜಾಗಿ ನಿಂತಿದ್ದೇನೆ” ಎಂದು ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ್ ಅವರ ಮಗನಾದ ರಾಜುಗೌಡ ಪಾಟೀಲ್ ಅವರು ಸವಾಲು ಹಾಕಿದರು.
ತಾಲೂಕಿನ ಚಿಕ್ಕ ಆದಾಪೂರ ಗ್ರಾಮದಲ್ಲಿ ಗ್ರಾಮ ದೇವತೆ ಕಾಳಿಕಾ ದೇವಿ ಜಾತ್ರೆಯ ಅಂಗವಾಗಿ ಆಯೋಜಿಸಿದ್ದ “ಕಿಲಾಡಿ ರಂಗಣ್ಣ” ಸಾಮಾಜಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದರು.
“ನಾನು ರಾಜಕೀಯ ಮಾತನಾಡಲು ಬಂದಿರಲಿಲ್ಲ. ಆದರೆ, ಇಳಕಲ್ ನಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಸುದ್ದಿಗೋಷ್ಠಿಯಲ್ಲಿ ನಮ್ಮ ತಂದೆಯವರಿಗೆ ದೊಡ್ಡನಗೌಡ ನೀ ದಡ್ಡ ಎಂದು ನಿಂದಿಸಿದ ಕಾರಣ ರಾಜಕೀಯ ಮಾತನಾಡಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ” ಎಂದು ಮಾತು ಆರಂಭಿಸಿದರು.
“ನಾವು ಇಳಕಲ್ ನಲ್ಲಿ ಇರುವವರು. ಬಾಯಿಗೆ ಬಂದಂಗ ಮಾತನಾಡಿದರೆ ಸುಮ್ಮನೆ ಕೂರಲು ಆಗಲ್ಲ. ಇನ್ನು ಮುಂದೆ ನೀ ಬೊಗಳು.. ನಾನು ನೋಡ್ತಿನಿ…” ಎಂದು ಎಚ್ಚರಿಕೆ ರೀತಿ ಮಾತನಾಡಿದರು.
“ಅಭಿವೃದ್ಧಿ ಕೆಲಸ ಮಾಡುವುದನ್ನು ಬಿಟ್ಟು, ಬಾಯಿಗೆ ಬಂದಂಗ ಮಾತನಾಡುತ್ತಾ, ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಿಯಾ? ನಾಳೆ ಚಿಕ್ಕ ಆದಾಪೂರ ಗ್ರಾಮಕ್ಕೆ ಬರ್ತಿಯಲ್ಲ… ಬಾ.. ಏನು ಮಾಡ್ತಿ ನೋಡ್ತಿವಿ” ಎಂದು ಗುಡುಗಿದರು.
ವಾಗ್ವಾದಕ್ಕೆ ಕಾರಣ ಏನು?
ಇಳಕಲ್ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ನಂತರ ಶಾಸಕರು ಮತ್ತು ಮಾಜಿ ಶಾಸಕರ ನಡುವಿನ ವಾಕ್ಸಮರ ಜೋರಾಗಿದೆ. ಈಗ ಮಾಜಿ ಶಾಸಕ ದೊಡ್ಡನಗೌಡ ಅವರ ಮಗನೂ ಮಾತಿನ ಮಲ್ಲ ಯುದ್ಧಕ್ಕೆ ಮತ್ತೆ ಪ್ರವೇಶವನ್ನು ಚಿಕ್ಕ ಆದಾಪೂರ ಗ್ರಾಮದಿಂದ ಮಾಡಿದ್ದಾರೆ.
ಬಿಜೆಪಿ ನಾಯಕತ್ವ ಯಾರದ್ದು?
ವಿಧಾನಸಭೆ ಚುನಾವಣೆ ಪೂರ್ವದಲ್ಲಿಯೂ ಹೀಗೆ ಮಾತಿನ ಯುದ್ಧ ನಡೆಸಿದ್ದ ಕಾಶಪ್ಪನವರ ಮತ್ತು ದೊಡ್ಡನಗೌಡ ಅವರು ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ಸು ಕಂಡಿದ್ದರು. ಈಗ ತಾಲೂಕು ಬಿಜೆಪಿ ನಾಯಕತ್ವ ಚರ್ಚೆ ಜೋರಾಗಿರುವಾಗಲೇ ಮಾಜಿ ಶಾಸಕರು ತಮ್ಮ ಮಗನನ್ನು ಮತ್ತೆ ಮುನ್ನೆಲೆಗೆ ತರಲು ಮುಂದಾಗಿದ್ದಾರಾ ಎಂಬ ಚರ್ಚೆ ಸ್ಥಳೀಯ ರಾಜಕೀಯ ವಲಯದಲ್ಲಿ ನಡೆಯುತ್ತಿದೆ.
ಏತನ್ಮಧ್ಯೆ, ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಸೇರಿಸಿದ ನಂತರ ಎಸ್. ಆರ್. ನವಲಿಹಿರೇಮಠ ಅವರೂ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಬಿಜೆಪಿ ನಾಯಕತ್ವ ಯಾರ ಬಳಿ ಉಳಿಯುತ್ತದೆ ಎಂಬುದು ಭಾರೀ ಕುತೂಹಲ ಮೂಡಿಸಿದೆ.
ಟಗರಿನ ಕಾಳಗಕ್ಕೆ ವೇದಿಕೆ ಸಜ್ಜು:
ಇಂದು(27-8-2024) ಮಧ್ಯಾಹ್ನ 3 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಟಗರಿನ ಕಾಳಗಕ್ಕೆ ಗ್ರಾಮದ ಗುರು ಹಿರಿಯರು ಚಾಲನೆ ನೀಡಲಿದ್ದಾರೆ.
ನಾಲ್ಕು ಬಹುಮಾನಗಳಿವೆ:
ಪ್ರಥಮ ಬಹುಮಾನ :
7001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ಚನ್ನಪ್ಪಗೌಡ ವೀ. ಗುಡಿಹಿಂದಿನ)
ದ್ವಿತೀಯ ಬಹುಮಾನ:
5001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ವೆಂಕನಗೌಡ ದೊ. ಅಗಸಿಮುಂದಿನ)
ತೃತೀಯ ಬಹುಮಾನ:
3001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ರಾಜುಗೌಡ ನಿಂ. ಜೋಗರೆಡ್ಡಿ)
ಚತುರ್ಥ ಬಹುಮಾನ:
2001 ರೂಪಾಯಿ ಮತ್ತು ಟ್ರೋಫಿ
(ಕೊಡುಗೆ: ಲಕ್ಷ್ಮಣ ಮ. ಜಾಡರ್)
ವೀಕ್ಷಕ ವಿವರಣೆಯನ್ನು ರಾಜುಗೌಡ ಶಂ. ಹನಮಗೌಡ್ರ ಅವರು ನೀಡಲಿದ್ದಾರೆ. ನಿರ್ಣಾಯಕರಾಗಿ ದೇವಪ್ಪ ಬ. ಬಡಕುರಿ, ಸೋಮಶೇಖರ ಕುರಿ, ಪರಸಪ್ಪ ಮಿಂಚೇರಿ, ಯಂಕಪ್ಪ ಕುರಿ ಪಂದ್ಯವನ್ನು ನಡೆಸಿಕೊಡಲಿದ್ದಾರೆ.
ಪ್ರವೇಶ ಫೀ: 301 ರೂಪಾಯಿ
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8123485661 (ಯಂಕಪ್ಪ), 8088917431 (ಶಂಕರ್), 8310414151 (ಹನಮಂತ), 9742797909 (ರಾಜು) ಸಂಪರ್ಕಿಸಿ.