ಇಳಕಲ್: ನಗರಸಭೆ (Ilakal nagarasabhe) ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಾಗಲಕೋಟೆ ಜಿಲ್ಲೆಯ ಗಮನವನ್ನು ತನ್ನ ಕಡೆ ಸೆಳೆದುಕೊಂಡಿತ್ತು. ಕೇವಲ ಎಂಟು ಜನ ಸದಸ್ಯರನ್ನು ಹೊಂದಿದ್ದರೂ ಆಪರೇಷನ್ ಹಸ್ತದ ಮೂಲಕ 31 ಜನ ಸದಸ್ಯರ ನಗರಸಭೆಯನ್ನು ಕೈ ಪಡೆ ತನ್ನ ತೆಕ್ಕೆಗೆ ತೆಗೆದುಕೊಂಡು ಬೀಗಿದೆ.
18 ಮತಗಳನ್ನು ಪಡೆದು ಅಧಿಕಾರದ ಗದ್ದುಗೆ ಹಿಡಿದ ನಂತರ ಶಾಸಕ ವಿಜಯಾನಂದ ಕಾಶಪ್ಪನವರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಮಾಜಿ ಶಾಸಕ ದೊಡ್ಡನಗೌಡ ಜಿ. ಪಾಟೀಲ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
Join Our Telegram: https://t.me/dcgkannada
“ಪರ ಊರ ಗೌಡ ನಮ್ಮೂರಲ್ಲಿ ಕರ ಕಟ್ಟುವ ಗೂಟ. ಅವನು ಲಿಂಗಸೂರು ಗೌಡ, ಲೆಕ್ಕಿಹಾಳ ಗೌಡ ಇರಬಹುದು. ನಮ್ಮೂರಲ್ಲಿ ಕರ ಕಟ್ಟುವ” ಎಂದು ದೊಡ್ಡನಗೌಡರ ಕುರಿತು ವ್ಯಂಗ್ಯವಾಡಿದರು.
“ಬಿಜೆಪಿಯ ದೂರಾಡಳಿತದಿಂದ ಬೇಸತ್ತ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿಗೆ ಸಾಥ್ ನೀಡಿದ್ದಾರೆ. ಯಾವುದೇ ವ್ಯಕ್ತಿಗೆ ಸ್ವಾತಂತ್ರ್ಯ ಮುಖ್ಯ. ಅಲ್ಲಿ ಅವರಿಗೆ ಸ್ವತಂತ್ರ ಇರಲಿಲ್ಲ. ಆದ ಕಾರಣ ಕಾಂಗ್ರೆಸ್ ಸೇರಿದ್ದಾರೆ.” ಎಂದು ಆಪರೇಷನ್ ಹಸ್ತವನ್ನು ಶಾಸಕ ವಿಜಯಾನಂದ ಕಾಶಪ್ಪನವರ್ ಸಮರ್ಥನೆ ಮಾಡಿಕೊಂಡರು.
31 ಜನ ಸದಸ್ಯರ ಪೈಕಿ ಒಬ್ಬರು ಮೃತಪಟ್ಟಿದ್ದಾರೆ. 30 ಜನ ನಗರಸಭೆ ಸದಸ್ಯರು, ಒಬ್ಬರು ಶಾಸಕರು, ಒಬ್ಬರು ಲೋಕಸಭಾ ಸದಸ್ಯರು ಸೇರಿದಂತೆ ಒಟ್ಟು 32 ಮತಗಳು ಚಲಾವಣೆಗೊಂಡಿದ್ದು, 18 ಮತಗಳನ್ನು ಪಡೆದ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವಿನ ನಗೆ ಬೀರಿದರು.
ಇದನ್ನೂ ಓದಿ: Devaraju Arasu: ಬಡವರಿಗೆ ಭೂಮಿ ನೀಡಿದ ಪುಣ್ಯತ್ಮ ಅರಸು – ತಹಶೀಲ್ದಾರ್ ನಿಂಗಪ್ಪ
ಎಂಟೆ ಎಂಟು ಸದಸ್ಯರನ್ನು ಹೊಂದಿದ್ದ ಕಾಂಗ್ರೆಸ್ ಅಧಿಕಾರ ಗದ್ದುಗೆ ಏರಿದ್ದು ಮಾತ್ರ ರೋಚಕ ಕಹನಿ. ಆಪರೇಷನ್ ಹಸ್ತ ಮಾಡಿದ ಶಾಸಕ ಕಾಶಪ್ಪನವರ್, 6 ಜನರ ಬಿಜೆಪಿ ಸದಸ್ಯರನ್ನು ಸೆಳೆಯುವಲ್ಲಿ ಯಶಸ್ಸು ಕಂಡರು. ಇದರೊಂದಿಗೆ ಜೆಡಿಎಸ್ ನ ಇಬ್ಬರು ಮತ್ತು ಪಕ್ಷೇತರ ಸದಸ್ಯರನ್ನು ಸೆಳೆದುಕೊಂಡ ಕೈ ನಾಯಕರು ಇಳಕಲ್ ನಗರಸಭೆಯ ಅಧಿಕಾರದ ಗದ್ದುಗೆ ಏರಿದರು.
ಈ ಮೂಲಕ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ನಗರಸಭೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾದ ಬಿಜೆಪಿ ನಾಯಕರು ಮುಖಭಂಗ ಅನುಭವಿಸಿದರು.
ನಗರಸಭೆಯ ಅಧ್ಯಕ್ಷೆಯಾಗಿ ಸುಧಾರಾಣಿ, ಉಪಾಧ್ಯಕ್ಷೆಯಾಗಿ ಕಾಳಮ್ಮ ಜಕ್ಕಾ ಆಯ್ಕೆಯಾಗಿದ್ದಾರೆ.