ಬೆಂಗಳೂರು : ಮೂಡಾ ಸೈಟು (Muda site) ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಇರುವ ಕುರಿತು ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರ ನಿರ್ಣಯ ಖಂಡಿಸಿ ಕಾಂಗ್ರೆಸ್ ರಾಜ್ ಭವನ್ ಚಲೋ ನಡೆಸಿತು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಗಾಂಧಿ ಪ್ರತಿಮೆಯಿಂದ ರಾಜಭವನದವರೆಗೆ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗುತ್ತಾ ಸಾಗಿತು.
ಗೆಹಲೋಟ್ ಹಠಾವೋ ಪ್ರಜಾಪ್ರಭುತ್ವ ಬಚಾವೋ, ಇದು ರಾಜಭವನ ಅಲ್ಲ ರಾಜಕೀಯ ಭವನ, ಮೋದಿ ಕಾ ಕೈಗೊಂಬೆ, ಕಣ್ಮುಚ್ಚಿದ ಪಕ್ಷಪಾತಿ ರಾಜ್ಯಪಾಲ… ಹೀಗೆ ಮುಂತಾದ ಬರಹಗಳುಳ್ಳ ಫಲಕಗಳನ್ನು ಪ್ರದರ್ಶಿಸುತ್ತಾ ಸಿಎಂ ನೇತೃತ್ವದ ಕಾಂಗ್ರೆಸ್ ಬಳಗವು ಗೆಹಲೋಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು.
ಗಾಂಧಿ ಪ್ರತಿಮೆಯ ಬಳಿಯೇ ತುಸು ಹೊತ್ತು ಕುಳಿತು ಧರಣಿ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಬಿಜೆಪಿ ಮತ್ತು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಇದನ್ನೂ ಓದಿ: Love story: ಪ್ರೀತಿಸಲು ಹುಡುಗಿ ಸಿಗಲಿಲ್ಲವೆಂದು ಡೆತ್ ನೋಟ್ ಬರೆದಿಟ್ಟ ಯುವಕ.. ತುಂಗಾ ನದಿಗೆ ಹಾರಿದ್ನಾ..?
ಪ್ರತಿಭಟನೆಯಲ್ಲಿ ಸಚಿವ ಈಶ್ವರ ಖಂಡ್ರೆ, ಸಚಿಮ ಜಮೀರ್ ಅಹ್ಮದ್, ಎಚ್.ಕೆ. ಪಾಟೀಲ್, ವೀರಪ್ಪ ಮೊಯಿಲಿ, ದಿನೇಶ್ ಗುಂಡೂರಾವ್, ವಿ.ಎಸ್. ಉಗ್ರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.