ಮುದ್ದೇಬಿಹಾಳ : ಕೆಲವರಿಗೆ ಮಾತನಾಡುವ ಚಟ ಇರುತ್ತದೆ.ಅಂತೆಯೇ ಕೆಲವು ದಿನಗಳ ಹಿಂದೆ ಒಬ್ಬರು ಪತ್ರಿಕಾಗೋಷ್ಠಿ ನಡೆಸಿ (ಎ.ಎಸ್.ಪಾಟೀಲ್ ನಡಹಳ್ಳಿ) ಹಠಾತ್ ಸ್ಪೋಟದಂತೆ ಬಿಜೆಪಿಯವರೇ ಅಧ್ಯಕ್ಷರಾಗುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಆದರೆ ಅದು ಟುಸ್ ಬಾಂಬ್ ಆಗಿದೆ ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ,ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪುರಸಭೆಯ ನೂತನ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ ಅವರನ್ನು ಅಭಿನಂದಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಾಸಕರ ಸೂಚನೆಯಂತೆ ಕಾಂಗ್ರೆಸ್ ಸರ್ವ ಸದಸ್ಯರು ಒಮ್ಮತದಿಂದ ಈ ಫಲಿತಾಂಶ ಬಂದಿದೆ. ಕೆಲವು ಜನರಿಗೆ ಮಾತನಾಡುವ ಚಟ ಇರುತ್ತದೆ. ಟುಸ್ ಬಾಂಬ್ ಆಗಿದೆ. ಕಾಂಗ್ರೆಸ್ ಸರ್ಕಾರ ಇದ್ದು ಸಿಎಂ ಸಿದ್ಧರಾಮಯ್ಯನವರು, ನಗರಾಭಿವೃದ್ಧಿ ಸಚಿವರಿಂದ ವಿಶೇಷ ಅನುದಾನ ತಂದು ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದರು.
ಎಪಿಎಂಸಿ ಮಾಜಿ ಸದಸ್ಯ ವಾಯ್.ಎಚ್.ವಿಜಯಕರ್, ಪುರಸಭೆ ಮಾಜಿ ಸದಸ್ಯ ಕಾಮರಾಜ ಬಿರಾದಾರ ಮಾತನಾಡಿ, ಹೋರಾಟಗಾರರಿಗೆ ಕಾಂಗ್ರೆಸ್ ಪಕ್ಷದಿಂದ ಆದ್ಯತೆ ನೀಡಲಾಗಿದೆ.ಅಭಿವೃದ್ಧಿ ವಿಷಯವಾಗಿ ಗೊಳಸಂಗಿ, ದೇಗಿನಾಳ ಅವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಶಾಸಕರು,ಕಾಮರಾಜ ಗೆಳೆಯರ ಬಳಗ,ಅಸ್ಕಿ ಫೌಂಡೇಶನ್ ಪದಾಧಿಕಾರಿಗಳು ಗೊಳಸಂಗಿ ಅವರ ಬೆನ್ನಿಗಿದ್ದಾರೆ ಎಂದರು.
ಇದನ್ನೂ ಓದಿ: ಪರೋಕ್ಷವಾಗಿ ನಡಹಳ್ಳಿಗೆ ನಾಡಗೌಡರ ಪ್ರತ್ಯುತ್ತರ (ವಿಡಿಯೋ ನೋಡಿ)
ಅಸ್ಕಿ ಫೌಂಡೇಶನ್ ಉಪಾಧ್ಯಕ್ಷ ವೀರೇಶಗೌಡ ಅಸ್ಕಿ, ಮುಖಂಡರಾದ ಸದಾಶಿವ ಮಠ, ಸಂಗಪ್ಪ ಮೇಲಿನಮನಿ, ಟಿ.ವಿಜಯಭಾಸ್ಕರ್, ಸೋಮನಗೌಡ ಮೇಟಿ, ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶೋಭಾ ಶೆಳ್ಳಗಿ, ಮಾಜಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ,ಅಕ್ಷತಾ ಚಲವಾದಿ ಇದ್ದರು.
Muddebihal: ಬಿಜೆಪಿಯವರೇ ಪುರಸಭೆ ಅಧ್ಯಕ್ಷ ಹೇಳಿಕೆ ಟುಸ್ ಬಾಂಬ್-ಸಿ.ಬಿ.ಅಸ್ಕಿ ವ್ಯಂಗ್ಯ pic.twitter.com/xI2v8T9rl5
— dcgkannada (@dcgkannada) September 11, 2024