ಮುದ್ದೇಬಿಹಾಳ : ಪಿಡಬ್ಲ್ಯೂಡಿ ಇಲಾಖೆಯಿಂದ ಪರವಾನಿಗೆಯನ್ನು ಪಡೆದುಕೊಂಡು ನಿಡಗುಂದಿ ಮುದ್ದೇಬಿಹಾಳ ರಾಜ್ಯ ಹೆದ್ದಾರಿ-161 ಹಾಗೂ ಶಿರಾಡೋಣ -ಲಿಂಗಸಗೂರು ರಾಜ್ಯ ಹೆದ್ದಾರಿ- 41 ನೇ ರಸ್ತೆಯ ಅಂಚಿನಲ್ಲಿ ಪಿಡಬ್ಲ್ಯೂಡಿ ಇಲಾಖೆಯು ನಿಯಮಾವಳಿಗಳನ್ನು ಉಲ್ಲಂಘಿಸಿ ರಸ್ತೆ ಅಗೆದ ಖಾಸಗಿ ಕಂಪನಿಯ ನೌಕರರ ವಿರುದ್ಧ ಇಲ್ಲಿನ ಪೊಲೀಸ್ ಠಾಣೆಯಲ್ಲಿ PWD ಇಲಾಖೆಯ ಎಇಇ ಸಂಗಮೇಶ ಶಿವನಗುತ್ತಿ ಪ್ರಕರಣ ದಾಖಲಿಸಿದ್ದಾರೆ.
Join Our Telegram: https://t.me/dcgkannada
ಆಲಮಟ್ಟಿ ರಸ್ತೆಯಲ್ಲಿ ಬರುವ PWD ರಸ್ತೆಯನ್ನು ಅನುಮತಿ ನೀಡುವ ಕಾಲಕ್ಕೆ ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸಿ ಕೆಲವು ಜೆಸಿಬಿ ಯಂತ್ರಗಳ ಸಹಾಯದಿಂದ ಇಲಾಖೆಗೆ ಮೋಸ ಮಾಡಿ ರಸ್ತೆ ಅಗೆದು ರಾಜ್ಯ ಹೆದ್ದಾರಿಗಳ ಸುರಕ್ಷತೆಯನ್ನು ಕಡಿಮೆಯಾಗುವಂತೆ ಮಾಡಿ ಹಾಗೂ ಸದರಿ ಅಗೆದ ಮಣ್ಣನ್ನು ರಸ್ತೆಯ ಮೇಲೆ ಹಾಕಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಸಿದ್ದಾರೆ ಎಂದು ನವದೆಹಲಿ ಪಿ2ಪಿ ನೆಟ್ವರ್ಕ್ ಪ್ರೈವೇಟ್ ಲಿಮಿಟೆಡ್ ಕಂಪನಿ ನೌಕರರಾದ ಗುಜರಾತ್‌ನ ಅಬ್ದುಲ್, ಬ.ಬಾಗೇವಾಡಿಯ ಅನಿಲ್ ಎಂಬುವರ ಮೇಲೆ ಆ.20 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Muddebihal news: ಅಪೂರ್ಣ ಸೇತುವೆ ಕಾಮಗಾರಿ; ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಅಡಿ ಮಂಜೂರಾತಿಗೆ ಪತ್ರ