ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಸಮೀಪದಲ್ಲಿ ಬರುವ ಅಮರೇಶ್ವರ ದೇವಸ್ಥಾನ ಹತ್ತಿರ ಇರುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪೂರ್ವ ಕಾಲುವೆ ಅಡಿಯಲ್ಲಿ ಬರುವ ವಿತರಣಾ ಕಾಲುವೆ 13ಎ ಕಿ.ಮೀ.10.60ರಲ್ಲಿ ಕಾಲುವೆ ಬ್ರಿಡ್ಜ್ ನಿರ್ಮಾಣ ಮಾಡಲು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಮಂಜೂರಾತಿ ನೀಡುವಂತೆ ಕೆಆರ್‌ಡಿಸಿಎಲ್ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಜಿಲ್ಲಾಧಿಕಾರಿಗೆ ಬುಧವಾರ ಪತ್ರ ಬರೆದಿದ್ದಾರೆ.
Join Our Telegram: https://t.me/dcgkannada
ನಾಲ್ಕು ಹಳ್ಳಿಗಳ ರೈತಾಪಿ ಜನರಿಗೆ ನೀರಾವರಿಗೆ ಅನುಕೂಲ ಒದಗಿಸುವ ಈ ಯೋಜನೆಯ ಬಾಕಿ ಕಾಮಗಾರಿ ಆರಂಭಕ್ಕೆ ಅಗತ್ಯವಿರುವ 35 ಲಕ್ಷ ರೂ.ಗಳನ್ನು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಮಂಜೂರಾತಿ ನೀಡಿ ಕೆ.ಆರ್.ಐ.ಡಿ.ಎಲ್ ವಿಭಾಗಕ್ಕೆ ವಹಿಸುವಂತೆ ಡಿಸಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಿರುವ ಹೋರಾಟಗಾರ ಶಿವಾನಂದ ವಾಲಿ, ಸದರಿ ಕಾಮಗಾರಿಯ ಅಗತ್ಯತೆಯನ್ನು ಮನಗಂಡು ಸರ್ಕಾರದ ಅನುದಾನಕ್ಕೆ ಕಾಯದೇ ಶಾಸಕರು ಮುತುವರ್ಜಿ ವಹಿಸಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಸುವಂತೆ ಡಿಸಿಗೆ ಪತ್ರ ಬರೆದಿದ್ದಕ್ಕೆ ರೈತರ ಪರವಾಗಿ ಅಭಿನಂದಿಸಿದ್ದು ಶೀಘ್ರ ಜಿಲ್ಲಾಧಿಕಾರಿಗಳು ಈ ಕಾಮಗಾರಿಗೆ ಮಂಜೂರಾತಿ ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: HDK vs Siddaramaiah: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅರೆಸ್ಟ್? ಸ್ಫೋಟಕ ಬಾಂಬ್ ಸಿಡಿಸಿದ ಸಿಎಂ ಸಿದ್ದರಾಮಯ್ಯ!