ಮುದ್ದೇಬಿಹಾಳ : ಪಟ್ಟಣದ ಸರಕಾರಿ ಉರ್ದು ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆ ಇದ್ದು ಹೆಚ್ಚುವರಿ ಕೊಠಡಿಗಳನ್ನು ತ್ವರಿತವಾಗಿ ನಿರ್ಮಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್, ಬಿಇಒ ಹಾಗೂ Muddebihal ಪುರಸಭೆಗೆ ಎಸ್ಡಿಎಂಸಿ ಪದಾಧಿಕಾರಿಗಳು ಶುಕ್ರವಾರ ಪ್ರತ್ಯೇಕ ಮನವಿ ಪತ್ರ ಸಲ್ಲಿಸಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ಎಸ್‌ಡಿಎಂಸಿ ಅಧ್ಯಕ್ಷ ಮಹ್ಮದರಫೀಕ ನಾಗರಾಳ ಮಾತನಾಡಿ, ಒಟ್ಟು 380 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಉರ್ದು ಮತ್ತು ಇಂಗ್ಲಿಷ್ ವಿಭಾಗಗಳು ಇದ್ದು ಉರ್ದು ಮಾಧ್ಯಮದ 8 ತರಗತಿಗಳು ಮತ್ತು ಇಂಗ್ಲಿಷ್ ಮಾಧ್ಯಮದ 4 ತರಗತಿಗಳು ನಡೆಯುತ್ತಿವೆ.ಜೊತೆಗೆ ಎಸ್‌ಡಿಎಮ್‌ಸಿ ಸಹಾಯದಿಂದ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳು ನಡೆಯುತ್ತಿವೆ. ಮಕ್ಕಳಿಗೆ ಪಾಠ ಬೋಧನೆ ಮಾಡಲು ಒಟ್ಟು 13 ಕೊಠಡಿಗಳ ಅವಶ್ಯಕತೆ ಇದೆ. ಆದರೆ ಇರುವ ಕೊಠಡಿಗಳಲ್ಲಿ ನಾಲ್ಕು ಕೊಠಡಿಗಳು ಶಿಥಿಲಗೊಂಡಿವೆ ಎಂದು ತಿಳಿಸಿದರು.
ಎಲ್ಲಾ ತರಗತಿಗಳನ್ನು ನಡೆಸಲು ತೊಂದರೆಯಾಗುತ್ತಿದೆ. ಜೊತೆಗೆ ಬಿಸಿಯೂಟಿ ಕೊಠಡಿಯು ಸಹ ಶಿಥಿಲವಾಗಿದ್ದು, ಮಕ್ಕಳ ಆಹಾರ ತಯಾರಿಕೆ ಮಾಡಲು ತೊಂದರೆಯಾಗುತ್ತಿದೆ. ಈ ವ್ಯವಸ್ಥೆ ಪಾಲಕರು ತಮ್ಮ ಮಕ್ಕಳ ಟಿಸಿ ತೆಗೆದುಕೊಂಡು ಹೋಗಲು ಕಾರಣವಾಗುತ್ತಿದೆ. ಹೊಸದಾಗಿ ಐದು ಕೊಠಡಿಗಳನ್ನು ನಿರ್ಮಿಸಿಕೊಡಬೇಕು ಎಂದು ಮನವಿ ಮಾಡಿದರು.
ಈ ಬೇಡಿಕೆಗೆ ಸ್ಪಂದಿಸದಿದ್ದರೆ ಶಾಲೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಶೀರಸ್ತೇದಾರ ಎಂ.ಎಸ್.ಬಾಗೇವಾಡಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಎಸ್‌ಡಿಎಂಸಿ ಸದಸ್ಯರಾದ ನಜೀರಅಹ್ಮದ್ ಮಮದಾಪುರ, ಲಾಡ್ಲೆಮಶ್ಯಾಕ ನದಾಫ, ರಿಯಾಜ್ ದೇಸಾಯಿ, ಅಬ್ದುಲ್‌ರಜಾಕ ಇಲಕಲ್, ಇರ್ಫಾನ್ ದೇಸಾಯಿ, ಮಹ್ಮದಹುಸೇನ ಪಠಾಣ, ಸುಲೇಮಾನ ನಾಯ್ಯೋಡಿ, ಉಮರ್‌ಫಾರೂಕ ಕೂಡಗಿ, ದಾವಲ್ ಗೊಳಸಂಗಿ, ಸಮಿಉಲ್ಲಾ ಹುಣಚಗಿ, ಸದ್ದಾಂ ನದಾಫ್, ಝುಬೈರ ಸಾತಿಹಾಳ್, ಝುಬೈರ ಮುದಗಲ್, ಸಯೀದ್ ಹುಣಚಗಿ ಇದ್ದರು.
ಇದನ್ನೂ ಓದಿ: Crime News: ಗ್ರಾಪಂ ಸಿಬ್ಬಂದಿಗೆ ಚಪ್ಪಲಿಯಿಂದ ಹಲ್ಲೆ ಮಾಡಿದ ಉಪಾಧ್ಯಕ್ಷೆ!